HomeKarnatakaಕೆಲಸ ಮಾಡದೆ ಮನೆಯಲ್ಲೇ ಕುಳಿತಿದ್ದ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೊಲೀಸರ ಅತಿಥಿಯಾದ ಮಹಿಳೆ

ಕೆಲಸ ಮಾಡದೆ ಮನೆಯಲ್ಲೇ ಕುಳಿತಿದ್ದ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೊಲೀಸರ ಅತಿಥಿಯಾದ ಮಹಿಳೆ

ಬೆಂಗಳೂರು: ಕೆಲಸ ಇಲ್ಲದೇ ಮನೆಯಲ್ಲಿಯೇ ಖಾಲಿ ಕುಳಿತಿದ್ದ ಗಂಡನಿಗೆ ಬುದ್ಧಿ ಕಲಿಸಲು ಹೋದ ಪತ್ನಿ ಪೊಲೀಸರ ಅತಿಥಿಯಾದ ವಿಚಿತ್ರ ಘಟನೆ ನಡೆದಿದೆ.

ಎಷ್ಟೇ ಬುದ್ಧಿ ಹೇಳಿದರೂ ಪತಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇದರಿಂದ ಬೇಸತ್ತ ಮಹಿಳೆ ಏನಾದರೂ ಮಾಡಿ ಪತಿಯನ್ನು ಕೆಲಸಕ್ಕೆ ಕಳುಹಿಸಲೇ ಬೇಕು ಎಂದುಕೊಂಡು ಭಾರಿ ನಾಟವಾಡಿದ್ದಾಳೆ. ತನ್ನ ಚಿನ್ನಾಭರಣ ಕಳುವಾಗಿದೆ ಎಂದು ಹೇಳಿದ್ದಾಳೆ. ಕಷ್ಟ ಎಂಬುದು ಅರಿವಾದರೆ ಆಗಲಾದರೂ ಗಂಡ ಕೆಲಸಕ್ಕೆ ಹೋಗಲು ಶುರುಮಾಡಬಹುದು ಎಂಬುದು ಹೆಂಡತಿಯ ಪ್ಲಾನ್ ಆಗಿತ್ತು. ಆದರೆ ಎಂತಹ ಪೇಚಿಗೆ ಸಿಲುಕಿದ್ದಾಳೆ ನೋಡಿ ಮಹಿಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಚಿನ್ನಾಭರಣಗಳನ್ನು ಸ್ನೇಹಿತರಿಗೆ ಹೇಳಿ ಕಳುವು ಮಾಡಿಸಿ ಬಳಿಕ ತಾನೇ ಒಡವೆ ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ತನಿಖೆ ವೇಳೆ ಮಹಿಳೆಯ ಕಳ್ಳಾಟ ಬಯಲಾಗಿದೆ.

ಬ್ಯಾಂಕ್ ನಿಂದ 109 ಗ್ರಾಂ ಚಿನ್ನವನ್ನು ಬಿಡಿಸಿಕೊಂಡು ಬಂದು ಗಾಡಿಯ ಡಿಕ್ಕಿಯಲ್ಲಿಟ್ಟಿದ್ದ ಮಹಿಳೆ ಬಳಿಕ ಮಕ್ಕಳನ್ನು ಶಾಲೆಯಿಂದ ಟ್ಯೂಷನ್ ಗೆ ಬಿಟ್ಟಿದ್ದಳು. ಬಳಿಕ ಮಲ್ಲೇಶ್ವರಂ ನಲ್ಲಿರುವ ತನ್ನ ಅತ್ತಿಗೆ ಮನೆಗೆ ಹೋಗಿದ್ದಳು. ಮಕ್ಕಳ ಟ್ಯೂಷನ್ ಮುಗಿಯುತ್ತಿದ್ದಂತೆ ಮಕ್ಕಳನ್ನು ಕರೆದುಕೊಂಡು ಮನೆಗೆ ಬಂದ ಮಹಿಳೆ ಸ್ಕೂಟರ್ ಕೀಯನ್ನು ಬೈಕ್ ಫುಟ್ ಮ್ಯಾಟ್ ಮೇಲೆ ಇಟ್ಟಿದ್ದಳು. ಬಳಿಕ ತನ್ನ ಗೆಳೆಯ ಧನಂಜಯ್ ಎಂಬಾತನಿಗೆ ಕರೆ ಮಾಡಿ, ಕಳ್ಳತನ ಮಾಡಲು ಹೇಳಿದ್ದಳು. ಈ ವೇಳೆ ಆತ ತನ್ನ ಇನ್ನೋರ್ವ ಸ್ನೇಹಿತನ ಜೊತೆ ಬಂದು ಬೈಕ್ ಸಮೇತ ಒಡವೆ ತೆಗೆದುಕೊಂಡು ಹೋಗಿದ್ದ.

ಬಳಿಕ ಮಲ್ಲೇಶ್ವರಂ ಠಾಣೆಗೆ ತೆರಳಿ ಮಹಿಳೆ ಬೈಕ್ ಹಾಗೂ ಚಿನ್ನ ಕಳುವಾಗಿದೆ ಎಂದು ದೂರು ನೀಡಿದ್ದಳು. ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಅಲ್ಲದೇ ಮಹಿಳೆಯ ಸ್ನೇಹಿತ ಧನಂಜಯ್ ಹಾಗೂ ರಾಕೇಶ್ ನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಇಬ್ಬರ ಮೊಬೈಲ್ ಚಾಟಿಂಗ್ ಪರಿಶೀಲಿಸಿದಾಗ ದೂರು ನೀಡಿದ್ದ ಮಹಿಳೆ ಜೊತೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಈ ವೇಳೆ ಮಹಿಳೆಯ ಕಳ್ಳತನದ ನಾಟಕ ಬಯಲಾಗಿದೆ. ಮಹಿಳೆಯನ್ನು ವಿಚಾರಿಸಿದಾಗ ಗಂಡನಿಗೆ ಬುದ್ಧಿಕಲಿಸಲು ಹೋಗಿ ಪೇಚಿಗೆ ಸಿಲುಕಿದ್ದಾಗಿ ತಿಳಿಸಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

Most Popular