HomeKarnatakaBIG NEWS: ನಂಜುಂಡೇಶ್ವರನ ದರ್ಶನಕ್ಕೆಂದು ಬಂದ ಮಹಿಳೆ; ಕಪಿಲಾ ನದಿಯಲ್ಲಿ ಶವವಾಗಿ ಪತ್ತೆ

BIG NEWS: ನಂಜುಂಡೇಶ್ವರನ ದರ್ಶನಕ್ಕೆಂದು ಬಂದ ಮಹಿಳೆ; ಕಪಿಲಾ ನದಿಯಲ್ಲಿ ಶವವಾಗಿ ಪತ್ತೆ

ಮೈಸೂರು: ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ ದರ್ಶನ ಪಡೆದು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಹಿಳೆ ಕಪಿಲಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ಮಂಜುಳಾ (50) ಮೃತ ಮಹಿಳೆ. ನವೆಂಬರ್ 7ರಂದು ಮೈಸೂರಿನ ಸುಭಾಷ್ ನಗರದ ಮನೆಯಿಂದ ಹೊರಟ ಮಹಿಳೆ ನಂಜನಗೂಡಿಗೆ ತೆರಳಿ ನಂಜುಂಡೇಶ್ವರ ಸ್ವಾಮಿ ದರ್ಶನ ಪಡೆದು ಬರುವುದಾಗಿ ಹೇಳಿದ್ದರು. ಮೂರು ದಿನಗಳಾದರೂ ಮಹಿಳೆ ವಾಪಾಸ್ ಆಗಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯವರು ಹುಡುಕಾಟ ನಡೆಸಿದ್ದರು. ಆದರೂ ಮಹಿಳೆ ಪತ್ತೆಯಾಗಿರಲಿಲ್ಲ. ಇಂದು ಕಪಿಲಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಹಿಳೆ ಮಂಜುಳಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular