HomeInternationalಜೀವನ ನಿರ್ವಹಣೆಗೆ ದಿನಕ್ಕೆರೆಡು ಕೆಲಸ ಮಾಡುತ್ತಿದ್ದ ಮಹಿಳೆಗೆ ಖುಲಾಯಿಸಿದ ಅದೃಷ್ಟ; 100 ರೂ. ಹೂಡಿಕೆಗೆ ಬಂತು...

ಜೀವನ ನಿರ್ವಹಣೆಗೆ ದಿನಕ್ಕೆರೆಡು ಕೆಲಸ ಮಾಡುತ್ತಿದ್ದ ಮಹಿಳೆಗೆ ಖುಲಾಯಿಸಿದ ಅದೃಷ್ಟ; 100 ರೂ. ಹೂಡಿಕೆಗೆ ಬಂತು 2 ಕೋಟಿ ರೂಪಾಯಿ….!

ಬದುಕು ಕಟ್ಟಿಕೊಳ್ಳಲು ಥೈಲ್ಯಾಂಡ್ ನಿಂದ ಯುನೈಟೆಡ್ ಕಿಂಗ್ಡಂ ಗೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಜೀವನ ನಿರ್ವಹಣೆಗೆ ಒಟ್ಟು 14 ಗಂಟೆಗಳ ಕಾಲ ದಿನಕ್ಕೆ ಎರಡು ಕೆಲಸ ಮಾಡುತ್ತಿದ್ದು, ಇದೀಗ ಅವರಿಗೆ ಅದೃಷ್ಟ ಖುಲಾಯಿಸಿದೆ.

ಅರಾಯ ಕರ್ರಿ ಎಂಬ ಈ ಮಹಿಳೆ 106 ರೂಪಾಯಿ (€ 1) ಹೂಡಿಕೆಯಿಂದ ಬೆಟ್ಟಿಂಗ್ ಮಾಡಿದ್ದ ಸಂಖ್ಯೆಗೆ ಬರೋಬ್ಬರಿ 2.13 ಕೋಟಿ ರೂಪಾಯಿ (£ 200,000) ಲಭಿಸಿದೆ. ಇದೀಗ ಅರಾಯ ತನ್ನ ಕುಟುಂಬ ಸಮೇತ ತಾಯಿನಾಡು ಥೈಲ್ಯಾಂಡ್ ಗೆ ತೆರಳಲು ಸಜ್ಜಾಗಿದ್ದಾಳೆ.

ಈ ಬೆಟ್ಟಿಂಗ್ ಗೇಮ್ ನಲ್ಲಿ 1 ರಿಂದ 50 ಸಂಖ್ಯೆ ಒಳಗೆ ಆರು ಅಂಕಿಗಳನ್ನು ಹೊಂದಿಸಬೇಕಿದ್ದು, ವಿಜೇತರಿಗೆ ಭಾರಿ ಮೊತ್ತದ ಬಹುಮಾನ ಸಿಗುತ್ತದೆ. ಈ ಮೊದಲು ಅರಾಯ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕ್ಲೀನರ್ ಆಗಿ ಹಾಗೂ ರಾತ್ರಿ ರೆಸ್ಟೋರೆಂಟ್ ನಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ತನ್ನ ಈ ಕೆಲಸಗಳಿಗೆ ಗುಡ್ ಬೈ ಹೇಳಿ ಥೈಲ್ಯಾಂಡ್ ಗೆ ತೆರಳುತ್ತಿದ್ದು, ಈಗಾಗಲೇ ಅಲ್ಲಿ ಆಕೆಯ ಕುಟುಂಬಕ್ಕೆ ಮನೆ ಸಿದ್ದವಾಗುತ್ತಿದೆ ಎನ್ನಲಾಗಿದೆ. 40 ವರ್ಷದ ಅರಾಯಾ ತನ್ನ ಇನ್ನುಳಿದ ಜೀವನವನ್ನು ಕುಟುಂಬಸ್ಥರೊಂದಿಗೆ ಥೈಲ್ಯಾಂಡ್ ನಲ್ಲಿಯೇ ಕಳೆಯಲು ನಿರ್ಧರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular