HomeKarnatakaವಾಟ್ಸಾಪ್ ಸ್ಟೇಟಸ್ ನಲ್ಲಿ ಬಯಲಾಯ್ತು ಅತ್ತಿಗೆ, ಮೈದುನನ ಅಕ್ರಮ ಸಂಬಂಧ: ದುಡುಕಿನ ನಿರ್ಧಾರ ಕೈಗೊಂಡ ಮಹಿಳೆ...

ವಾಟ್ಸಾಪ್ ಸ್ಟೇಟಸ್ ನಲ್ಲಿ ಬಯಲಾಯ್ತು ಅತ್ತಿಗೆ, ಮೈದುನನ ಅಕ್ರಮ ಸಂಬಂಧ: ದುಡುಕಿನ ನಿರ್ಧಾರ ಕೈಗೊಂಡ ಮಹಿಳೆ ಆತ್ಮಹತ್ಯೆ

ಬೆಳಗಾವಿ: ಮೈದುನನ ಜೊತೆಗಿನ ಅಕ್ರಮ ಸಂಬಂಧ ಬಯಲಾಗಿದ್ದರಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.

ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಮಹಿಳೆಗೆ 7 ವರ್ಷದ ಹಿಂದೆ ಮೊರಬ ಗ್ರಾಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯ ತಮ್ಮ -ಮೈದುನನ ಜೊತೆಗೆ ಮಹಿಳೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಇಬ್ಬರ ನಡುವೆ ಕೆಲವು ದಿನಗಳಿಂದ ಅನೈತಿಕ ಸಂಬಂಧವಿದ್ದು, ಈ ವೇಳೆ ಇಬ್ಬರು ಫೋಟೋ ಕೊಂಡಿದ್ದಾರೆ.

ಅತ್ತಿಗೆ ಜೊತೆಗಿರುವ ಫೋಟೋ ಸೇರಿಸಿ ಮೈದುನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದಾನೆ. ಇದನ್ನು ನೋಡಿದ ಗ್ರಾಮದ ಕೆಲವು ಯುವಕರು ಮಹಿಳೆಯ ಪತಿಗೆ ವಿಷಯ ತಿಳಿಸಿದ್ದಾರೆ. ಆತ ಮನೆಗೆ ಹೋಗಿ ಪತ್ನಿಯೊಂದಿಗೆ ಜಗಳವಾಡಿದ್ದು, ನಂತರ ಹಿರಿಯರು ಸೇರಿ ಬುದ್ಧಿವಾದ ಹೇಳಿದ್ದಾರೆ. ಮಹಿಳೆಯನ್ನು ಆಕೆಯ ಅಕ್ಕನ ಮನೆಗೆ ಕಳುಹಿಸಿದ್ದು, ಗುಪ್ತವಾಗಿದ್ದ ಮೈದುನನ ಜೊತೆಗಿನ ಅಕ್ರಮ ಸಂಬಂಧ ಬಹಿರಂಗವಾಗಿದ್ದರಿಂದ ಮಹಿಳೆ ಅಕ್ಕನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಮೈದುನ ಮತ್ತು ಆತನ ಕುಟುಂಬದವರ ವಿರುದ್ಧ ದೂರು ದಾಖಲಾಗಿದ್ದು, ಅತ್ತಿಗೆ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಮೈದುನ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular