HomeLatest NewsBIG NEWS: ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕೆ ಸಾರ್ವಜನಿಕವಾಗಿ ವಿಚಾರಿಸಿ, ನಿಂದನೆ: ಮನನೊಂದ ಮಹಿಳೆ ಆತ್ಮಹತ್ಯೆ; ಮೂವರು ಅರೆಸ್ಟ್

BIG NEWS: ಸ್ನೇಹಿತನೊಂದಿಗೆ ಮಾತನಾಡಿದ್ದಕ್ಕೆ ಸಾರ್ವಜನಿಕವಾಗಿ ವಿಚಾರಿಸಿ, ನಿಂದನೆ: ಮನನೊಂದ ಮಹಿಳೆ ಆತ್ಮಹತ್ಯೆ; ಮೂವರು ಅರೆಸ್ಟ್

ತಿರುವನಂತಪುರಂ: ಸ್ನೇಹಿತನೊಂದಿಗೆ ಮಹಿಳೆ ಮಾತನಾಡಿದ್ದಕ್ಕೆ ಜನರ ಗುಂಪು ಆಕೆಯನ್ನು ಸಾರ್ವಜನಿಕವಾಗಿ ವಿಚಾರಿಸಿ ನಿಂದಿಸಿದ್ದಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ರಸೀನಾ ಮೃತ ಮಹಿಳೆ. ಪಿಣರಾಯಿ ಗ್ರಾಮದ ತನ್ನ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಸೀನಾ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದರು. ಇದನ್ನು ಕಂಡ ಗುಂಪೊಂದು ಆಕೆಯನ್ನು ಪ್ರಶ್ನಿಸಿದೆ. ಅಲ್ಲದೇ ಸ್ನೇಹಿತನನ್ನೂ ವಿಚಾರಣೆ ನಡೆಸಿದೆ. ಮಹಿಳೆಯನ್ನು ಗುಂಪು ನಿಂದಿಸಿದೆ. ಇದರಿಂದ ತೀವ್ರ ಅವಮಾನಕ್ಕೊಳಗಾದ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಕರಣ ಸಂಬಂಧ ಸೋಷಿಯ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular