ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ನಗರ ಠಾಣೆ ಇನ್ಸ್ ಪೆಕ್ಟರ್ ಲವ್ ಲೆಟರ್ ಕಳುಹಿಸಿ ಕಾಡಕೊಡುತ್ತಿದ್ದ ಮಹಿಳೆ ಯಾರೆಂಬುದು ಪತ್ತೆಯಾಗಿದ್ದು, ಆಕೆಯ ವಿರುದ್ಧ ಸಾಲು ಸಾಲು ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ.
ರಾಮಮೂರ್ತಿನಗರ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ಎಂಬುವವರಿಗೆ ತನ್ನನ್ನು ಪ್ರೀತಿಸುವಂತೆ ಮಹಿಳೆಯೊಬ್ಬಳು ಲೆಟರ್, ಸಾಲು ಸಾಲು ಮೆಸೇಜ್ ಗಳನ್ನು ಮಾಡಿ ಪೀಡಿಸುತ್ತಿದ್ದಳು. ತನನ್ನನ್ನು ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಳು. ಆದರೆ ಇದ್ಯಾವುದಕ್ಕೂ ಬಗ್ಗದ ಇನ್ಸ್ ಪೆಕ್ಟರ್, ಮಹಿಳೆ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಅಲ್ಲದೇ ಮಹಿಳೆ ಬಗ್ಗೆ ಪರಿಶೀಲನೆ ನಡೆಸಿದಾಗ ಪೊಲೀಸರೇ ದಂಗಾಗುವಂತಹ ಮಾಹಿತಿಗಳು ಬಹಿರಂಗವಾಗಿವೆ.
ಮಹಿಳೆ ಹೆಸರ್ ಸಂಜನಾ @ ವನಜಾ. ಆಕೆ ವಿರುದ್ಧ ಹನಿಟ್ರ್ಯಾಪ್, ಬ್ಲ್ಯಾಕ್ ಮೇಲ್ ಕೇಸಗಳು ದಾಖಲಾಗಿವೆ. ಎರಡು ವರ್ಷಗಳ ಹಿಂದೆ ಕಾಂಟ್ರ್ಯಾಕ್ಟರ್ ಸತೀಶ್ ರೆಡ್ಡಿ ಎಂಬುವವರನ್ನು ಪರಿಚಯಿಸಿಕೊಂಡು ಅವರನ್ನು ಊಟಕ್ಕೆಂದು ಮನೆಗೆ ಕರೆಸಿ ಸಲುಗೆ ಬೆಳೆಸಿದ್ದಳು. ಆವರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಫೋಟೋ, ವಿಡೀಯೋ ಇಟ್ಟುಕೊಂಡು ಬ್ಲ್ಯಾಅಕ್ ಮೇಲ್ ಮಾಡಿ ಚಿನ್ನಾಭರಣ, ಹಣ ವಸೂಲಿ ಮಾಡಿದ್ದಳು. ಅಲ್ಲದೇ ಎರಡು ಅಂತಸ್ತಿನ ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಕಿರುಕುಳ ನೀಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಠಾಣೆಯಲ್ಲಿ ಮಹಿಳೆ ಸಂಜನಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
2018ರಲ್ಲಿ ಹೆಡ್ ಕಾನ್ಸ್ ಟೇಬಲ್ ಜಗದೀಶ್ ಎಂಬುವವರನ್ನು ಪರಿಯಿಸಿಕೊಂಡು ತನನ್ನು ಮದುವೆಯಾಗುವಂತೆ ಹಿಂದೆಬಿದ್ದಿದ್ದಳು. ಈ ಘಟನೆ ಬಳಿಕ ಹೆಡ್ ಕಾನ್ಸ್ ಟೇಬಲ್ ತನಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸುಳ್ಕು ಆರೋಪ ಎಂಬುದನ್ನು ಸಾಬೀತುಪಡಿಸಿಕೊಂಡು ಬಿ ರಿಪೋರ್ಟ್ ಸಲ್ಲಿಸಿದ್ದರು. ತನಿಖೆ ವೇಳೆ ಇದೇ ರೀತಿ ಸಂಜನಾ ಹಲವರಿಗೆ ಹನಿಟ್ರ್ಯಾಪ್ ಮಾಡಿರುವುದು, ಶ್ರೀಮಂತರಿಗೆ ಗಾಳ ಹಾಕಿರುವುದು ಪತ್ತೆಯಾಗಿತ್ತು.

