HomeKarnatakaBIG NEWS: ಪತಿಯೊಂದಿಗೆ ಹೋದ ಪ್ರಿಯತಮೆ: ಸಿಟ್ಟಿಗೆದ್ದ ಪ್ರಿಯಕರನಿಂದ ಘೋರ ಕೃತ್ಯ: ಮಹಿಳೆಯನ್ನು ಕೊಂದು ಕೃಷಿ...

BIG NEWS: ಪತಿಯೊಂದಿಗೆ ಹೋದ ಪ್ರಿಯತಮೆ: ಸಿಟ್ಟಿಗೆದ್ದ ಪ್ರಿಯಕರನಿಂದ ಘೋರ ಕೃತ್ಯ: ಮಹಿಳೆಯನ್ನು ಕೊಂದು ಕೃಷಿ ಹೊಂಡಕ್ಕೆ ಎಸೆದ ಕಿರಾತಕ!

ಚಿಕ್ಕಮಗಳೂರು: ತನ್ನನ್ನು ಬಿಟ್ಟು ಮತ್ತೆ ಪತಿಯೊಂದಿಗೆ ಹೋಗಿದ್ದಕ್ಕೆ ಮಹಿಳೆಯೊಬ್ಬಳನ್ನು ಆಕೆಯ ಪ್ರಿಯತಮ ಬರ್ಬರವಾಗಿ ಹತ್ಯೆಗೈದು, ಕೃಷಿಹೊಂಡಕ್ಕೆ ಎಸೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ತೃಪ್ತಿ ಕೊಲೆಯಾಗಿರುವ ಮಹಿಳೆ. ಚಿರಂಜೀವಿ ಮಹಿಳೆಯನ್ನು ಕೊಲೆಗೈದಿರುವ ಆರೋಪಿ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿಯಲ್ಲಿ ಈ ಘಟನೆ ನಡೆದಿದೆ.

ಅದಾಗಲೇ ವಿವಾಹವಾಗಿದ್ದ ತೃಪ್ತಿ ಎಂಬ ಮಹಿಳೆಗೆ ಫೇಸ್ ಬುಕ್ ಮೂಲಕ ಚಿರಂಜೀವಿ ಎಂಬಾತ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿದೆ. ತಿಂಗಳ ಹಿಂದಷ್ಟೇ ತೃಪ್ತಿ, ಪತಿಯನ್ನು ಬಿಟ್ಟು ಪ್ರಿಯಕರ ಚಿರಂಜೀವಿ ಜೊತೆ ಎಸ್ಕೇಪ್ ಆಗಿದ್ದಳು. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆತಂದಿದ್ದರು. ಬಳಿಕ ರಾಜಿ ಪಂಚಾಯಿತಿ ಮಾಡಿಸಿ, ತೃಪ್ತಿಯನ್ನು ಆಕೆಯ ಪತಿಯೊಂದಿಗೆ ಕಳುಹಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೃಪ್ತಿ ಪತಿಯೊಂದಿಗೆ ಜೀವನ ನಡೆಸುತ್ತಿದ್ದಂತೆ ಸಿಟ್ಟಿಗೆದ್ದ ಪ್ರಿಯಕರ ಚಿರಂಜೀವಿ, ಮನೆಗೆ ನುಗ್ಗಿ ತೃಪ್ತಿಯನ್ನು ಬರ್ಬರವಾಗಿ ಕೊಲೆಗೈದು, ಬಳಿಕ ಮೃತದೇಹವನ್ನು ಕೃಷಿ ಹೊಂಡಕ್ಕೆ ಎಸೆದು ಪರಾರಿಯಾಗಿದ್ದಾನೆ.

ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular