HomeKarnatakaಒಂಟಿಯಾಗಿ ವಾಸವಿದ್ದ ಮಹಿಳೆ ಸುಲಿಗೆ: 12 ಲಕ್ಷ ರೂ. ಮೌಲ್ಯದ ಸ್ವತ್ತು ಸಹಿತ ನಾಲ್ವರು ಅರೆಸ್ಟ್

ಒಂಟಿಯಾಗಿ ವಾಸವಿದ್ದ ಮಹಿಳೆ ಸುಲಿಗೆ: 12 ಲಕ್ಷ ರೂ. ಮೌಲ್ಯದ ಸ್ವತ್ತು ಸಹಿತ ನಾಲ್ವರು ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಆಗುಂಬೆ ಠಾಣಾ ವ್ಯಾಪ್ತಿಯ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯ ಸುಲಿಗೆ ಪ್ರಕರಣದ ಆರೋಪಿತರನ್ನು ಬಂಧಿಸಲಾಗಿದೆ.

ದಿನಾಂಕ:21/04/2026 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕುಂದ ಗ್ರಾಮದ ಒಂಟಿ ಮಹಿಳೆ ವಾಸವಿದ್ದ ಮನೆಯಲ್ಲಿ, ಅಪರಿಚಿತ ಆರೋಪಿತರಿಂದ ಸುಲಿಗೆಯಾಗಿದ್ದು  ಈ ಬಗ್ಗೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದರಿ ಪ್ರಕರಣದಲ್ಲಿ ಆರೋಪಿಗಳು ಹಾಗೂ ಮಾಲು ಪತ್ತೆಗಾಗಿ ಎಸ್ಪಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ನೇತೃತ್ವದಲ್ಲಿ ಮಾಳೂರು ಸಿಪಿಐ ರಾಜಶೇಖರ್ ಎಲ್., ಪಿಐ ತೀರ್ಥಹಳ್ಳಿ ಪೊಲೀಸ್ ಠಾಣೆ ಇಮ್ರಾನ್ ಬೇಗ್ ಅವರ ನೇತೃತ್ವದಲ್ಲಿ  ಆಗುಂಬೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವನಗೌಡ , ಮಾಳೂರು ಪಿ.ಐ.ಎಸ್ ಸುನಿಲ್ , ಸಿಬ್ಬಂದಿಯವರಾದ ಲಿಂಗೇಗೌಡ, ಸುರಕ್ಷಿತ್, ಕಿರಣ್ ಕುಮಾರ, ಕುಮಾರ್, ಜೋಸೆಫ್ ಮ್ಯಾಥ್ಯೂ, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್, ಉಲ್ಲಾಸ್ ನಾಯ್ಕ, ಪ್ರಶಾಂತ.ಓ, ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ರವಿ, ಅರವಿಂದ್, ಚಾಲಕರಾದ ಅವಿನಾಶ್, ತಾಂತ್ರೀಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ್ ಮತ್ತು ಇಂದ್ರೇಶ್ ಅವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ತನಿಖಾ ತಂಡವು  ಪ್ರಕರಣದ ಆರೋಪಿತರಾದ   ಭರತ್.ವೈ @ ಭಟ್ಟ, 25 ವರ್ಷ, ವಾಸ ಜೇಡಿಕಟ್ಟೆ, ಹೊಸೂರು, ಕವಲಗುಂದಿ ಪೋಸ್ಟ್, ಭದ್ರಾವತಿ (ತಾ), ಅಶೋಕ, 28 ವರ್ಷ, ಜಾವಳ್ಳಿ ಗ್ರಾಮ, ಶಿವಮೊಗ್ಗ, ಮಹಮ್ಮದ್ ಇಬ್ರಾಹಿಂ ಮೀರಾ @ ಟಕ್ಕರ್, 24 ವರ್ಷ, ವೀರಾಪುರ, ಭದ್ರಾಕಾಲೋನಿ, ಭದ್ರಾವತಿ (ತಾ) ಮತ್ತು ಪಾರ್ತಿಪ್, 25 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ (ತಾ) ರವರುಗಳನ್ನು ದಸ್ತಗಿರಿ ಮಾಡಿದೆ.

ಆರೋಪಿತರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ  70 ಗ್ರಾಂ ಬಂಗಾರದ ಆಭರಣಗಳು ಅಂದಾಜು ಮೌಲ್ಯ 10 ಲಕ್ಷ 80,000/-ರೂಗಳು, 56 ಗ್ರಾಂ ಬೆಳ್ಳಿ ವಸ್ತುಗಳು, ಅಂದಾಜು ಮೌಲ್ಯ 16,700/-ರೂಗಳು, ಕೃತ್ಯಕ್ಕೆ ಬಳಸಿದ ಸ್ಕೂಟಿ ಅಂದಾಜು ಮೌಲ್ಯ 50,000/- ರೂ., ಕೃತ್ಯಕ್ಕೆ ಬಳಸಿದ ಇನ್ನೊಂದು ಸ್ಕೂಟಿ, ಅಂದಾಜು ಮೌಲ್ಯ 50,000/- ರೂಗಳು ಸೇರಿ ಒಟ್ಟು 11 ಲಕ್ಷ 96700 ರೂ. ಮಾಲನ್ನು ವಶಪಡಿಸಿಕೊಂಡಿರುತ್ತಾರೆ.

ಸದರಿ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿ ಮತ್ತು ಮಾಲು ಪತ್ತೆ ಮಾಡಿದ  ತನಿಖಾ ತಂಡಕ್ಕೆ ಪೊಲೀಸ್ ಅಧೀಕ್ಷಕ ನಿಖೀಲ್ ಪ್ರಶಂಶಿಸಿ ಅಭಿನಂದಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular