HomeIndiaಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಕೆಲವೊಮ್ಮೆ ಹೆಚ್ಚೆಚ್ಚು ಲೈಕ್ಸ್​ ಪಡೆಯಲು ಮಾಡಬಾರದ ಎಡವಟ್ಟನ್ನೆಲ್ಲಾ ಮಾಡಿ ಫಜೀತಿಗೆ ಸಿಲುಕುತ್ತಾರೆ. ನಂತರ ಫಜೀತಿ ಪಟ್ಟ ವಿಡಿಯೋಗಳೇ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಹೊಳೆಯ ಮೇಲಿದ್ದ ಮರದ ದಿಮ್ಮಿಯ ಮೇಲೆ ಯುವತಿಯೊಬ್ಬರು ಯೋಗಾಸನ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಇದಾಗಿದೆ.

ಈ ಮೂಲಕ ಸಾಕಷ್ಟು ಹೆಸರು ಮಾಡಲು ನೋಡಿದ್ದಳು ಯುವತಿ. ಆದರೆ ಆದದ್ದೇ ಬೇರೆ. ಬೇರೆ ಬೇರೆ ರೀತಿಯ ಭಂಗಿಯನ್ನು ಪ್ರಯತ್ನಿಸುವಾಗ ಕೆಳಗೆ ಹರಿಯುತ್ತಿರುವ ಹೊಳೆಯೊಳಗೆ ಬಿದ್ದು ಹೋಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋವನ್ನು ಮೂಲತಃ 2017 ರಲ್ಲಿ ಚಿಸಾ ಮೇರಿ ಅವರು ಪೋಸ್ಟ್ ಮಾಡಿದ್ದಾರೆ. ಇದು ಈಗ ಮತ್ತೊಮ್ಮೆ ವೈರಲ್​ ಆಗಿದೆ. ಇದು ಖುದ್ದು ಅವರದ್ದೇ ವಿಡಿಯೋ ಆಗಿದೆ.

ತಾವು ಏನೋ ಮಾಡಲು ಹೋಗಿ ಏನೋ ಆಗಿದ್ದನ್ನು ಅವರು ತಿಳಿಸಿದ್ದಾರೆ. ಯೋಗದ ಭಂಗಿಯಲ್ಲಿ ತಿರುಗಲು ಹೋದಾಗ ಆಯತಪ್ಪಿ ಕೆಳಕ್ಕೆ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು.ಇದನ್ನು ನೋಡಿ ನೆಟ್ಟಿಗರು ಬೇಕಿತ್ತಾ ಇದೆಲ್ಲಾ ಎನ್ನುತ್ತಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular