HomeIndiaಧನ್ಯವಾದ ಹೇಳಲು ಚಲಿಸುತ್ತಿದ್ದ ಆಟೋದಲ್ಲಿ ಡ್ರೈವರ್ ಚಿತ್ರ ಬಿಡಿಸಿದ ಮಹಿಳೆ; ಹೃದಯಗೆದ್ದ ವಿಡಿಯೋ

ಧನ್ಯವಾದ ಹೇಳಲು ಚಲಿಸುತ್ತಿದ್ದ ಆಟೋದಲ್ಲಿ ಡ್ರೈವರ್ ಚಿತ್ರ ಬಿಡಿಸಿದ ಮಹಿಳೆ; ಹೃದಯಗೆದ್ದ ವಿಡಿಯೋ

ಚಲಿಸುತ್ತಿದ್ದ ಆಟೋದಲ್ಲಿ ಮಹಿಳೆ ಆಟೋ ಡ್ರೈವರ್ ನ ರೇಖಾಚಿತ್ರ ಬಿಡಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆ ಬಿಡಿಸಿದ ರೇಖಾಚಿತ್ರ ನೋಡಿ ಆಟೋ ಚಾಲಕ ನಕ್ಕಿದ್ದು ಈ ಪ್ರಸಂಗ ನೆಟ್ಟಿಗರ ಹೃದಯ ಗೆದ್ದಿದೆ.

ವೈರಲ್ ಆಗಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ದೀಕ್ಷಾ ಎಂಬ ಬಳಕೆದಾರರು ತಮ್ಮ ಆರ್ಟ್ ಕಾರ್ಟ್ ಬೈ ದೀಕ್ಷಾ ಎಂಬ ಪುಟದಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ಆಕೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಾ ಚಾಲಕನ ಚಿತ್ರ ಬಿಡಿಸಿದ್ದಾರೆ. ಕೈಯಲ್ಲಿ ಹಿಡಿದಿದ್ದ ಪೋಸ್ಟ್-ಇಟ್ ನಲ್ಲಿ ಚಾಲಕನ ರೇಖಾಚಿತ್ರವನ್ನು ಬಿಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3 ನಿಮಿಷಗಳ ಆಟೋ ಪ್ರಯಾಣ ಕೊನೆಗೊಂಡ ನಂತರ ಆಕೆ ಚಿತ್ರವನ್ನು ಆಟೋ ಚಾಲಕನಿಗೆ ತೋರಿಸಿದ್ದಾರೆ. ಚಿತ್ರ ನೋಡಿದ ಆಟೋ ಡ್ರೈವರ್ ಮನಸಾರೆ ನಕ್ಕಿದ್ದಾರೆ.

ಆಟೋ ಡ್ರೈವರ್ ಗೆ ಧನ್ಯವಾದ ಹೇಳಲು ನಾನು ಚಿತ್ರ ಬಿಡಿಸಿದೆ. ಏಕೆಂದರೆ ಯಾರೂ ಆಟೋ ನಿಲ್ಲಿಸದಿದ್ದಾಗ, ಅವರು ನನ್ನನ್ನು ಆಟೋಗೆ ಹತ್ತಿಸಿಕೊಂಡರು ಎಂದು ಮಹಿಳೆ ಇನ್ ಸ್ಟಾಗ್ರಾಂ ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ದೀಕ್ಷಾ ಅವರ ನಡೆಯನ್ನು ಇಷ್ಟಪಟ್ಟಿದ್ದಾರೆ.

https://youtu.be/dptcV-sVuhk

For Latest News Updates, Join Our Whatsapp Community🚩
RELATED ARTICLES

Most Popular