HomeKarnataka30 ವರ್ಷಗಳಿಂದ ಜೀತದಾಳಾಗಿಟ್ಟುಕೊಂಡು ಕೊರಗ ಸಮುದಾಯ ವ್ಯಕ್ತಿ ಮೇಲೆ ದೌರ್ಜನ್ಯ: ಮಹಿಳೆ ಅರೆಸ್ಟ್

30 ವರ್ಷಗಳಿಂದ ಜೀತದಾಳಾಗಿಟ್ಟುಕೊಂಡು ಕೊರಗ ಸಮುದಾಯ ವ್ಯಕ್ತಿ ಮೇಲೆ ದೌರ್ಜನ್ಯ: ಮಹಿಳೆ ಅರೆಸ್ಟ್

ಉಡುಪಿ: 30 ವರ್ಷಗಳಿಂದ ಜೀತದಾಳಾಗಿ ಇಟ್ಟುಕೊಂಡು ಕೊರಗ ಸಮುದಾಯದ ವ್ಯಕ್ತಿ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ರಜನಿ ಶೆಟ್ಟಿ ಬಂಧಿತ ಮಹಿಳೆ. ಪರಿಶಿಷ್ಟ ಪಂಗಡದ ಕೊರಗ ಸಮುದಾಯಕ್ಕೆ ಸೇರಿದ ಕನ್ಯಾನ ಗ್ರಾಮದ ನಾಗ(65) ಅವರನ್ನು ಸುಮಾರು 30 ವರ್ಷಗಳಿಂದ ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರು ಕೆಲಸಕ್ಕೆ ಇಟ್ಟುಕೊಂಡಿದ್ದರು. ಸುಬ್ಬಣ್ಣ ಶೆಟ್ಟಿ ನಿಧನರಾದ ನಂತರ ಅವರ ಮಗಳು ರಜನಿ ಶೆಟ್ಟಿ, ಅಳಿಯ ಕರುಣಾಕರ ಶೆಟ್ಟಿ ಕೂಡ ನಾಗ ಅವರನ್ನು ದನ ಕಾಯುವ ಮತ್ತು ತೋಟದ ಕೆಲಸಕ್ಕಾಗಿ ಮನೆಯಲ್ಲಿಟ್ಟುಕೊಂಡಿದ್ದರು.

ನಾಗ ಅವರಿಂದ 30 ವರ್ಷಗಳಿಂದ ಬಲವಂತದಿಂದ ಜೀತದಾಳಾಗಿ ಕೆಲಸ ಮಾಡಿಕೊಂಡಿದ್ದರು. ಸರಿಯಾಗಿ ಕೂಲಿ ಕೊಡದೆ ಉಳಿದುಕೊಳ್ಳಲು ಮೂಲಸೌಕರ್ಯ ನೀಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು. ತಿಂಡಿಯ ತಟ್ಟೆ, ಬಟ್ಟೆ ಎಲ್ಲವನ್ನು ದನದ ಕೊಟ್ಟಿಗೆಯಲ್ಲಿ ಇಡುವಂತೆ ಒತ್ತಾಯಿಸಿದ್ದರು. ಮನೆಯಿಂದ ಹೊರಗೆ ಹೋಗಲು ಬಿಡದೆ ದೌರ್ಜನ್ಯ ಎಸಗಿದ್ದರು ಎಂದು ನಾಗ ದೂರು ನೀಡಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಜನಿ ಶೆಟ್ಟಿ ಬಂಧಿಸಿದ್ದು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular