HomeIndiaಪುತ್ರನ ವಿರುದ್ಧ ಕೂಗಾಡಿದ್ದಕ್ಕೆ ರಣಜಿ ನಾಯಕತ್ವದಿಂದ ಕೆಳಗಿಳಿಸಿದ ರಾಜಕಾರಣಿ: ಬಹಿರಂಗಪಡಿಸಿದ ಹಿರಿಯ ಬ್ಯಾಟರ್ ಹನುಮ ವಿಹಾರಿ...

ಪುತ್ರನ ವಿರುದ್ಧ ಕೂಗಾಡಿದ್ದಕ್ಕೆ ರಣಜಿ ನಾಯಕತ್ವದಿಂದ ಕೆಳಗಿಳಿಸಿದ ರಾಜಕಾರಣಿ: ಬಹಿರಂಗಪಡಿಸಿದ ಹಿರಿಯ ಬ್ಯಾಟರ್ ಹನುಮ ವಿಹಾರಿ ಮಹತ್ವದ ನಿರ್ಧಾರ

ಹೈದರಾಬಾದ್: ರಾಜಕಾರಣಿಯೊಬ್ಬರ ಹಸ್ತಕ್ಷೇಪದಿಂದ ಆಂಧ್ರಪ್ರದೇಶ ರಣಜಿ ತಂಡದ ನಾಯಕತ್ವ ಕಳೆದುಕೊಂಡಿರುವುದನ್ನು ಹಿರಿಯ ಬ್ಯಾಟರ್ ಹನುಮ ವಿಹಾರಿ ತಡವಾಗಿ ಬಹಿರಂಗಪಡಿಸಿದ್ದಾರೆ.

ಆತ್ಮಗೌರವಕ್ಕೆ ಧಕ್ಕೆ ತಂದ ಆಂಧ್ರ ರಾಜ್ಯದ ಪರ ಇನ್ನೆಂದು ಕಣಕ್ಕಿಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶದ ಎದುರು ಕ್ವಾರ್ಟರ್ ಫೈನಲ್ ನಲ್ಲಿ ವಿರೋಚಿತ ಸೋಲು ಕಂಡ ಬಳಿಕ ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪ್ರಸ್ತುತ ರಣಜಿ ಟೂರ್ನಿಯಲ್ಲಿ ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ಹನುಮ ವಿಹಾರಿ ನಾಯಕರಾಗಿದ್ದರು. ಪಂದ್ಯದ ವೇಳೆ ತಂಡದ 17ನೇ ಆಟಗಾರನ ವಿರುದ್ಧ ಕೂಗಾಡಿದ ನಂತರ ಆತ ಪ್ರಭಾವಿ ರಾಜಕಾರಣಿಯಾದ ತನ್ನ ತಂದೆಯ ಬಳಿ ಹನುಮ ವಿಹಾರಿ ಬಗ್ಗೆ ದೂರು ನೀಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹನುಮ ವಿಹಾರಿ ವಿರುದ್ಧ ಕ್ರಮ ಕೈಗೊಳ್ಳಲು ರಾಜಕಾರಣಿ ಕ್ರಿಕೆಟ್ ಅಸೋಸಿಯೇಷನ್ ಗೆ ಸೂಚನೆ ನೀಡಿದ್ದರು. ಅಸೋಸಿಯೇಷನ್ ನಾಯಕತ್ವ ಕಸಿದುಕೊಂಡರೂ ಕ್ರಿಕೆಟ್ ಮತ್ತು ತಂಡದ ಮೇಲಿನ ಪ್ರೀತಿಯಿಂದ ಹಾಲಿ ಋತುವಿನಲ್ಲಿ ಆಡುವುದನ್ನು ಹನುಮ ವಿಹಾರಿ ಮುಂದುವರಿಸಿದ್ದರು. ಇನ್ನು ಮುಂದೆ ಅವರು ಆಂಧ್ರ ರಾಜ್ಯದ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular