‘ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರನ್ನು ಟ್ರೋಲ್ ಮಾಡದಂತೆ ನೋಡಿಕೊಳ್ಳುತ್ತೇವೆ’: NCW ಸದಸ್ಯೆಯಾಗಿ ನೇಮಕವಾದ ಖುಷ್ಬೂ ಹೇಳಿಕೆ

ಬಿಜೆಪಿ ನಾಯಕಿ ಮತ್ತು ನಟಿ ಖುಷ್ಬು ಸುಂದರ್ ಅವರು ಮೂರು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ(NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.

ತನ್ನ ನೇಮಕಾತಿಯ ನಂತರ, ಟ್ರೋಲಿಂಗ್ ಮತ್ತು ಆನ್‌ಲೈನ್ ಬೆದರಿಸುವಿಕೆಯ ವಿರುದ್ಧ ಮಾತನಾಡಲು ಮಹಿಳೆಯರನ್ನು ಪ್ರೋತ್ಸಾಹಿಸುವುದು ತನ್ನ ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ನನ್ನ ಮೊದಲ ಜಾಗೃತಿ ಕಾರ್ಯಕ್ರಮ ಮಹಿಳೆಯರನ್ನು ಮಾತನಾಡುವಂತೆ ಪ್ರೇರೇಪಿಸುವುದು. ಆಗ ಮಾತ್ರ ಹೋರಾಡಲು ಸಾಧ್ಯ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಖುಷ್ಬೂ ಸುಂದರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೇಮಕವನ್ನು ಪ್ರಕಟಿಸಿದ್ದಾರೆ.

ಸಾಮಾಜಿಕ ಮಾಧ್ಯಮವು ಸಂಪೂರ್ಣ ಸಮಾಜವನ್ನು ಪ್ರತಿನಿಧಿಸುವುದಿಲ್ಲ. ಮಹಿಳೆಯರನ್ನು ಅವಮಾನಿಸುವ ಮತ್ತು ಟ್ರೋಲ್ ಮಾಡುವಲ್ಲಿ ಕೆಲವು ಜನರು ಆನಂದ ಕಾಣುತ್ತಾರೆ. ಈ ಹೆಚ್ಚಿನ ಪುರುಷರು ಮತ್ತು ಮಹಿಳೆಯರು ಸಹ ತಮ್ಮ ಮೂಲ ಗುರುತನ್ನು ಎಂದಿಗೂ ಮುಂದೆ ಬರುವುದಿಲ್ಲ. ಅವರಿಗೆ ಮಾತನಾಡಲು ಪ್ರೇರೇಪಿಸುತ್ತೇನೆ ಎಂದು ತಿಳಿಸಿದ್ದಾರೆ.

ಇಂತಹ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಮೋದಿ ನಾಯಕತ್ವದಲ್ಲಿ ನಾರಿ ಶಕ್ತಿ(ಮಹಿಳಾ ಶಕ್ತಿ)’ ರಕ್ಷಿಸಲು ಮತ್ತು ಪೋಷಿಸಲು ವಾಗ್ದಾನ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read