HomeKarnatakaBIG NEWS: ಕಾಡಾನೆ ದಾಳಿಗೆ ಕಂಗಾಲಾದ ಕೂಲಿ ಕಾರ್ಮಿಕರು: ಮಹಿಳೆ ಸೇರಿ ಮೂವರನ್ನು ಸೊಂಡಿಲಿನಿಂದ ಎತ್ತಿ...

BIG NEWS: ಕಾಡಾನೆ ದಾಳಿಗೆ ಕಂಗಾಲಾದ ಕೂಲಿ ಕಾರ್ಮಿಕರು: ಮಹಿಳೆ ಸೇರಿ ಮೂವರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ

ಹಾಸನ: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇರೂರು ತಾಲೂಕಿನ ಅರೆಹಳ್ಳಿ ಹುಲೆಮಕ್ಕಿ ಗ್ರಾಮದಲ್ಲಿ ನಡೆದಿದೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ ಕಾಡಾನೆ, ಮಹಿಳೆ ಸೇರಿ ಇಬ್ಬರನ್ನು ಸೊಂಡಿಲಿಂದ ಎತ್ತಿ ಬಿಸಾಕಿದೆ. ಇನ್ನೋರ್ವ ವ್ಯಕ್ತಿ ಕೂಡ ಆನೆ ದಾಳಿಯಲ್ಲಿ ಗಾಯಗೊಂದಿದ್ದಾರೆ. ಓರ್ವ ಗಾಯಾಳುವನ್ನು ಗಣೇಶ್ ಎಂದು ಗುರುತಿಸಲಾಗಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಡಿಗೆರೆ ಭಾಗದಿಂದ ಎರಡು ಕಾಡಾನೆಗಳು ಕಾಫಿ ತೋಟಕ್ಕೆ ನುಗ್ಗಿವೆ. ತೋಟದಲ್ಲಿ 15 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಒಂಟಿಸಲಗವೊಂದು ಹಠಾಟ್ ದಾಳಿ ಮಾಡಿದ್ದು, ಕೆಲ ಕೆಲಸಗಾರರು ದಿಕ್ಕಾಪಾಲಾಗಿ ಓಡಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಆನೆ ಇಬ್ಬರನ್ನು ಸೊಂಡಿಲಿಂದ ಎತ್ತಿ ಬಿಸಿಕಾದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಾಳುಗಳನ್ನು ಹಿಮ್ಸ್ ಆಸ್ಪತೆಗೆ ದಾಖಲಿಸಲಾಗಿದೆ. ಆರ್.ಎಫ್.ಒ ಶಿಲ್ಪಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular