HomeKarnatakaBIG NEWS: ಹೃದಯವಂತ ಬರುತ್ತಿದ್ದಂತೆ ಹೃದಯವಿಲ್ಲದ ಡಿ.ಕೆ.ಸುರೇಶ್ ಕಾಣೆಯಾಗಿದ್ದಾರೆ: ಆರ್.ಅಶೋಕ್ ವ್ಯಂಗ್ಯ

BIG NEWS: ಹೃದಯವಂತ ಬರುತ್ತಿದ್ದಂತೆ ಹೃದಯವಿಲ್ಲದ ಡಿ.ಕೆ.ಸುರೇಶ್ ಕಾಣೆಯಾಗಿದ್ದಾರೆ: ಆರ್.ಅಶೋಕ್ ವ್ಯಂಗ್ಯ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಡಿ.ಕೆ.ಸುರೇಶ್ ಕಾಣೆಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಬೆಂಗಳೂರು ಗ್ರಾಮಾಂತರಕ್ಕೆ ಹೃದಯವಂತ ಡಾ.ಮಂಜುನಾಥ್ ಬಂದಿದ್ದಾರೆ. ಹೃದಯವಂತ ಬರುತ್ತಿದ್ದಂತೆ ಹೃದಯವಿಲ್ಲದ ಡಿ.ಕೆ.ಸುರೇಶ್ ಕಾಣೆಯಾಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೃದಯವಂತರು. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಗಿಮಿಸುತ್ತಿದ್ದಂತೆ ಹೃದಯವಿಲ್ಲದ ಕಟುಕರು ಡಿ.ಕೆ.ಸುರೇಶ್ ಕಾಣೆಯಾಗಿಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿಗೆ ಎಲ್ಲೂ ಕೂಡ ಮೈನಸ್ ಅನ್ನುವುದು ಇಲ್ಲ. ಎಲ್ಲಾ ಕಡೆ ಪ್ಲಸ್ ಆಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸೋಲುವುದು ಖಚಿತ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular