HomeLatest NewsOMG : ಮೊದಲ ರಾತ್ರಿಯೇ ಪತಿಗೆ ಶಾಕ್ ನೀಡಿದ ಪತ್ನಿ: 'ಮುಟ್ಟಬೇಕಾದ್ರೆ 90 ಲಕ್ಷ ಕೊಡು'...

OMG : ಮೊದಲ ರಾತ್ರಿಯೇ ಪತಿಗೆ ಶಾಕ್ ನೀಡಿದ ಪತ್ನಿ: ‘ಮುಟ್ಟಬೇಕಾದ್ರೆ 90 ಲಕ್ಷ ಕೊಡು’ ಎಂದ ವಧು !

ಆಗ್ರಾ: ಉತ್ತರಪ್ರದೇಶದಲ್ಲಿ ಮದುವೆಯ ಮೊದಲ ರಾತ್ರಿಯೇ ವಧುವೊಬ್ಬಳು ಪತಿಗೆ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಹಣ ನೀಡದಿದ್ದರೆ ತನ್ನನ್ನು ಮುಟ್ಟುವಂತಿಲ್ಲ ಎಂದು ಹಠ ಹಿಡಿದಿದ್ದಲ್ಲದೆ, ಮನೆಯಲ್ಲಿದ್ದ ಬೆಲೆಬಾಳುವ ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ. ಈ ಹನಿಟ್ರ್ಯಾಪ್ ಮಾದರಿಯ ವಂಚನೆಯಿಂದ ಕಂಗೆಟ್ಟ ವರನ ಕುಟುಂಬ ಈಗ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದೆ.

ಹೌದು.   ಮದುವೆ ಎಂಬುದು ಎರಡು ಮನಸುಗಳ ಮಿಲನ, ಹೊಸ ಜೀವನದ ಸುಂದರ ಕನಸು. ಆದರೆ ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್‌ಪುರದಲ್ಲಿ ನಡೆದ ಈ ವಿವಾಹ ಮಾತ್ರ ಯಾರು ಊಹಿಸದ ತಿರುವು ಪಡೆದುಕೊಂಡಿದೆ. ಮೊದಲ ರಾತ್ರಿ ರೂಮಿಗೆ ಬಂದ ಪತಿಗೆ ಪತ್ನಿ ಹಾಕಿದ ಕಂಡೀಷನ್ ಕೇಳಿ ಆತನ ಮೈಂಡ್ ಬ್ಲಾಂಕ್ ಆಗಿದೆ!

ಜಗದೀಶ್‌ಪುರದಲ್ಲಿ ವಿಜೃಂಭಣೆಯಿಂದ ಮದುವೆ ಮುಗಿದು ವಧು ವರನ ಮನೆಗೆ ಬಂದಿದ್ದಳು. ಮೊದಲ ರಾತ್ರಿಯ ಸಂಭ್ರಮದಲ್ಲಿದ್ದ ವರ ಆಸೆಯಿಂದ ಕೋಣೆಗೆ ಪ್ರವೇಶಿಸಿದಾಗ, ವಧು ಅಸಲಿ ಆಟ ಶುರು ಮಾಡಿದ್ದಾಳೆ. “ನನ್ನನ್ನು ಮುಟ್ಟಬೇಕೆಂದರೆ ತಕ್ಷಣವೇ 90 ಲಕ್ಷ ರೂಪಾಯಿ ನಗದು ನೀಡಬೇಕು” ಎಂದು ಪಟ್ಟು ಹಿಡಿದಿದ್ದಾಳೆ. ಅಷ್ಟು ದೊಡ್ಡ ಮೊತ್ತ ನೀಡಿದರೆ ಮಾತ್ರ ಈ ಮದುವೆಗೆ ಮಾನ್ಯತೆ, ಇಲ್ಲದಿದ್ದರೆ ತನ್ನನ್ನು ಮುಟ್ಟುವಂತಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಣರಂಗವಾದ ಮನೆ

ಹಣದ ವಿಷಯವಾಗಿ ಇಬ್ಬರ ನಡುವೆ ಶುರುವಾದ ಜಗಳ ಬೀದಿಗೆ ಬಂದಿದೆ. ವರನ ಕುಟುಂಬದವರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ವಧು ಮಾತ್ರ ಮಣಿಯಲಿಲ್ಲ. ಅಷ್ಟೇ ಅಲ್ಲದೆ, ತನ್ನ ಪೋಷಕರನ್ನು ಕರೆಸಿ ಮನೆಯಲ್ಲಿದ್ದ ವಸ್ತುಗಳನ್ನು ಪುಡಿಪುಡಿ ಮಾಡಿದ್ದಾಳೆ. ಅಡುಗೆ ಮನೆಯ ಗ್ಯಾಸ್ ಪೈಪ್‌ಲೈನ್ ಕಿತ್ತು ಹಾಕಿ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ವರನ ಕುಟುಂಬಸ್ಥರು ಆರೋಪಿಸಿದ್ದಾರೆ.

ನಗನಾಣ್ಯದೊಂದಿಗೆ ಪರಾರಿ:

ಈ ಯುವತಿಯ ಅಸಲಿ ಉದ್ದೇಶ ಮದುವೆಯಲ್ಲ, ಬದಲಾಗಿ ಹಣ ವಸೂಲಿ ಮಾಡುವುದೇ ಆಗಿತ್ತು ಎಂದು ಸಂತ್ರಸ್ತ ಕುಟುಂಬ ಹತಾಶೆ ವ್ಯಕ್ತಪಡಿಸಿದೆ. ಗಲಾಟೆ ಜೋರಾದ ನಂತರ ಮನೆಯಲ್ಲಿದ್ದ ಚಿನ್ನಾಭರಣಗಳು ಮತ್ತು ಅತ್ತೆ ನೀಡಿದ್ದ ಒಡವೆಗಳೊಂದಿಗೆ ಆಕೆ ಪರಾರಿಯಾಗಿದ್ದಾಳೆ. ಆರಂಭದಲ್ಲಿ ಪೊಲೀಸರು ಕೇಸ್ ದಾಖಲಿಸಲು ಹಿಂದೇಟು ಹಾಕಿದಾಗ, ವರನ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ. ಈಗ ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular