HomeIPL 2026ಚಹಲ್ ನನ್ನ ಫೋಟೊಗೆ ಏನು ಮೆಸೇಜ್ ಮಾಡಿದ್ದಾರೆ ನೋಡಿ: ಪತ್ರಕರ್ತರ ಮುಂದೆಯೇ ಮೊಬೈಲ್ ಚಾಟ್ ಬಿಚ್ಚಿಟ್ಟ...

ಚಹಲ್ ನನ್ನ ಫೋಟೊಗೆ ಏನು ಮೆಸೇಜ್ ಮಾಡಿದ್ದಾರೆ ನೋಡಿ: ಪತ್ರಕರ್ತರ ಮುಂದೆಯೇ ಮೊಬೈಲ್ ಚಾಟ್ ಬಿಚ್ಚಿಟ್ಟ ಬೋಲ್ಡ್ ನಟಿ; ವಿಡಿಯೊ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ಅನುಭವಿ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ.

ತಂಡದ ಪ್ರಮುಖ ಬೌಲರ್ ಆಗಿರುವ ಚಹಲ್ ಟೂರ್ನಿ ಆರಂಭಕ್ಕೂ ಮುನ್ನ ನಡೆದಿದ್ದ ಸಂದರ್ಶನದಲ್ಲಿ ಭಾಗಿಯಾಗಿ ಈ ಬಾರಿ ಓರ್ವ ಹಿರಿಯ ಆಟಗಾರನಾಗಿ ಉದಾಹರಣೆಯಾಗಿರಬೇಕು ಎಂಬ ಕಾರಣದಿಂದಾಗಿ ಆರು ತಿಂಗಳ ಹಿಂದೆಯೇ ಮದ್ಯಪಾನ ತ್ಯಜಿಸಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಆಟದತ್ತ ತನಗಿರುವ ಪ್ರೀತಿ ಹಾಗೂ ಕಾಳಜಿಯನ್ನು ಹೊರಹಾಕಿದ್ದ ಚಹಲ್ ಇತ್ತೀಚೆಗಷ್ಟೆ ನಡು ರಸ್ತೆಯಲ್ಲಿ ತಮ್ಮ ಐಷಾರಾಮಿ ಕಾರನ್ನು ವೇಗವಾಗಿ ಚಲಾಯಿಸುತ್ತಾ ಸಿಗರೇಟ್ ಸೇದಿ ನಡು ರಸ್ತೆಗೆ ಬಿಸಾಡಿದ್ದ ವಿಡಿಯೊ ವೈರಲ್ ಆದ ಕಾರಣ ಚರ್ಚೆಗೀಡಾಗಿದ್ದರು.

ಇದೀಗ ಮತ್ತೊಂದು ವಿಷಯಕ್ಕೆ ಚಹಲ್ ಸುದ್ದಿಗೀಡಾಗಿದ್ದು, ನಟಿಯೊಬ್ಬರಿಗೆ ಮೆಸೇಜ್ ಕಳುಹಿಸಿರುವ ಕುರಿತು ಸ್ವತಃ ನಟಿಯೇ ಬಿಚ್ಚಿಟ್ಟಿದ್ದಾರೆ. ಹೌದು, ಫೋಟೊಶೂಟ್ ಒಂದರಲ್ಲಿ ಪೋಸ್ ಕೊಡುತ್ತಿದ್ದ ಬೋಲ್ಡ್ ವೆಬ್‌ಸರಣಿಯಲ್ಲಿ ಕಾಣಿಸಿಕೊಳ್ಳುವ ನಟಿ ತಾನಿಯಾ ಚಟರ್ಜಿ ತನ್ನ ಮೊಬೈಲ್ ತೆರೆದು ತನ್ನ ಇನ್ಸ್ಟಾಗ್ರಾಮ್ ಖಾತೆಗೆ ಚಹಲ್ ಮೆಸೇಜ್ ಮಾಡಿದ್ದು, ತನ್ನ ಫೋಟೊಗಳಿಗೆ ಆತನ ಕ್ಯೂಟ್ ಎಂದು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟಿಯ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದ್ದು, ಕೆಲ ನೆಟ್ಟಿಗರು ಚಹಲ್ ಕಾಲೆಳೆದಿದ್ದರೆ, ಇನ್ನೂ ಕೆಲವರು ಕೇವಲ ಒಂದು ಸಂದೇಶವನ್ನು ಬಳಸಿ ಆಕೆ ಪ್ರಚಾರ ಪಡೆದುಕೊಳ್ಳುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular