ಬೆಂಗಳೂರು : ಬೆಂಗಳೂರಿನಲ್ಲಿ ಪತಿರಾಯನೋರ್ವ ಹುಚ್ಚಾಟ ಮೆರೆದಿದ್ದು, ಸೈಕೋ ಪತಿ ವರ್ತನೆಗೆ ಬೆಚ್ಚಿಬಿದ್ದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.ಇಂತಹ ಕಾಲದಲ್ಲಿ ಇಂತಹವರೂ ಇರ್ತಾರಾ..!ಮುಂದೆ ಸುದ್ದಿ ಓದಿ.
ಬೆತ್ತಲೆ ಓಡಾಟ, ಗಂಡನ ವಿಚಿತ್ರ ವರ್ತನೆಗೆ ಬೆಚ್ಚಿಬಿದ್ದ ಪತ್ನಿ ಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ.
ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬಾತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ಮದುವೆಯಾದ ಮೂರೇ ತಿಂಗಳಿಗೆ ಪತಿ ತನ್ನ ಸೈಕೋ ರೀತಿ ವರ್ತಿಸುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಮಹಿಳೆ ಆರೋಪ
‘’ನನ್ನ ಪತಿ ಫೋನ್ ತೋರಿಸಿ ಅದೇ ರೀತಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಡ ಹೇರುತ್ತಾನೆ. ಬೆತ್ತಲೆಯಾಗಿ ಮನೆಯಲ್ಲಿ ಓಡಾಡುತ್ತಾನೆ. ಅತ್ತೆ ಮಾವನ ಮುಂದೆಯೇ ಮಂಜುನಾಥ್ ಬೆತ್ತಲೆಯಾಗಿ ತಿರುಗಾಡುತ್ತಾನೆ. ಇದರಿಂದ ಅಕ್ಕ ಪಕ್ಕದ ಮನೆಯವರಿಗೂ ಮುಜುಗರ ಆಗುತ್ತಿದೆ’’.ಎಂದು ಮಹಿಳೆ ಆರೋಪಿಸಿದ್ದಾರೆ.
ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಮೂರೇ ತಿಂಗಳಿಗೆ ಮಂಜುನಾಥ್ ಅಸಲಿ ಮುಖ ಬಯಲಾಗಿದೆ…ನಾನು ಪ್ರೀತಿಸಿ ಮದುವೆಯಾಗಿದ್ದ ಇಂತಹ ಪಿಶಾಚಿಯನ್ನಾ..? ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

