ಮಕ್ಕಳು ಯಾವುದಾದರೂ ದುಬಾರಿ ವಸ್ತು ಕೇಳಿದಾಗ ಸಾಮಾನ್ಯವಾಗಿ ಪೋಷಕರು “ಅಷ್ಟೊಂದು ಹಣ ಕೊಟ್ಟು ಅದು ಬೇಕಾ?” ಎಂದು ಪ್ರಶ್ನಿಸುತ್ತಾರೆ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತಂದೆಯೊಬ್ಬರು ತಮ್ಮ ಮಗಳು ಕೇಳಿದ 80,000 ರೂಪಾಯಿಯ ಐಷಾರಾಮಿ ಬ್ಯಾಗ್‌ಗೆ ಯಾವುದೇ ಹಿಂಜರಿಕೆಯಿಲ್ಲದೆ “ಓಕೆ” ಎಂದಿದ್ದಾರೆ. ತಂದೆಯ ಈ ಉದಾರತೆ ಮತ್ತು ಅಮ್ಮನ ತಮಾಷೆಯ ಪ್ರತಿಕ್ರಿಯೆ ಈಗ ಸಖತ್ ಸದ್ದು ಮಾಡುತ್ತಿದೆ.
ನಡೆದಿದ್ದೇನು? ವಿಡಿಯೋದಲ್ಲಿ ಯುವತಿಯೊಬ್ಬಳು ತನಗೆ ಹುಷಾರಿಲ್ಲದ ಕಾರಣ ತಂದೆಯ ಬಳಿ ಒಂದು ಬೇಡಿಕೆ ಇಡುತ್ತಾಳೆ. “ನನಗೆ ಗುಣಮುಖವಾದರೆ ಲೂಯಿ ವಿಟಾನ್ (Louis Vuitton) ಬ್ಯಾಗ್ ಕೊಡಿಸುತ್ತೀರಾ? ಹೂಂ ಅಂತ ಹೇಳಿ” ಎಂದು ಕೇಳುತ್ತಾಳೆ. ಮಗಳ ಮೇಲಿನ ಪ್ರೀತಿಯಿಂದ ತಂದೆ ತಕ್ಷಣವೇ ಒಪ್ಪಿಕೊಳ್ಳುತ್ತಾರೆ. ಆದರೆ ಪಕ್ಕದಲ್ಲೇ ಇದ್ದ ತಾಯಿ ಮಾತ್ರ ಶಾಕ್ ಆಗುತ್ತಾರೆ.
ಅಮ್ಮನ ಫನ್ನಿ ಆತಂಕ! ಬ್ಯಾಗ್ ಬೆಲೆ ಸುಮಾರು ಒಂದು ಲಕ್ಷದ ಹತ್ತಿರವಿರುತ್ತದೆ ಎಂದು ತಾಯಿ ನೆನಪಿಸಿದಾಗ, ತಂದೆ ಅದರ ನಿಖರ ಬೆಲೆ ಕೇಳುತ್ತಾರೆ. ಮಗಳು “80,000 ರೂಪಾಯಿ” ಎಂದು ಹೇಳಿದಾಗಲೂ ತಂದೆ ಕೂಲ್ ಆಗಿ “ಸರಿ ಕೊಡಿಸೋಣ” ಎನ್ನುತ್ತಾರೆ. ಇದನ್ನು ಕೇಳಿ ಹೌಹಾರಿದ ತಾಯಿ, “80 ಸಾವಿರದ ಚರ್ಮದ ಬ್ಯಾಗ್‌ಅನ್ನು ಇವಳು ಕೈಯಲ್ಲೇ ಹರಿದು ಹಾಕುತ್ತಾಳೆ, ಅಷ್ಟೊಂದು ಹಣ ಬೇಕಾ?” ಎಂದು ತಮಾಷೆಯಾಗಿ ಕೂಗಾಡುತ್ತಾರೆ.
ನೆಟ್ಟಿಗರ ಕಾಮೆಂಟ್ಸ್ “ಬನಿಯಾ ಕುಟುಂಬದಲ್ಲಿ ತಂದೆ ಮತ್ತು ಮಗಳ ಐಷಾರಾಮಿ ಶಾಪಿಂಗ್ ಸಂಭಾಷಣೆ ಹೀಗಿರುತ್ತದೆ” ಎಂಬ ಅಡಿಬರಹದೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ಇಂತಹ ತಂದೆ ಸಿಗಲು ಪುಣ್ಯ ಮಾಡಿರಬೇಕು” ಎಂದು ಕೆಲವರು ಹೇಳಿದರೆ, “ಹುಡುಗರು ಬೈಕ್ ಕೇಳಿದ್ರೆ ನಮಗೆ ಬೈಗುಳ ಸಿಗುತ್ತೆ, ಆದ್ರೆ ಹೆಣ್ಣುಮಕ್ಕಳಿಗೆ ಅಪ್ಪಂದಿರು ಅಂಧಾ ಪೈಸಾ ಖರ್ಚು ಮಾಡ್ತಾರೆ” ಎಂದು ಹುಡುಗರು ತಮಾಷೆಯಾಗಿ ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಗಳ ಮೇಲಿನ ತಂದೆಯ ಈ ‘ಅನ್‌ಲಿಮಿಟೆಡ್’ ಪ್ರೀತಿ ಈಗ ಇಂಟರ್ನೆಟ್‌ನಲ್ಲಿ ಎಲ್ಲರ ಮನ ಗೆದ್ದಿದೆ.

