HomeCrimeಇಬ್ಬರು ಹುಡುಗಿಯರೊಂದಿಗೆ ಪತಿ ಇದ್ದ ಹೋಟೆಲ್ ರೂಂಗೆ ಪತ್ನಿ ಎಂಟ್ರಿ.....! ಟೇಬಲ್ ಮೇಲಿದ್ದ ವಸ್ತುಗಳನ್ನು ನೋಡಿ...

ಇಬ್ಬರು ಹುಡುಗಿಯರೊಂದಿಗೆ ಪತಿ ಇದ್ದ ಹೋಟೆಲ್ ರೂಂಗೆ ಪತ್ನಿ ಎಂಟ್ರಿ…..! ಟೇಬಲ್ ಮೇಲಿದ್ದ ವಸ್ತುಗಳನ್ನು ನೋಡಿ ಶಾಕ್……!

ಒಡಿಶಾದ ಭುವನೇಶ್ವರದ ಪಾಟಿಯಾ ಪ್ರದೇಶದ ಹೋಟೆಲ್ ವೊಂದರ ರೂಂಗೆ ಮಹಿಳೆಯೊಬ್ಬರು ದಾಳಿ ನಡೆಸಿ, ಇಬ್ಬರು ಹುಡುಗಿಯರೊಂದಿಗೆ ತನ್ನ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ನಾಟಕೀಯ ಪ್ರಸಂಗದಲ್ಲಿ ಮೇಜಿನ ಮೇಲೆ ತೆರೆದಿಟ್ಟಿದ್ದ ಕಾಂಡೋಮ್ ಪ್ಯಾಕೆಟ್ ಅನ್ನು ಪತ್ತೆ‌ ಮಾಡಿದ್ದಾರೆ.

ಮಹಿಳೆ ತನ್ನ ಪತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಸುಳಿವು ಪಡೆದ ನಂತರ ಪೊಲೀಸರು ಮತ್ತು ನೆರೆಹೊರೆಯವರ ಸಹಾಯದಿಂದ ದಾಳಿ ನಡೆಸಿದರು. ತನ್ನ ಪತಿ ಇಬ್ಬರು ಯುವತಿಯರೊಂದಿಗೆ ತನ್ನ ನೆಚ್ಚಿನ ಹೋಟೆಲ್ ಕೋಣೆಯಲ್ಲಿದ್ದ ಮಾಹಿತಿ ಪಡೆದು ಬಂದಿದ್ದ ಮಹಿಳೆ, ಹೋಟೆಲ್‌ಗೆ ಬಂದಾಗ ಘಟನೆ ಬಯಲಾಯಿತು. ಬಾಗಿಲು ತೆರೆಯಲು ಆಕೆಯ ಪ್ರಯತ್ನ ವಿಫಲವಾದ ನಂತರ ಪೊಲೀಸರು ಮಧ್ಯಪ್ರವೇಶಿಸಿ ಬಾಗಿಲು ತೆರೆಯುವಂತೆ ಒತ್ತಾಯಿಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಬಾಗಿಲು ತೆರೆಯಲು ಹೋಟೆಲ್ ಸಿಬ್ಬಂದಿಯನ್ನು ಕರೆಸಲಾಯಿತು.

ಬಾಗಿಲು ತೆರೆದ ಕೂಡಲೇ ಒಳಗಿನ ದೃಶ್ಯ ಮಹಿಳೆಯ ಅನುಮಾನಕ್ಕೆ ಪುಷ್ಟಿ ನೀಡಿತು. ಆಕೆಯ ಪತಿ ಇಬ್ಬರು ಯುವತಿಯರೊಂದಿಗೆ ಕೋಣೆಯಲ್ಲಿದ್ದ. ಟೇಬಲ್ ಮೇಲೆ ಮದ್ಯದ ಬಾಟಲಿ, ತೆರೆದ ಕಾಂಡೋಮ್ ಪ್ಯಾಕೆಟ್ ಮತ್ತು ಸಿಗರೇಟ್ ಪ್ಯಾಕ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ದಾಳಿಯನ್ನು ವಿಡಿಯೋ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆಗೆ ಕೆಲ ದಿನಗಳಿಂದ ಪತಿಯ ಚಟುವಟಿಕೆಗಳ ಬಗ್ಗೆ ಅನುಮಾನವಿದ್ದು, ಆತನ ಚಲನವಲನಗಳ ಮೇಲೆ ನಿಗಾ ಇಡಲು ಖಾಸಗಿ ತನಿಖಾಧಿಕಾರಿಗಳನ್ನು ನೇಮಿಸಿದ್ದರು. ಒಂದು ದಿನ ತನ್ನ ಪತಿ ಇಬ್ಬರು ಹುಡುಗಿಯರೊಂದಿಗೆ ಹೋಟೆಲ್ ಕೋಣೆಯಲ್ಲಿ ಉಳಿದುಕೊಂಡಿರುವ ಮಾಹಿತಿ ಆಕೆಗೆ ಬಂದಿತು. ಆಗಲೇ ಗಂಡನ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಸುಳಿವು ಸಿಕ್ಕಿದ ಕೂಡಲೇ ಪತಿಯನ್ನು ಹಿಡಿಯಲು ಪೊಲೀಸರನ್ನು ಸ್ಥಳಕ್ಕೆ ಕರೆತಂದಿದ್ದಾಳೆ.

ಆರಂಭದಲ್ಲಿ ಬಾಗಿಲು ತೆರೆದಾಗ ಪತಿ ಮಾತ್ರ ಕಾಣಿಸುತ್ತಿದ್ದರು. ಆದರೆ ಬಾತ್ ರೂಂನಲ್ಲಿ ಹುಡುಕಾಟ ನಡೆಸಿದಾಗ ಇಬ್ಬರು ಹುಡುಗಿಯರು ಒಳಗೆ ಅಡಗಿಕೊಂಡಿರುವುದು ಪೊಲೀಸರಿಗೆ ಕಂಡುಬಂದಿತು. ಪೊಲೀಸರು ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಇಬ್ಬರು ಯುವತಿಯರನ್ನು ಕೂಡ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular