HomeKarnatakaಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಪತ್ನಿ: ಮತಾಂತರವಾಗಲು ಪತಿ, ಮಕ್ಕಳಿಗೂ ಕಿರುಕುಳ

ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಪತ್ನಿ: ಮತಾಂತರವಾಗಲು ಪತಿ, ಮಕ್ಕಳಿಗೂ ಕಿರುಕುಳ

ಶಿವಮೊಗ್ಗ: ತಮ್ಮ ಪತ್ನಿ ಪ್ರಿಯತಾ ಆರ್. ಸ್ವಯಂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ತನ್ನಷ್ಟಕ್ಕೆ ತಾನು ಇರದೆ ನನಗೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಪತ್ನಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಬಿ.ವಿನಯ್ ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2011ರಲ್ಲಿ ನಾನು ಮತ್ತು ಹಾಸನ ಜಿಲ್ಲೆಯ ಪ್ರಿಯತಾ ಬೇಲೂರು ತಾಲೂಕಿನ ಹಳೇಬಿಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಕುಂಬಾರ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದು, ನಮಗೆ ಯೋಜ್ಞಾ(14) ಮನೋಜ್ಞಾ(8) ಇಬ್ಬರು ಮಕ್ಕಳಿದ್ದಾರೆ. 2015ರಲ್ಲಿ ಶಿವಮೊಗ್ಗದ ಪ್ರತಿಷ್ಟಿತ ಖಾಸಗಿ ಶಾಲೆಯಲ್ಲಿ ಪ್ರಿಯತಾ ಆರ್. ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದು, ಅಂದಿನಿಂದ ಅವಳು ನಮ್ಮ ಹಿಂದೂ ಸಂಪ್ರದಾಯವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮದ ಕಡೆ ಆಸಕ್ತಿ ಹೊಂದಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮರಿಯಾ ಪ್ರಿಯದರ್ಶಿನಿ ಸಹಾಯದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಬಿ.ವಿನಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮತಾಂತರಗೊಂಡ ಪ್ರಿಯತಾ ಚರ್ಚ್‍ಗೆ ಹೋಗುವುದು ಬರುವುದು ಮಾಡುತ್ತಿದ್ದಳು. ಮನೆಯಲ್ಲಿ ಬೈಬಲ್ ತಂದು ಇಟ್ಟುಕೊಂಡು ಓದುತ್ತಿದ್ದಳು. ಜೊತೆಗೆ ಏಸುಕ್ರಿಸ್ತನ ಪೂಜಿಸುತ್ತಿದ್ದಳು. ಈ ಬಗ್ಗೆ ಹಲವಾರು ಬಾರಿ ಈ ರೀತಿ ಮಾಡದಂತೆ ಹೇಳಿದ್ದರೂ ಸಹ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿದ್ದೇನೆ. ನೀವು ಅದೇ ಧರ್ಮವನ್ನು ಪಾಲಿಸಿ ಎಂದು ಹೇಳುತ್ತಿದ್ದಳು. ನಾನು ಇದಕ್ಕೆ ಒಪ್ಪುತ್ತಿರಲಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಹಿರಿಯ ಮಗಳಿಗೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುವಂತೆ ಒತ್ತಾಯಿಸುತ್ತಿದ್ದಳು. ಈ ಬಗ್ಗೆ ಮನೆಯಲ್ಲಿ ದಿನವೂ ಜಗಳವಾಗುತ್ತಿತ್ತು. 2019ರಲ್ಲಿ ನನ್ನ ಪತ್ನಿ ತವರಿಗೆ ಹೋಗಿದ್ದಳು. ಮಕ್ಕಳಿರುವ ಕಾರಣ ಅವರ ಜೀವನ ಹಾಳಾಗಬಾರದೆಂದು ಪತ್ನಿಗೆ ಮನೆಗೆ ಬರುವಂತೆ ವಿನಂತಿಸಿದ್ದರಿಂದ 2020ರಲ್ಲಿ ವಾಪಸ್ ಮನೆಗೆ ಬಂದಳು. ಅವಳು ಬಂದಾಗಿನಿಂದ ಬೇರೆ ಬೇರೆ ರೀತಿಯೇ ವರ್ತಿಸುತ್ತಿದ್ದಳು. 2024ರಲ್ಲಿ ಪುನಃ ಪತ್ನಿ ಹೆಚ್ಚಾಗಿ ಕ್ರಿಶ್ಚಿಯನ್ ಧರ್ಮದ ವಿಧಿವಿಧಾನ ಅನುಸರಿಸುತ್ತಿದ್ದಳು. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವೆಬ್‍ಸೈಟ್ ಫಾಲೋ ಮಾಡಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಮಾಡುತ್ತಿದ್ದಳು. ನನಗೂ ಸಹ ಫಾಲೋ ಮಾಡಲು ಒತ್ತಾಯಿಸುತ್ತಿದ್ದು, ಪ್ರಿಯತಾ ಪ್ರತಿ ತಿಂಗಳು 400 ರೂ. ಪಾವತಿಸುತ್ತಿದ್ದಳು ಎಂದರು.

ಕ್ರಿಶ್ಚಿಯನ್ ಧರ್ಮ ಆಚರಣೆ ಹೆಚ್ಚಾಗಿ ನನಗೆ ಮತ್ತು ನನ್ನ ಮಕ್ಕಳಿಗೆ ಮತಾಂತರಗೊಳ್ಳಲು ಪೀಡಿಸಲು ಆರಂಭಿಸಿದಳು. ನಾನು ಒಪ್ಪದೆ ಇದ್ದುದ್ದರಿಂದ ನನಗೆ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದಳು. ಅವಳ ಮಾತನ್ನು ಕೇಳದ ಕಾರಣ 2025ರಲ್ಲಿ ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋದಳು. ಪ್ರಿಯತಾ ಅವರ ಸ್ನೇಹಿತೆ ತಿಳಿವಳಿಕೆ ಹೇಳಿದಕ್ಕೆ ನಾನು ಮತ್ತು ಮಕ್ಕಳು ಮತಾಂತರಗೊಂಡರೆ ಮಾತ್ರ ನಾನು ಪುನಃ ಬರುತ್ತೇನೆ ಎಂದು ಹೇಳಿದಳು. ಆದರೂ ಮನೆಗೆ ಬಂದಿಲ್ಲ. ಆದ್ದರಿಂದ ಪತ್ನಿ ಪ್ರಿಯತಾ ವಿರುದ್ಧ ಕಾನೂನು ಜರುಗಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪ್ರಿಯತಾ ಹಾಗೂ ಮರಿಯಾ ಅವರನ್ನು ಖಾಸಗಿ ಶಾಲೆಯಿಂದ ಕೆಲಸ ಬಿಡಿಸಲಾಗಿದೆ. ಈ ರೀತಿಯಾಗಿ ಬೇರೆಯವರಿಗೆ ಆಗಬಾರದೆಂಬ ಕಳಕಳಿಯಿಂದ ನನ್ನ ಕಷ್ಟವನ್ನು ಸಮಾಜದ ಮುಂದೆ ಇಡುತ್ತಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular