ಹೈದರಾಬಾದ್ನ ಎಲ್ಬಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮದ್ಯದ ಅಮಲು ತಾಯಿಯ ಮಮತೆಯನ್ನೇ ಕಸಿದುಕೊಂಡ ದಾರುಣ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. 9 ತಿಂಗಳ ಹೆಣ್ಣುಮಗುವನ್ನು ಮದ್ಯದ ಅಮಲಿನಲ್ಲೇ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಆರೋಪದ ಮೇಲೆ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಈ ಅಮಾನವೀಯ ಕೃತ್ಯದ ಹಿಂದಿನ ಕಾರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮದ್ಯದ ಅಮಲು ತಾಯಿಯ ಮಮತೆಯನ್ನೇ ಕಸಿದುಕೊಂಡ ದಾರುಣ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. 9 ತಿಂಗಳ ಹೆಣ್ಣುಮಗುವನ್ನು ಮದ್ಯದ ಅಮಲಿನಲ್ಲೇ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಆರೋಪದ ಮೇಲೆ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಈ ಅಮಾನವೀಯ ಕೃತ್ಯದ ಹಿಂದಿನ ಕಾರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮದ್ಯದ ಚಟದಿಂದ ಅಮಾನವೀಯ ಕೃತ್ಯ
ಪೊಲೀಸರ ಮಾಹಿತಿ ಪ್ರಕಾರ, ಇಂಜಾಪುರ ನಿವಾಸಿ ಲೋಕಸಾನಿ ರಾಜೇಶ್ವರಿ (34) ಅವರಿಗೆ 9 ತಿಂಗಳ ಮಗಳು ಅನುರಾಧ ಇದ್ದಳು. ಮದ್ಯದ ಚಟಕ್ಕೆ ಬಿದ್ದಿದ್ದ ರಾಜೇಶ್ವರಿ ಘಟನೆ ನಡೆದ ಸಂದರ್ಭದಲ್ಲಿಯೂ ತೀವ್ರ ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ. ಅಮಲಿನಲ್ಲೇ ಅವರು ಬೈರಾಮಲ್ಗುಡ ಕೆರೆಯ ಬಳಿ ಮಗುವನ್ನು ಕರೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಆರೋಪವಿದೆ.
ಪ್ರಕರಣ ದಾಖಲು; ತನಿಖೆ ಮುಂದುವರಿಕೆ
ಮಾಹಿತಿ ತಿಳಿದ ಕೂಡಲೇ ಎಲ್ಬಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ, ಕೆರೆಯಿಂದ ಮಗುವಿನ ಮೃತದೇಹವನ್ನು ಹೊರತೆಗೆದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಯಿತು.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರಾಜೇಶ್ವರಿ ಘಟನೆ ವೇಳೆ ತೀವ್ರ ಮದ್ಯದ ಅಮಲಿನಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ಕೃತ್ಯದ ಹಿಂದಿನ ನಿಖರ ಕಾರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

