HomeKarnatakaಬೀದರ್‌ನ ಬ್ರೀಮ್ಸ್‌ನಲ್ಲಿ ಹೃದ್ರೋಗ ಘಟಕ, ಸರ್ಕಾರದ ಸ್ಪಷ್ಟನೆಗಳು

ಬೀದರ್‌ನ ಬ್ರೀಮ್ಸ್‌ನಲ್ಲಿ ಹೃದ್ರೋಗ ಘಟಕ, ಸರ್ಕಾರದ ಸ್ಪಷ್ಟನೆಗಳು

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರೀಮ್ಸ್‌) ಆಸ್ಪತ್ರೆಯಲ್ಲಿ ಹೃದ್ರೋಗ ಘಟಕ ಏಕೆ ಆರಂಭವಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿತ್ತು. ಈ ವರದಿಗೆ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ.

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೀದರ್ ಇಲ್ಲಿನ ಪ್ರಕಟಣೆಯನ್ನು ಉಲ್ಲೇಖಿಸಿ ಮಾನ್ಯ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಈ ಪ್ರಕಟಣೆ ಬ್ರೀಮ್ಸ್ ಬೀದರ್‌ನ ಹೃದ್ರೋಗ ಘಟಕದ ಪ್ರಾರಂಭವಾಗದೇ ಇರುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಬೀಮ್ಸ್ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಘಟಕದ ಹಿನ್ನೋಟ ಹಾಗೂ ಪ್ರಸ್ತುತ ಸ್ಥಿತಿಯನ್ನು ವಿವರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

6/11/2018ರ ಸರ್ಕಾರದ ಆದೇಶದಂತೆ ಒಟ್ಟು ಅನುದಾನ 15 ಕೋಟಿ ಘೋಷಣೆ ಮಾಡಿ ಪ್ರಾಥಮಿಕವಾಗಿ 7.25 ಕೋಟಿಗಳ ಅನುದಾನವನ್ನು ಮಂಜೂರು ಮಾಡಲಾಗಿದೆ. 19/6/2019ರಂದು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ 75 ಹಾಸಿಗೆಗಳ ಹೃದ್ರೋಗ ಘಟಕವನ್ನು ಪ್ರಸ್ತಾಪಿಸಿ ಹೆಚ್ಚಿನ ಅನುದಾನಕ್ಕಾಗಿ ಆಡಳಿತ ಮಂಡಳಿಯು ಅನುಮೋದಿಸಿತು.

10/2/2021ರಂದು ಬ್ರೀಮ್ಸ್ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಘಟಕದ ಸಿವಿಲ್, ಉಪಕರಣ, ಮಾನವ ಸಂಪನ್ಮೂಲಗಳನ್ನೊಳಗೊಂಡ ವಿಸ್ತ್ರತವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

ದಿನಾಂಕ 23/08/2021ರಂದು ರಂದು ತಾಂತ್ರಿಕ ಸಲಹಾ ಮಂಡಳಿ 75 ಹಾಸಿಗೆಗಳ ಬ್ರೀಮ್ಸ್ ಹೃದ್ರೋಗ ಘಟಕಕ್ಕೆ ಅವಶ್ಯಕವಿರುವ ಮಾನವ ಸಂಪನ್ಮೂಲ, ಉಪಕರಣ, ಸಿವಿಲ್ ಕಾಮಗಾರಿಯ ಬಗ್ಗೆ ವರದಿಯನ್ನು ನೀಡಿತು. ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ.

1/3/2023ರಂದು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಬ್ರೀಮ್ಸ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಯದೇವ ಹೃದ್ರೋಗದ ಕೆ.ಸಿ.ಜನರಲ್ ಆಸ್ಪತ್ರೆ, ಬೆಂಗಳೂರು ಅದರಂತೆ ಮಾರ್ಪಡಿಸಿ ಮರು ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ದೇಶನವನ್ನು ನೀಡಿರುತ್ತಾರೆ. ಅದರಂತೆ 25/3/2023ರಂದು ತಾಂತ್ರಿಕ ಸಲಹಾ ಸಮಿತಿಯ ಪರಿಷ್ಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

21/06/2023ರಂದು ಬ್ರೀಮ್ಸ್ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಘಟಕದ ಪರಿಷ್ಕೃತ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಸಿವಿಲ್‌ ಹಾಗೂ ಉಪಕರಣ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಲು ಆದೇಶಿಸಲಾಗಿರುತ್ತದೆ ಎಂದು ವಿವರಣೆ ನೀಡಲಾಗಿದೆ.

ಕಾರ್ಡಿಯಾಕ್ ಘಟಕ ಪ್ರಾರಂಭವಾಗದೇ ಇರಲು ಕಾರಣಗಳು

* ಅತೀ ಅವಶ್ಯಕ ಸಿಬ್ಬಂದಿಗಳಾದ Cardiologist, Echo Technician, Cath lab Technician ಹುದ್ದೆಗಳು ಹೃದ್ರೋಗ ವೈದ್ಯಕೀಯ ಕ್ಷೇತ್ರದಲ್ಲಿ ಬಹುಬೇಡಿಕೆಯ ಹಾಗೂ ವಿರಳವಾಗಿ ಲಭ್ಯವಿರುವ ಹುದ್ದೆಗಳಾಗಿರುತ್ತವೆ. ಕಾರಣ ಈ ಹುದ್ದೆಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಗುತ್ತಿಗೆ ಆಧಾರದಲ್ಲಿ ಲಭ್ಯವಿರುವ ಸಂಭಾವನೆಯಿಂದ ಅಭ್ಯರ್ಥಿಗಳನ್ನು ಆಕರ್ಷಿಸಲು ಕಷ್ಟಸಾಧ್ಯವಾಗಿರುತ್ತದೆ.

* ಬ್ರೀಮ್ಸ್ ಸಂಸ್ಥೆಯಲ್ಲಿ ಈಗ ನಿವೃತ್ತರಾಗಿರುವ ಹಾಗೂ ಈ ಹಿಂದ ಕಾರ್ಯನಿರ್ವಹಿಸುತ್ತಿದ್ದ ವೈದ್ಯಕೀಯ ವಿಭಾಗದ ಸಹ ಪ್ರಧ್ಯಾಪಕರು DM Cardiology ಪದವೀಧರರಾಗಿದ್ದು ಇವರ ಸೇವೆಯನ್ನು 2 ವರ್ಷಗಳವರೆಗೆ ಮುಂದುವರೆಸಿ ಸರ್ಕಾರ ಆದೇಶದ ಮೇಲೆ ಇದೇ ಸಂಸ್ಥೆಯ ವೈದ್ಯಕೀಯ ವಿಭಾಗದಲ್ಲಿ ಕಾರ್ಯನಿರತರಾಗಿರುವ ಸಹಾಯಕ ಪ್ರಾಧ್ಯಾಪಕರು ತಮ್ಮ ಮುಂಬಡ್ತಿಗೆ ಅಡೆತಡೆಯಾಗುತ್ತಿದೆ ಎಂದು ಉಚ್ಚ ನ್ಯಾಯಾಲಯ, ಕಲಬುರಗಿ ಪೀಠದಿಂದ ತಡೆಯಾಜ್ಞೆಯನ್ನು ಪಡೆದಿರುತ್ತಾರೆ.

* ಕಾರ್ಡಿಯಾಲಾಜಿಸ್ಟ್ ಹಾಗೂ ಅವಶ್ಯಕ ತಾಂತ್ರಿಕ ಸಿಬ್ಬಂದಿಗಳ ಮರು ಸಂದರ್ಶನ ಮಾಡಲಾಗಿದ್ದು, ಅಭ್ಯರ್ಥಿಗಳು ಸಂದರ್ಶನಕ್ಕೆ ಸ್ಪಂದಿಸಿರುವುದಿಲ್ಲ.

* ಸಿಬ್ಬಂದಿಗಳ ತೀವ್ರ ಕೊರತೆ ಹಾಗೂ ಹೃದ್ರೋಗಿಗಳಿಗೆ ಸೂಕ್ತ ಉಪಚಾರ ನೀಡಲು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆ ಮೇರೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕರು 23/12/2025ರಂದು ರಂದು ಬ್ರೀಮ್ಸ್ ಹೃದ್ರೋಗ ಘಟಕಕ್ಕೆ ಭೇಟಿ ನೀಡಿ, ಹೃದ್ರೋಗ ಘಟಕವನ್ನು ನಿರೀಕ್ಷಣೆ ಮಾಡಿ ಅವಶ್ಯಕವಿರುವ ಸಿವಿಲ್ ಹಾಗೂ ಮಾನವ ಸಂಪನ್ಮೂಲದ ಪ್ರಸ್ತಾವನೆಗಳಿಗೆ ಸರ್ಕಾರದಿಂದ ಸಮ್ಮತಿ ದೊರಕಿದ ಮೇಲೆ ಶ್ರೀ ಜಯದೇವ ಹೃದ್ರೋಗ ಘಟಕದ ಅಡಿಯಲ್ಲಿ ಕೈಗೆತ್ತಿಕೊಂಡು ಕಾರ್ಯಾರಂಭ ಮಾಡಲಾಗುವುದು ಎಂದು ಮೌಖಿಕವಾಗಿ ತಿಳಿಸಿರುತ್ತಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular