HomeLatest Newsಪುರುಷರಿಗೆ ಅತಿಯಾಗಿ ಆಯಾಸವಾಗುವುದೇಕೆ.....? ಇಲ್ಲಿದೆ ಉತ್ತರ

ಪುರುಷರಿಗೆ ಅತಿಯಾಗಿ ಆಯಾಸವಾಗುವುದೇಕೆ…..? ಇಲ್ಲಿದೆ ಉತ್ತರ

ಕೆಲವು ಪುರುಷರಿಗೆ ಹೆಚ್ಹೆಚ್ಚು ಆಯಾಸವಾಗುತ್ತದೆ. ಯಾವಾಗಲೂ ಒಂದು ರೀತಿಯ ಜಡತ್ವ ಕಾಡುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇದಕ್ಕೆ ಹಲವು ರೀತಿಯ ಕಾರಣಗಳಿರುತ್ತವೆ. ನಿದ್ದೆಯ ಸಮಸ್ಯೆ, ಒತ್ತಡ ಕೂಡ ಇವುಗಳಲ್ಲೊಂದು.

ದೈಹಿಕ ಮತ್ತು ಮಾನಸಿಕ ಆಯಾಸ ಕೆಲವೊಂದು ಕಾಯಿಲೆಗಳ ಲಕ್ಷಣವೂ ಹೌದು. ಹಾಗಾಗಿ ಅದನ್ನು ನಿರ್ಲಕ್ಷಿಸಬಾರದು. ಪುರುಷರು ಹೆಚ್ಚು ಸುಸ್ತಾಗಲು ಕಾರಣವೇನು ಎಂಬುದನ್ನು ಒಂದೊಂದಾಗಿಯೇ ತಿಳಿದುಕೊಳ್ಳೋಣ.

ಟೆಸ್ಟೋಸ್ಟೆರಾನ್: ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಮಟ್ಟವು ಪುರುಷರಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ. ಪುರುಷರು ವಯಸ್ಸಾದಂತೆ, ವಿಶೇಷವಾಗಿ ಅವರು 40ರ ಆಸುಪಾಸಿನಲ್ಲಿದ್ದಾಗ, ಅವರ ಟೆಸ್ಟೋಸ್ಟೆರಾನ್ ಮಟ್ಟವು ವರ್ಷಕ್ಕೆ ಒಂದು ಪ್ರತಿಶತದಷ್ಟು ಕಡಿಮೆಯಾಗುತ್ತದೆ. ಟೆಸ್ಟೋಸ್ಟೆರಾನ್‌ ಕಡಿಮೆಯಾದಾಗ ಸೆಕ್ಸ್‌ ಡ್ರೈವ್‌ ಕಡಿಮೆಯಾಗುತ್ತದೆ ಮತ್ತು ನಿದ್ರೆಯ ಕೊರತೆಗೆ ಕಾರಣವಾಗುತ್ತದೆ. ಇದರಿಂದ ಆಯಾಸ ಹೆಚ್ಚಾಗುತ್ತದೆ, ಶಕ್ತಿಯೇ ಇಲ್ಲದಂತೆ ಭಾಸವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಥೈರಾಯ್ಡ್ ಸಮಸ್ಯೆ: ಥೈರಾಯ್ಡ್ ಹಾರ್ಮೋನ್ ಮಟ್ಟ ಕಡಿಮೆಯಾದರೆ ದೇಹದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚು. ಪುರುಷರಲ್ಲಿಯೂ ಈ ಸಮಸ್ಯೆ ಕಂಡುಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಅತಿಯಾದ ಸುಸ್ತು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಿ.

ಖಿನ್ನತೆ: ನಮ್ಮ ಮನಸ್ಸಿನ ದುಃಖದಿಂದಾಗಿಯೇ ಸಾಕಷ್ಟು ದೈಹಿಕ ಸಮಸ್ಯೆಗಳೂ ಉಂಟಾಗುತ್ತವೆ. ಆಲಸ್ಯ, ಖಿನ್ನತೆ, ನಿದ್ರಾಹೀನತೆ, ಶಕ್ತಿಯ ಕೊರತೆ ಹೀಗೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಖಿನ್ನತೆಯ ಸಮಸ್ಯೆಯು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಖಿನ್ನತೆಯಿಂದಲೂ ಅತಿಯಾದ ಸುಸ್ತು ಉಂಟಾಗುತ್ತದೆ.

ನಿದ್ರಾಹೀನತೆ: ಆಯಾಸಕ್ಕೆ ನಿದ್ರೆಯ ಕೊರತೆಯೂ ಕಾರಣವಾಗಬಹುದು. ನೀವು ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಿದರೆ, ತಡರಾತ್ರಿಯಲ್ಲಿ ಎಚ್ಚರವಾಗುವುದು ಮತ್ತೆ ನಿದ್ದೆ ಬಾರದೇ ಇರುವುದು ಇಂಥವುಗಳಿಂದ ದಣಿವಾಗುತ್ತದೆ. ಹಾಗೇನಾದರೂ ಆದಲ್ಲಿ ಹಗಲಿನಲ್ಲಾದರೂ ಸ್ವಲ್ಪ ನಿದ್ದೆ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular