HomeKarnatakaCongress Operation Hastha : ಪಕ್ಷದ ಬಾಗಿಲು ತೆರೆದಿದೆ, ಕಾಂಗ್ರೆಸ್ ಗೆ ಯಾರೇ ಬಂದರೂ ಸ್ವಾಗತ...

Congress Operation Hastha : ಪಕ್ಷದ ಬಾಗಿಲು ತೆರೆದಿದೆ, ಕಾಂಗ್ರೆಸ್ ಗೆ ಯಾರೇ ಬಂದರೂ ಸ್ವಾಗತ : ಸಚಿವ H.C.ಮಹದೇವಪ್ಪ

ಬೆಂಗಳೂರು :  ಕಾಂಗ್ರೆಸ್ ಗೆ  ಯಾರು ಬೇಕಾದರೂ ಬರಬಹುದು, ಯಾರೇ ಬಂದರೂ ಸ್ವಾಗತ ಎಂದು ಸಚಿವ H.C.ಮಹದೇವಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ನಾವು ಮನೆ ಮನೆಗೆ ಹೋಗಿ ನೀವು ಬನ್ನಿ ಬನ್ನಿ ಅಂತಾ ಕರೆಯುತ್ತಿಲ್ಲ. ನಮ್ಮ ಪಕ್ಷದ ಬಾಗಿಲು ತೆರೆದಿದೆ. ಸರ್ಕಾರದ ಯೋಜನೆ ನೋಡಿ ಯಾರು ಬೇಕಾದರೂ ಬರಬಹುದು, ಕಾಂಗ್ರೆಸ್ ಗೆ  ಯಾರು ಬೇಕಾದರೂ ಬರಬಹುದು, ಯಾರೇ ಬಂದರೂ ಸ್ವಾಗತ ಎಂದು ಸಚಿವ H.C.ಮಹದೇವಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಯಾವುದೇ ಮುಖಂಡರು ಪಕ್ಷಕ್ಕೆ ಬಂದರೇ ಸ್ವಾಗತ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದು ಸಚಿವ H.C.ಮಹದೇವಪ್ಪ ಹೇಳಿದ್ದಾರೆ.ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದು. ಹಲವು ವಲಸಿಗ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ. ಆದರೆ ಆಪರೇಷನ್ ಹಸ್ತದ ಕುರಿತು ಹಲವು ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular