ಬೆಂಗಳೂರು : 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬಿಳಿಜೋಳವನ್ನು ಖರೀದಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳವನ್ನು ಖರೀದಿಗೆ ಸಂಬಂಧಿಸಿದಂತೆ. ಈಗಾಗಲೇ ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ತಾಲ್ಲೂಕುವರು ಖರೀದಿ ಕೇಂದ್ರಗಳ(ಸರ್ಕಾರದಿಂದ ಅನುಮೋದಿಸಲ್ಪಟ್ಟ) ಪಟ್ಟಿಯನ್ನು ಈ ಪತ್ರದೊಂದಿಗೆ ಅಡಕಗೊಳಿಸಿದೆ. ಪ್ರಯುಕ್ತ ಮುಂಗಾರು ಋತುವಿನಲ್ಲಿ ಬಿಳಿಜೋಳವನ್ನು ಬೆಳೆದಿರುವ ಆಸಕ್ತ ರೈತರು ಸದರಿ ಯೋಜನೆಯಡಿ ಸದರಿ ಬೆಳೆಯನ್ನು ಸರ್ಕಾರಕ್ಕೆ ಮಾರಾಟ ಮಾಡಲು ಪ್ರತಿ ಎಕರೆಗೆ 15 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂಟಾಲ್ ಜೋಳವನ್ನು ಹತ್ತಿರದ ಖರೀದಿ ಕೇಂದ್ರಗಳಲ್ಲಿ Frutis ID ಯೊಂದಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಮುಂದುವರೆದು ಉಲ್ಲೇಖಿತದನ್ವಯ ರಾಜ್ಯದಾದ್ಯಂತ ಒಟ್ಟು 3.00 ಲಕ್ಷ ಮೆ.ಟನ್ ಜೋಳದ ಗುರಿಯನ್ನು ನಿಗಧಿಪಡಿಸಲಾಗಿದ್ದು, ಅದರಲ್ಲಿ ಮುಂಗಾರು ಋತುವಿನಲ್ಲಿ 0.88 ಲಕ್ಷ ಮೆಟ್ರಿಕ್ ಟನ್ & ಹಿಂಗಾರು ಋತುವಿನಲ್ಲಿ 2.12 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಖರೀದಿಸಲು ಮಿತಿಯನ್ನು ನಿಗಧಿಪಡಿಸಲಾಗಿರುತ್ತದೆ. ಅಲ್ಲದೇ ಒಬ್ಬ ರೈತನು ಯಾವುದಾದರು ಒಂದು ಋತುವಿನಲ್ಲಿ ಮಾತ್ರ ಸದರಿ ಯೋಜನೆಯಡಿ ಜೋಳವನ್ನು ನೋಂದಣಿ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದ್ದು, ನಾಳೆ ಅಂದರೆ ದಿನಾಂಕ: 14.01.2026 ರಿಂದ ರೈತರಿಂದ ನೋಂದಣಿ ಪ್ರಾರಂಭಗೊಳ್ಳುತ್ತಿರುವುದರಿಂದ ಈ ಬಗ್ಗೆ ತಮ್ಮ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ, ರೈತರಿಗೆ ಮಾಹಿತಿ ನೀಡಲು ಹಾಗೂ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸುಗುಮವಾಗಿ ಕೈಗೊಳ್ಳಲು ಸೂಚಿಸಿದೆ.



