ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಸಿಗಲಿವೆ ಹಲವು ಸೇವೆ

ಭಾರತೀಯ ಜೀವವಿಮಾನ ನಿಗಮದ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಎಲ್ಐಸಿ ಗ್ರಾಹಕರಿಗೆ ವಾಟ್ಸಾಪ್ ನಲ್ಲಿ 9 ಸೇವೆಗಳು ಲಭ್ಯವಿರಲಿವೆ.

9 ಕ್ಕೂ ಅಧಿಕ ಸೇವೆಗಳನ್ನು ಎಲ್ಐಸಿ ಗ್ರಾಹಕರು ವಾಟ್ಸಾಪ್ ಮೂಲಕ ಪಡೆದುಕೊಳ್ಳಬಹುದು. ವಿಮೆ ಪಾಲಿಸಿಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೇವೆಗಳನ್ನು ಗ್ರಾಹಕರಿಗೆ ಒದಗಿಸಲು ಎಲ್ಐಸಿ ವಾಟ್ಸಾಪ್ ಯಾವುದೇ ಸಂದರ್ಭದಲ್ಲಿ ಇದು ಸೇವೆಗೆ ಲಭ್ಯವಿರಲಿದೆ ಎಂದು ಹೇಳಲಾಗಿದೆ.

ಎಲ್ಐಸಿ ಗ್ರಾಹಕರು ವಾಟ್ಸಾಪ್ ನಲ್ಲಿ ಸಾಲಕ್ಕೆ ಅರ್ಹತೆ ಕುರಿತಾದ ಮಾಹಿತಿ, ಮರುಪಾವತಿಸಬೇಕಾದ ಮೊತ್ತ, ವಿಮೆ ಯೋಜನೆಯ ಸ್ಥಿತಿ, ಬೋನಸ್, ಎಲ್ಐಸಿ ಸೇವೆಗಳ ಲಿಂಕ್, ಪ್ರೀಮಿಯಂ ಪಾವತಿಗೆ ಕೊನೆಯ ದಿನಾಂಕ, ಸಾಲದ ಬಡ್ಡಿ ಪಾವತಿಗೆ ಕೊನೆಯ ದಿನಾಂಕ, ಪಾವತಿ ಮಾಡಿದ ಪ್ರೀಮಿಯಂಗೆ ಪ್ರಮಾಣ ಪತ್ರ ಮೊದಲಾದ ಸೇವೆಗಳನ್ನು ಪಡೆದುಕೊಳ್ಳಬಹುದು.

ಇದಕ್ಕಾಗಿ ಮೊದಲಿಗೆ www.licindia.com ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ನೋಂದಣಿಯಾದ ಮೊಬೈಲ್ ನಂಬರ್ ನಿಂದ +91 89768 62090 ಸಂಖ್ಯೆಗೆ Hi ಎಂದು ಮೆಸೇಜ್ ಕಳುಹಿಸಬೇಕು. ವಾಟ್ಸಾಪ್ ಮೂಲಕ ಸುಲಭ ಮತ್ತು ಸುರಕ್ಷಿತವಾಗಿ ಪಾಲಿಸಿದಾರರು ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read