
ಸದ್ಯ. ಶ್ರೀರಂಗಪಟ್ಟಣ ತಾಲ್ಲೂಕಿನ KRS ಜಲಾಶಯದ ನೀರಿನ ಗರಿಷ್ಠಮಟ್ಟ 124.80 ಅಡಿಯಿದ್ದು, ಇಂದಿನ ಮಟ್ಟ 97.78 ಅಡಿ, ಒಳಹರಿವು 4153 ಕ್ಯೂಸೆಕ್, ಹೊರಹರಿವು 2176 ಕ್ಯೂಸೆಕ್, ಟಿಎಂಸಿ ಲೆಕ್ಕದಲ್ಲಿ 49.452. ಇಂದಿನ ಟಿಎಂಸಿ 21.12 ಇದೆ.
ತಮಿಳುನಾಡಿಗೆ ಪ್ರತಿದಿನ ಅ.15 ರವರೆಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ಪ್ರಾಧಿಕಾರ ನಿನ್ನೆ ಆದೇಶ ಹೊರಡಿಸಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ರಾಜ್ಯದಲ್ಲಿ ರೈತ ಸಂಘಟನೆಗಳು ಮತ್ತೆ ಪ್ರತಿಭಟನೆ ನಡೆಸುತ್ತಿದೆ.

