ಟಾಕ್ಸಿಕ್ ಸಿನಿಮಾ ಬರುವ ಮೊದಲು ಗೀತು ಮೋಹನದಾಸ್ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಆದರೆ ಯಶ್ ಜೊತೆಗಿನ ಸಿನಿಮಾ ಘೋಷಣೆಯಾದಾಗ ಅವರ ಹೆಸರು ಬಹಳ ಜನಪ್ರಿಯವಾಯಿತು. ಆದರೆ, ಟಾಕ್ಸಿಕ್ ಸಿನಿಮಾ ಘೋಷಣೆಯಾದಾಗ, ಅನೇಕ ಜನರು ಅಚ್ಚರಿಗೊಂಡರು. ಇಲ್ಲಿಯವರೆಗೆ ಯಾವುದೇ ಕಮರ್ಷಿಯಲ್ ಸಿನಿಮಾ ಮಾಡದ ಗೀತು ಮೋಹನದಾಸರು, ಯಶ್ ನಂತಹ ಪ್ಯಾನ್ ಇಂಡಿಯಾ ನಾಯಕನನ್ನು ಹೇಗೆ ನಿಭಾಯಿಸುತ್ತಾರೆ ? ಹಲವು ಅನುಮಾನಗಳನ್ನು ವ್ಯಕ್ತಪಡಿಸಿದರು.
ಗುರುವಾರ ಬಿಡುಗಡೆಯಾದ ಟಾಕ್ಸಿಕ್ ಟೀಸರ್ನೊಂದಿಗೆ ಈ ಎಲ್ಲಾ ಅನುಮಾನಗಳು ನಿವಾರಣೆಯಾದವು. ಗೀತು ಮೋಹನದಾಸರನ್ನು ರಾಮ್ ಗೋಪಾಲ್ ವರ್ಮಾ ಕೂಡ ಹೊಗಳಿದರು, ಈ ಸಿನಿಮಾವನ್ನು ಒಬ್ಬ ಮಹಿಳಾ ನಿರ್ದೇಶಕಿ ಮಾಡಿದ್ದಾರೆ ಎಂದರೆ ನಂಬಲು ಆಗಲ್ಲ ಎಂದರು. ಅವರ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.
ಗೀತು ಮೋಹನ್ ದಾಸ್ ಯಾರು..?
ಗೀತು ಮೋಹನ್ ದಾಸ್ ನಿಜವಾದ ಹೆಸರು ಗಾಯತ್ರಿ. ಅವರ ತಂದೆಯ ಹೆಸರು ಮೋಹನ್ ದಾಸ್. ಅವರು ಮಲಯಾಳಿ ಕುಟುಂಬದಿಂದ ಬಂದವರು. ಕೇರಳದ ಕೊಚ್ಚಿಯಲ್ಲಿ ಜನಿಸಿದ ಗೀತು ಮೊದಲು ಬಾಲನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ನಟಿಯಾದರು. ‘ಒನ್ನು ಮುಟ್ಟಲ್ ಪೂಜ್ಯಂ ವಾರೆ’ ಗೀತು ಮೋಹನ್ ದಾಸ್ ಅವರ ಬಾಲನಟಿಯಾಗಿ ಮೊದಲ ಚಿತ್ರವಾಗಿತ್ತು. ಈ ಚಿತ್ರಕ್ಕೆ ಮೋಹನ್ ಲಾಲ್ ಧ್ವನಿ ನೀಡಿದ್ದಾರೆ ಮತ್ತು ಕೊನೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವನ್ನು ಮಾಡುವ ಸಮಯದಲ್ಲಿ ಗೀತು ಅವರಿಗೆ ಕೇವಲ ನಾಲ್ಕು.
ಲೈಫ್ ಈಸ್ ಬ್ಯೂಟಿಫುಲ್
ನಾಯಕಿಯಾಗಿ ಗೀತು ಮೋಹನ್ ದಾಸ್ ಅವರ ಪ್ರಯಾಣವು ಮೋಹನ್ ಲಾಲ್ ಅವರ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರದೊಂದಿಗೆ ಪ್ರಾರಂಭವಾಯಿತು. ಅದರಲ್ಲಿ ಅವರು ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿದ್ದರು. ಇದಾದ ನಂತರ ಅವರು ಅನೇಕ ಚಿತ್ರಗಳನ್ನು ಮಾಡಿದರು., ‘ಅಕಲೆ’ ಚಿತ್ರದಲ್ಲಿನ ಗೀತು ಮೋಹನ್ ದಾಸ್ ಅವರ ಅಭಿನಯವು ಅವರಿಗೆ ಒಳ್ಳೆಯ ಹೆಸರನ್ನು ಗಳಿಸಿಕೊಟ್ಟಿತು… ಅವರು ಕೇರಳ ರಾಜ್ಯ ಪ್ರಶಸ್ತಿಯನ್ನು ಸಹ ಗೆದ್ದರು. ಅವರು ಸಿನಿಮಾಟೋಗ್ರಾಫರ್ ರಾಜೀವ್ ರವಿ ಅವರನ್ನು ವಿವಾಹವಾಗಿದ್ದು, ಅವರಿಗೆ ‘ಆರಾಧನಾ’ ಎಂಬ ಮಗಳಿದ್ದಾಳೆ. ರಾಜೀವ್ ರವಿ.ಭಾರತೀಯ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ (Cinematographer) ಮತ್ತು ನಿರ್ದೇಶಕ. ಗೀತು ಮೋಹನದಾಸ್ ನಿರ್ದೇಶನದ ‘ಲೈಯರ್ಸ್ ಡೈಸ್’ ಚಿತ್ರದ ಛಾಯಾಗ್ರಹಣಕ್ಕಾಗಿ ರಾಜೀವ್ ರವಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ನಿರ್ದೇಶಕಿಯಾಗಿ ಪಯಣ
ಗೀತು ಮೋಹನದಾಸ್ ಅವರ ಪ್ರಯಾಣವು ಹಿಂದಿ ಚಿತ್ರ ‘ಲಯರ್ಸ್ ಡೈಸ್’ ನೊಂದಿಗೆ ಪ್ರಾರಂಭವಾಯಿತು. ಅದಕ್ಕೂ ಮೊದಲು ಅವರು ಕಿರುಚಿತ್ರವನ್ನು ನಿರ್ಮಿಸಿದರು. ‘ಲಯರ್ಸ್ ಡೈಸ್’ ಚಿತ್ರಕ್ಕಾಗಿ ಗೀತಾಂಜಲಿ ಥಾಪಾ ಮತ್ತು ರಾಜೀವ್ ರವಿ ಅತ್ಯುತ್ತಮ ನಟಿ ಮತ್ತು ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ಇದರ ನಂತರ, ಮಹಿಳಾ ನಿರ್ದೇಶಕಿ ಪ್ರೇಮಂ ನಾಯಕ ನಿವಿನ್ ಪೌಲಿ ಅವರೊಂದಿಗೆ ಮೂಥೋನ್ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಈಗ, ಗೀತು ಮೋಹನದಾಸ್ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ನಿರ್ದೇಶನ:
ಕಿರುಚಿತ್ರ ‘ಆರ್ ಯು ಲಿಸನಿಂಗ್?’ (“Are You Listening?”) ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ.
‘ಲೈಯರ್ಸ್ ಡೈಸ್’ (Liar’s Dice) ಚಿತ್ರವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು ಮತ್ತು ಆಸ್ಕರ್’ಗೆ ಭಾರತದ ಅಧಿಕೃತ ಸಲ್ಲಿಕೆಯಾಗಿತ್ತು.
ಮೂಥೋನ್’ (Moothon) ಚಿತ್ರವು ಸನ್ಡಾನ್ಸ್ ಚಲನಚಿತ್ರೋತ್ಸವದಲ್ಲಿ ‘ಗ್ಲೋಬಲ್ ಫಿಲ್ಮ್ಮೇಕಿಂಗ್ ಅವಾರ್ಡ್’ ಗೆದ್ದಿತು.

