HomeLatest Newsದುಬೈನಲ್ಲಿ ಫೇಮಸ್ ಆಗಿರೋ ʼಬಿರಿಯಾನಿ ಟೀʼ ಟ್ರೈ ಮಾಡಿದ್ದೀರಾ? ಇಲ್ಲಿದೆ ಅದರ ರೆಸಿಪಿ

ದುಬೈನಲ್ಲಿ ಫೇಮಸ್ ಆಗಿರೋ ʼಬಿರಿಯಾನಿ ಟೀʼ ಟ್ರೈ ಮಾಡಿದ್ದೀರಾ? ಇಲ್ಲಿದೆ ಅದರ ರೆಸಿಪಿ

ಚಳಿಗಾಲದಲ್ಲಿ ಬಿಸಿ ಬಿಸಿ ಟೀ, ಕಾಫಿ ಕುಡಿಯೋದು ಎಲ್ಲರಿಗೂ ಇಷ್ಟ. ಗ್ರೀ ಟೀಯಿಂದ ಹಿಡಿದು ಮಸಾಲೆ ಟೀವರೆಗೆ ಎಲ್ಲ ವೆರೈಟಿ ಟೀ ಕುಡಿಯಲು ಜನರು ಇಷ್ಟಪಡ್ತಾರೆ. ಈ ಬಾರಿ ನೀವು ಹೊಸ ರೆಸಿಪಿ ಟ್ರೈ ಮಾಡಬಹುದು. ದುಬೈನಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಟೀ ಹೆಸರು ಬಿರಿಯಾನಿ ಟೀ.

ಶೆಫ್‌ ನೇಹಾ ದೀಪಕ್ ಶಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಿರಿಯಾನಿ ಟೀ ಬಗ್ಗೆ ಹೇಳಿದ್ದಾರೆ. ಇದು ದುಬೈನಲ್ಲಿ ಸಾಕಷ್ಟು ಪ್ರಸಿದ್ಧಿಯಾಗಿದ್ದು, ಈ ಟೀ ಕುಡಿಯೋಕೆ ಜನ ಕ್ಯೂನಲ್ಲಿ ನಿಲ್ಲುತ್ತಾರಂತೆ. ನೇಹಾ, ಈ ಟೀ ಮಾಡೋದು ಹೇಗೆ ಎಂಬುದನ್ನೂ ಹೇಳಿದ್ದಾರೆ.

ಬಿರಿಯಾನಿ ಟೀ ಮಾಡಲು ಬೇಕಾಗುವ ಸಾಮಗ್ರಿ :

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1/2 ಲೀಟರ್ ನೀರು

2 ದಾಲ್ಚಿನ್ನಿ ತುಂಡು

1  ಸ್ಟಾರ್ ಸೋಂಪು

7 ರಿಂದ 8 ಕರಿಮೆಣಸಿನ ಕಾಳು

4 ಏಲಕ್ಕಿ

1/2 ಟೀ ಚಮಚ ಸೋಂಪು

1/2 ಟೀ ಚಮಚ ಟೀ ಎಲೆ

1 ಚಮಚ ಶುಂಠಿ

2 ಟೀ ಚಮಚ ಜೇನುತುಪ್ಪ

1 ಟೀ ಚಮಚ ನಿಂಬೆ ರಸ

4-5 ಪುದೀನ ಎಲೆ

ಬಿರಿಯಾನಿ ಟೀ ಮಾಡುವ ವಿಧಾನ :

ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ. ಅದಕ್ಕೆ ದಾಲ್ಚಿನ್ನಿ, ಸ್ಟಾರ್ ಸೋಂಪು, ಕರಿಮೆಣಸು, ಏಲಕ್ಕಿ ಮತ್ತು ಸೋಂಪನ್ನು ಹಾಕಿ ಕುದಿಸಿ. ಅದು ಚೆನ್ನಾಗಿ ಕುದ್ದ ಮೇಲೆ ಅದಕ್ಕೆ ಟೀ ಎಲೆಗಳನ್ನು ಹಾಕಿ. ಐದರಿಂದ ಏಳು ನಿಮಿಷ ಕುದಿಯಲು ಬಿಡಿ. ಆ ನಂತ್ರ ಒಂದು ಗ್ಲಾಸ್‌ ಗೆ ಶುಂಠಿ ರಸ, ಜೇನುತುಪ್ಪ, ನಿಂಬೆ ರಸ ಹಾಗೂ ಪುದೀನಾ ಎಲೆಗಳನ್ನು ಹಾಕಿ ಅದಕ್ಕೆ ಈ ಬಿಸಿ ಬಿಸಿ ಟೀಯನ್ನು ಹಾಕಿ ಸರ್ವ್‌ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular