ಬೆಂಗಳೂರು : ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಕಾಡುವ ಮೊದಲ ಪ್ರಶ್ನೆ ‘ಮುಂದಿನ ಓದು ಯಾವುದು?’. ಸರಿಯಾದ ಸಮಯದಲ್ಲಿ ಸರಿಯಾದ ಕೋರ್ಸ್ ಆಯ್ಕೆ ಮಾಡುವುದು ವಿದ್ಯಾರ್ಥಿಯ ವೃತ್ತಿಜೀವನದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ. ಕೇವಲ ಸಾಂಪ್ರದಾಯಿಕ ಪದವಿಗಳಷ್ಟೇ ಅಲ್ಲದೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೂರಾರು ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳು ಲಭ್ಯವಿವೆ.
ವಿದ್ಯಾರ್ಥಿಗಳ ಆಸಕ್ತಿ, ಸಾಮರ್ಥ್ಯ ಮತ್ತು ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಎಸ್‌ಎಸ್‌ಎಲ್‌ಸಿ ನಂತರ ಲಭ್ಯವಿರುವ ಪಿಯುಸಿ, ಡಿಪ್ಲೊಮಾ, ಐಟಿಐ ಕೋರ್ಸ್‌ಗಳು ಹಾಗೂ ಪಿಯುಸಿ ನಂತರದ ಇಂಜಿನಿಯರಿಂಗ್, ಮೆಡಿಕಲ್, ಕಾಮರ್ಸ್, ಆರ್ಟ್ಸ್ ಮತ್ತು ಹೊಸ ತಲೆಮಾರಿನ ವೃತ್ತಿಪರ ಕೋರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
SSLC ಪಾಸಾದ ವಿದ್ಯಾರ್ಥಿಗಳು ಯಾವ ಕೋರ್ಸ್ ಆಯ್ಕೆ ಮಾಡಬಹುದು, ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ . ಯಾವೆಲ್ಲಾ ಕೋರ್ಸ್ ಗಳು ಲಭ್ಯವಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪಿಯುಸಿ ಶಿಕ್ಷಣದಲ್ಲಿ ಕಲೆ( ARTS) ಯನ್ನು ಆಯ್ದುಕೊಂಡರೆ ಭವಿಷ್ಯದಲ್ಲಿ ಶಿಕ್ಷಕರು, ಬರಹಗಾರರು, ಪತ್ರಿಕೋದ್ಯಮ ಕ್ಷೇತ್ರ, ಸಾಹಿತ್ಯ, ಲಲಿತಕಲೆ, ರಾಜಕೀಯ ಕ್ಷೇತ್ರ, ಅರ್ಥಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬಹುದು. ನೀವು ಕಾಮರ್ಸ್ (COMMERCE) ಆಯ್ಕೆ ಮಾಡಿದರೆ ಬ್ಯಾಂಕಿಂಗ್, ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ವಿಜ್ಞಾನ (SCIENCE) ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಡಾಕ್ಟರ್, ಎಂಜಿನಿಯರ್ ಆಗಬಹುದು. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಬಹುದು.
ಹಾಗೂ ವಿದ್ಯಾರ್ಥಿಗಳು ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಷನ್, ವೆಬ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್ಗಳು, ಡಿಜಿಟಲ್ ಮಾರ್ಕೆಟಿಂಗ್, ಡಿಪ್ಲೋಮಾ ಇನ್ 2ಡಿ ಮತ್ತು 3ಡಿ ಎನಿಮೇಷನ್, ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಪ್ರಮಾಣಪತ್ರ ಕೋರ್ಸ್ಗಳು(ಜಾವ, ಸಿಸಿ++) ಕೋರ್ಸ್ಗಳನ್ನು ಬೇಡಿಕೆಯ ಪ್ರವೃತ್ತಿಗೆ ಅನುಗುಣವಾಗಿ ನೀಡಲಾಗುತ್ತದೆ.
1) ಡಿಪ್ಲೊಮಾ / ಪಾಲಿಟೆಕ್ನಿಕ್ (Diploma – 3 ವರ್ಷ)
ತಾಂತ್ರಿಕ ಕೌಶಲ್ಯ ಪಡೆದು ಬೇಗ ಉದ್ಯೋಗಕ್ಕೆ ಸೇರಲು ಬಯಸುವವರಿಗೆ ಇದು ಉತ್ತಮ ದಾರಿ. ಡಿಪ್ಲೊಮಾ ನಂತರ ನೇರವಾಗಿ ಇಂಜಿನಿಯರಿಂಗ್ ಎರಡನೇ ವರ್ಷಕ್ಕೆ (Lateral Entry) ಪ್ರವೇಶ ಪಡೆಯಬಹುದು.
- ಪ್ರಮುಖ ವಿಭಾಗಗಳು: ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಇಂಜಿನಿಯರಿಂಗ್ ಇತ್ಯಾದಿ.
2) ಐಟಿಐ (ITI – 1 ರಿಂದ 2 ವರ್ಷ)
ಕಡಿಮೆ ಅವಧಿಯಲ್ಲಿ ತಾಂತ್ರಿಕ ತರಬೇತಿ ಪಡೆದು ಕೆಲಸಕ್ಕೆ ಸೇರಲು ಅಥವಾ ಸ್ವಯಂ ಉದ್ಯೋಗ ಆರಂಭಿಸಲು ಇದು ಸಹಕಾರಿ.
- ಟಾಪ್ ಟ್ರೇಡ್‌ಗಳು: ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್ ಡೀಸೆಲ್, ಕಂಪ್ಯೂಟರ್ ಆಪರೇಟರ್ (COPA).
3) ಇತರ ವೃತ್ತಿಪರ ಮತ್ತು ಅಲ್ಪಾವಧಿ ಕೋರ್ಸ್‌ಗಳು (Short-term Courses)
ನೀವು ಸೃಜನಶೀಲ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ಕೋರ್ಸ್‌ಗಳನ್ನು ಮಾಡಬಹುದು:
- ಪ್ಯಾರಾಮೆಡಿಕಲ್: ಲ್ಯಾಬ್ ಟೆಕ್ನಿಷಿಯನ್, ನರ್ಸಿಂಗ್ ಅಸಿಸ್ಟೆಂಟ್.
- ಡಿಸೈನಿಂಗ್: ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಗ್ರಾಫಿಕ್ ಡಿಸೈನಿಂಗ್.
- ಡಿಜಿಟಲ್ ಸ್ಕಿಲ್ಸ್: ಡಿಜಿಟಲ್ ಮಾರ್ಕೆಟಿಂಗ್, ವೆಬ್ ಡೆವಲಪ್‌ಮೆಂಟ್, ಅನಿಮೇಷನ್ ಮತ್ತು ವಿಎಫ್‌ಎಕ್ಸ್.
- ಬ್ಯೂಟಿ ಮತ್ತು ವೆಲ್ನೆಸ್: ಬ್ಯೂಟಿಷಿಯನ್ ಕೋರ್ಸ್, ಮೇಕಪ್ ಆರ್ಟಿಸ್ಟ್.
ನಿರ್ಧಾರ ತೆಗೆದುಕೊಳ್ಳುವುದು ಹೇಗೆ?
- ನಿಮ್ಮ ಆಸಕ್ತಿ: ನಿಮಗೆ ಗಣಿತ ಇಷ್ಟವೇ? ಅಥವಾ ಬಿಡಿಸುವುದು (Drawing) ಇಷ್ಟವೇ? ನಿಮ್ಮ ಆಸಕ್ತಿಯನ್ನು ಮೊದಲು ಗುರುತಿಸಿ.
- ಗುರಿ: ನೀವು ಭವಿಷ್ಯದಲ್ಲಿ ಡಾಕ್ಟರ್ ಆಗಬೇಕೆ? ಇಂಜಿನಿಯರ್ ಆಗಬೇಕೆ? ಅಥವಾ ಸ್ವಂತ ಉದ್ಯಮ ಆರಂಭಿಸಬೇಕೆ? ಎಂಬುದನ್ನು ನಿರ್ಧರಿಸಿ.
- ಅವಧಿ: ಎಷ್ಟು ವರ್ಷಗಳ ಕಾಲ ಓದಲು ಸಾಧ್ಯವಿದೆ? ಎಂಬುದನ್ನು ಗಮನದಲ್ಲಿಡಿ (ಪಿಯುಸಿ + ಡಿಗ್ರಿ = 5 ವರ್ಷ, ಐಟಿಐ = 2 ವರ್ಷ).










ದ್ವಿತೀಯ ಪಿಯುಸಿ ನಂತರ ಮುಂದೇನು..? ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ
1) ಕಲಾ ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ
ಕಲಾ ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ ಈ ಕೋರ್ಡ್ಗಳನ್ನು ಮಾಡಬಹುದು. ಫ್ಯಾಶನ್ ಡಿಸೈನಿಂಗ್, ಹೋಟೆಲ್ ಮ್ಯಾನೇಜೆಂಟ್, ಪ್ರಾಡಕ್ಟ್ ಡಿಸೈನ್,, ಡಿಪ್ರೆಶನ್ ಕೌನ್ಸೆಲಿಂಗ್, ಕಾನೂನು ಪದವಿ ಮಾಡಬಹುದು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತೆಗೆದುಕೊಂಡರೆ ರೇಡಿಯೋ, ಟಿವಿ, ದಿನಪತ್ರಿಕೆ, ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಡಿಸೈನಿಂಗ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಿರುವುದರಿಂದ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಹೆಚ್ಚಿನ ಬೇಡಿಕೆ ಇದೆ. ಇದರ ಜೊತೆ ನೀವು ಆಭರಣಗಳ ಡಿಸೈನಿಂಗ್ ಸಹ ಕಲಿಯಬಹುದಾಗಿದೆ. ಈ ಕೋರ್ಸ್ ಮುಗಿದ ಮೇಲೆ ಒಳ್ಳೆಯ ಉದ್ಯೋಗವಾಕಶಗಳು ಸಿಗುತ್ತವೆ. ಹಾಗೂ ನೀವು ಬ್ಯಾಚುಲರ್ ಆಫ್ ಲಾ ಕೂಡ ಮಾಡಬಹುದು. ನೀವು ಈ ಕೋರ್ಸ್ ಆಯ್ಕೆಮಾಡಿಕೊಳ್ಳುವವರಿದ್ದರೆ, ಎಲ್ಎಲ್ಸಿ ಪದವಿಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಡಿಯಲ್ಲಿ ಬರುವ ಸಂಸ್ಥೆಯಲ್ಲಿ ಮಾಡಬೇಕು.
2) ವಾಣಿಜ್ಯ ( ಕಾಮರ್ಸ್ ) ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ
ವಾಣಿಜ್ಯ ( ಕಾಮರ್ಸ್ ) ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ ಬಿ.ಕಾಂ, ಬಿಬಿಎಂ ಮಾಡಬಹುದು. ಈ ಕೋರ್ಸ್ ಮಾಡುವುದರಿಂದ ಬ್ಯಾಂಕ್ ಸೇರಿದಂತೆ ವಿವಿಧ ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡಬಹುದು. ವಾಣಿಜ್ಯ ( ಕಾಮರ್ಸ್ ) ವಿಭಾಗದಲ್ಲಿ ನೀವು ಪಿಯುಸಿ ಪಾಸ್ ಮಾಡಿದ್ರೆ ಬಿಬಿಎ, ಬಿಕಾಂ, ಬಿಎ ಅರ್ಥಶಾಸ್ತ್ರ, ಎಂಬಿಎ ಮತ್ತು ಪಿಜಿಡಿಎಂ ಓದಿ ಸುಲಭವಾಗಿ ಉದ್ಯೋಗ ಪಡೆಯಬಹುದು. ಬಿ.ಕಾಂ ಮಾಡಿ ಎಂಬಿಎ ಮಾಡಿದರೆ ಉನ್ನತ ಕಂಪನಿ, ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಬಿ.ಕಾಂ ಮಾಡಿ (ಸಿಎ) ಚಾರ್ಟೆಟ್ ಅಕೌಂಟೆಂಟ್ ಪರೀಕ್ಷೆ ಪಾಸ್ ಮಾಡಿದರೆ ಹಲವು ಅವಕಾಶಗಳು ಸಿಗುತ್ತದೆ.
3) ವಿಜ್ಞಾನ ವಿಷಯದೊಂದಿಗೆ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದರೆ
ವಿಜ್ಞಾನ ವಿಷಯದೊಂದಿಗೆ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದರೆ ಎಂಬಿಬಿಎಸ್, ಆರ್ಕಿಟೆಕ್ಟರ್, ಏವಿಯೇಷನ್ನಲ್ಲಿ ಸೌಂಡ್ ಇಂಜಿನಿಯರಿಂಗ್ ಮಾಡಬಹುದು. ಸಿವಿಲ್ ಎಂಜಿನಿಯರಿಂಗ್, ಎಲೆಕ್ನಿಕಲ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್ ಮುಂತಾದ ಆಯ್ಕೆಗಳು ಸಿಗುತ್ತದೆ., ಸಿವಿಲ್ ಎಂಜಿನಿಯರಿಂಗ್, ಎಲೆಕ್ನಿಕಲ್ ಎಂಜಿನಿಯರಿಂಗ್, ಏರೋಸ್ಪೇಸ್ ಎಂಜಿನಿಯರಿಂಗ್ ಮಾಡಬಹುದು.
೧. ಪಿಯುಸಿ ನಂತರದ ಪ್ರಮುಖ ಪದವಿ ಕೋರ್ಸ್‌ಗಳು
ವಿಜ್ಞಾನ ವಿಭಾಗ (Science)
- ತಾಂತ್ರಿಕ ಮತ್ತು ಇಂಜಿನಿಯರಿಂಗ್: B.E / B.Tech (Computer Science, AI & Data Science, Robotics, Aerospace).
- ವೈದ್ಯಕೀಯ ಮತ್ತು ಸಂಬಂಧಿತ: MBBS, BDS, B.Pharm, B.Sc Nursing, BPT (Physiotherapy).
- ಶುದ್ಧ ವಿಜ್ಞಾನ (Pure Science): B.Sc (Agriculture, Forensic Science, Biotechnology, Statistics).
- ಕಂಪ್ಯೂಟರ್ ಅಪ್ಲಿಕೇಶನ್: BCA (Software Development, IT).
ವಾಣಿಜ್ಯ ವಿಭಾಗ (Commerce)
- ಸಾಂಪ್ರದಾಯಿಕ ಪದವಿ: B.Com (Regular, Taxation, Capital Markets).
- ವೃತ್ತಿಪರ ಕೋರ್ಸ್‌ಗಳು: CA (Chartered Accountancy), CS (Company Secretary), CMA.
- ನಿರ್ವಹಣೆ (Management): BBA (Finance, Digital Marketing, Logistics), BBM.
- ವಿಶೇಷ ಕೋರ್ಸ್‌ಗಳು: B.Com in Fintech, Business Analytics.
ಕಲೆ ವಿಭಾಗ (Arts/Humanities)
- ಕಾನೂನು: Integrated BA LLB (5 ವರ್ಷ).
- ಸಮೂಹ ಸಂವಹನ: BA in Journalism and Mass Communication.
- ವಿನ್ಯಾಸ (Design): B.Des (Fashion, Graphic, UI/UX Design).
- ಮಾನವಿಕ ಶಾಸ್ತ್ರ: BA (Psychology, Economics, Political Science, English).
- ಇತರೆ: BHM (Hotel Management), BFA (Fine Arts).
ಇಂದಿನ ಬೇಡಿಕೆಗೆ ತಕ್ಕ ಶಾರ್ಟ್ ಟರ್ಮ್ ಸ್ಕಿಲ್ ಕೋರ್ಸ್‌ಗಳು
ಪದವಿ ಓದುತ್ತಾ ಅಥವಾ ಪದವಿಯ ನಂತರ ಬೇಗ ಉದ್ಯೋಗ ಪಡೆಯಲು ಈ ೩ ರಿಂದ ೧೨ ತಿಂಗಳ ಕೋರ್ಸ್‌ಗಳು ಹೆಚ್ಚು ಸಹಕಾರಿ:
| ಕೋರ್ಸ್ ಹೆಸರು | ಅವಧಿ | ಉದ್ಯೋಗದ ಅವಕಾಶ |
| ಡಿಜಿಟಲ್ ಮಾರ್ಕೆಟಿಂಗ್ | ೩-೬ ತಿಂಗಳು | SEO ಸ್ಪೆಷಲಿಸ್ಟ್, ಸೋಶಿಯಲ್ ಮೀಡಿಯಾ ಮ್ಯಾನೇಜರ್ |
| ಡೇಟಾ ಅನಾಲಿಟಿಕ್ಸ್ | ೪-೮ ತಿಂಗಳು | ಡೇಟಾ ಅನಲಿಸ್ಟ್, ಬಿಸಿನೆಸ್ ಇಂಟೆಲಿಜೆನ್ಸ್ |
| UI/UX ಡಿಸೈನಿಂಗ್ | ೬ ತಿಂಗಳು | ವೆಬ್ ಮತ್ತು ಆಪ್ ಡಿಸೈನರ್ |
| ಟ್ಯಾಲಿ ಮತ್ತು GST (Tally) | ೩ ತಿಂಗಳು | ಅಕೌಂಟೆಂಟ್, ಟ್ಯಾಕ್ಸ್ ಅಸಿಸ್ಟೆಂಟ್ |
| ಗ್ರಾಫಿಕ್ ಡಿಸೈನಿಂಗ್ | ೪-೬ ತಿಂಗಳು | ಲೋಗೋ ಡಿಸೈನರ್, ಬ್ರ್ಯಾಂಡಿಂಗ್ ಎಕ್ಸ್‌ಪರ್ಟ್ |
| ಸೈಬರ್ ಸೆಕ್ಯೂರಿಟಿ | ೬-೧೨ ತಿಂಗಳು | ಸೆಕ್ಯೂರಿಟಿ ಅನಲಿಸ್ಟ್, ಎಥಿಕಲ್ ಹ್ಯಾಕರ್ |
| ವಿದೇಶಿ ಭಾಷೆ (ಜರ್ಮನ್/ಫ್ರೆಂಚ್) | ೬ ತಿಂಗಳು | ಅನುವಾದಕರು, MNC ಉದ್ಯೋಗಗಳು |
ವೃತ್ತಿಪರ (Vocational) ಕೋರ್ಸ್‌ಗಳು
ಕಡಿಮೆ ಅವಧಿಯಲ್ಲಿ ತಾಂತ್ರಿಕ ಕೌಶಲ್ಯ ಪಡೆಯಲು ಇವು ಉತ್ತಮ:
- ಪ್ಯಾರಾ ಮೆಡಿಕಲ್: ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ (MLT), ಎಕ್ಸ್-ರೇ ಟೆಕ್ನಿಷಿಯನ್.
- ಬ್ಯೂಟಿ ಮತ್ತು ವೆಲ್ನೆಸ್: ಮೇಕಪ್ ಆರ್ಟಿಸ್ಟ್, ಫಿಟ್ನೆಸ್ ಟ್ರೈನರ್.
- ಪ್ರವಾಸೋದ್ಯಮ: ಟ್ರಾವೆಲ್ ಅಂಡ್ ಟೂರಿಸಂ ಆಪರೇಷನ್ಸ್.
- ಫ್ಯಾಷನ್ ಡಿಸೈನಿಂಗ್: ಸರ್ಟಿಫಿಕೇಟ್ ಇನ್ ಬೊಟಿಕ್ ಮ್ಯಾನೇಜ್‌ಮೆಂಟ್.
ವಿದ್ಯಾರ್ಥಿಗಳಿಗೆ ಸಲಹೆ: ಕೋರ್ಸ್ ಆಯ್ಕೆ ಮಾಡುವಾಗ ನಿಮ್ಮ ಆಸಕ್ತಿಯ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಆ ಕ್ಷೇತ್ರಕ್ಕಿರುವ ಬೇಡಿಕೆಯನ್ನು ಗಮನಿಸಿ.

