HomeLatest NewsBIG NEWS : ರಾಜ್ಯದ 'DDPI' ಅಧಿಕಾರ ಮತ್ತು ಕರ್ತವ್ಯಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

BIG NEWS : ರಾಜ್ಯದ ‘DDPI’ ಅಧಿಕಾರ ಮತ್ತು ಕರ್ತವ್ಯಗಳೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು :   ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿ ಕಾರ್ಯನಿರ್ವಹಿಸುವ ಜಿಲ್ಲಾ ಉಪ ನಿರ್ದೇಶಕರ (DDPI) ಪ್ರಮುಖ ಜವಾಬ್ದಾರಿಗಳ ಕುರಿತಾದ ಸರ್ಕಾರಿ ಆದೇಶದ ವಿವರಗಳು ಲಭ್ಯವಾಗಿವೆ. ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲಾ ಶಿಕ್ಷಣದ ಮೇಲ್ವಿಚಾರಣೆ, ಶಿಕ್ಷಕರ ನೇಮಕಾತಿ ಅನುಮೋದನೆ, ಮತ್ತು ಪರೀಕ್ಷಾ ಅಕ್ರಮ ತಡೆಗೆ ಜಾಗೃತ ದಳ ರಚಿಸುವಿಕೆ ಸೇರಿದಂತೆ ಒಟ್ಟು 23 ಪ್ರಮುಖ ಅಧಿಕಾರಗಳನ್ನು ಇವರಿಗೆ ವಹಿಸಲಾಗಿದೆ.

ಉಪ ನಿರ್ದೇಶಕರುಗಳು

  1. ಜಿಲ್ಲೆಯಲ್ಲಿ ಪ್ರೌಢ ಶಾಲಾ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಪೂರ್ಣ ಜವಾಬ್ದಾರಿ ಇವರದಾಗಿದೆ.
  2. ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಯೋಜನೆ ತಯಾರಿಸಲು ಮಂಜೂರಾದ ಯೋಜನೆಗಳಿಗನುಸಾರ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅವಶ್ಯಕತೆಗನುಸಾರ ಇತರ ಇಲಾಖೆಗಳಿಂದ ಸೂಕ್ತ ಸಹಕಾರ ಪಡೆದು ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
  3. ಜಿಲ್ಲಾ ಮಟ್ಟದಲ್ಲಿ ಕ್ರೀಡಾನಿಧಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಸಂಬಂಧಿಸಿದ ಇತರೆ ನಿಧಿಗಳ ಸಂಗ್ರಹಣೆಗಾಗಿ ನಿಗದಿಪಡಿಸಿದ ಗುರಿ ಸಾಧಿಸುವಲ್ಲಿ ಅಧ್ಯಕ್ಷತೆಗೊಂಡುದಲ್ಲದೆ ಅವರಿಂದ ಸಂಘ ಸಭೆಯ ಅರ್ಹವಿರುವ ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಸಂಘ ದೊರಕಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
  4. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಮಾಧ್ಯಮ ಹಾಗೂ ಪ್ರೌಢ ಶಾಲಾ ಶಿಕ್ಷಕರ ಪ್ರಗತಿ ಅವಲೋಕಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವರು ಮತ್ತು ಶಿಕ್ಷಕರ ನವೀನತೆ ಮತ್ತು ಕಾರ್ಯಾತ್ಮಕ ಸಂಶೋಧನೆಗಳನ್ನು ಅಳವಡಿಸಿಕೊಳ್ಳಲು ಸೂಕ್ತ ಪ್ರೋತ್ಸಾಹ ಮತ್ತು ನೆರವು ನೀಡುವುದು.
  5. ಪ್ರಚಲಿತ ಮಾರ್ಗದರ್ಶನಗಳನ್ನಾಧರಿಸಿ ವಿದ್ಯಾರ್ಥಿಗಳ ತಡವಾದ ದಾಖಲಾತಿ, ಶಿಕ್ಷಣ ಮಾಧ್ಯಮ ಹಾಗೂ ಅಧ್ಯಯನ ಭಾಷೆಗಳ ಬದಲಾವಣೆಗಳಿಗೆ ಸಂದರ್ಭಾನುಸಾರ ಅನುಮತಿ ನೀಡುವುದು.
  6. ‘ಜಿಲ್ಲಾ ಶಿಕ್ಷಣಾಧಿಕಾರಿಗಳ’ ಪ್ರಸ್ತಾವನೆ ಮತ್ತು ಸಮರ್ಪಕ ವಿದ್ಯಾರ್ಥಿಗಳ ಹಾಜರಾತಿಯಲ್ಲಿನ ಬೆಳವಣಿಗೆಗಳಿಗನುಸಾರ ಜಿಲ್ಲೆಯಲ್ಲಿ ಹೆಚ್ಚುವರಿಯಾಗಬೇಕಾಗುವ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಲು ಪ್ರತಿ ವರ್ಷ ಜಿಲ್ಲಾ ಪಂಚಾಯಿತಿಯ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಮಂಜೂರಾದ ಹೊಸ ಶಿಕ್ಷಕರ ಹುದ್ದೆಗಳನ್ನು ಅವಶ್ಯಕತೆಗನುಸಾರ ಶೈಕ್ಷಣಿಕ ವಲಯಗಳು ಮತ್ತು ಶಾಲೆಗಳಿಗೆ ಹಂಚುವುದು.
  7. ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳ ಜಂಟಿ ಖಾತೆಗಳಲ್ಲಿನ ಸ್ಥಿರ ನಿಧಿ ಠೇವಣಿಗಳನ್ನು ನೋಂದಾಯಿಸಿಕೊಂಡು ಆಗಿಂದಾಗ್ಗೆ ಅದನ್ನು ನವೀಕರಿಸಲು ಹೆಚ್ಚಿನ ಹಣದ ಅವಶ್ಯಕತೆಗನುಸಾರ ಬಳಸಲು ಆದೇಶ ನೀಡುವುದು.
  8. ಖಾಸಗಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ನೇಮಕಾತಿಯನ್ನು ರೋಸ್ಟರ್ ಪದ್ಧತಿಗಳನುಸಾರ ಪರಿಶೀಲಿಸಿ ಅರ್ಹತೆಗಳಿಗನುಸಾರ ಅನುಮೋದನೆ ನೀಡುವುದು;
  9. ಖಾಸಗಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಅಂತರ ವಲಯ ವರ್ಗಾವಣೆಗಳನ್ನು ಪರಿಶೀಲಿಸಿ ಸಮರ್ಪಕವಾಗಿದ್ದಲ್ಲಿ ಅವುಗಳನ್ನು ಅನುಮೋದಿಸುವರು.
  10. ಸರ್ಕಾರಿ ಶಾಲೆಗಳ ಶಿಕ್ಷಕರ ಸಿಬ್ಬಂದಿ ವರ್ಗಗಳ ಅಂತರ ವಲಯ ವರ್ಗಾವಣೆಗಳಿಗೆ ಸರ್ಕಾರಿ ಆದೇಶಗಳನ್ವಯ ವರ್ಗಾವಣೆಗಳನ್ನು ಮಾಡಲು ಕ್ರಮ ಕೈಗೊಳ್ಳುವುದು.
  11. ಪ್ರತಿ ಜಿಲ್ಲೆಯಲ್ಲಿ ಕೊನೆ ಪಕ್ಷ ಒಂದು ಪ್ರೌಢಶಾಲೆ ಹಾಗೂ ಜಿಲ್ಲಾಮಟ್ಟದಲ್ಲಿನ ಮಾದರಿ ಸರ್ಕಾರಿ ಶಾಲೆ, ಕ್ರೀಡಾ ಶಾಲೆ, ಪರಿಶಿಷ್ಟ ಜಾತಿ ಪಂಗಡಗಳ ವಸತಿ ಶಾಲೆ ಇವುಗಳ ವಾರ್ಷಿಕ ತನಿಖೆಯನ್ನು ತಪ್ಪದೆ ನಡೆಸುವುದು.
  12. ‘ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯಗಳ ಕಾರ್ಯ ನಿರೀಕ್ಷಿಸಿ ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಲಹೆ, ಆದೇಶಗಳನ್ನು ನೀಡುವುದು.

  1. ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸಂಗೀತ, ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸೇವಾ ಇಲಾಖೆ ಹಾಗೂ ವಯಸ್ಕರ ಶಿಕ್ಷಣ ಇಲಾಖೆಗಳ ಕಾರ್ಯಕ್ರಮಗಳ ಸಲಹೆಗಾರರಾಗಿ ಕಾರ್ಯ ನಿರ್ವಹಿಸುವುದು. ಅವುಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯುವಲ್ಲಿ ಕ್ರಮಕೈಗೊಳ್ಳುವುದು.
  2. ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳಾದ ಪ್ರತಿಭಾ ಅನ್ವೇಷಣಾ ಪರೀಕ್ಷೆಗಳು, ಸಾಹಿತ್ಯದ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು, ಕ್ರೀಡಾಕೂಟಗಳು, ನಾಟಕ ಸ್ಪರ್ಧೆಗಳು ಮುಂತಾದವುಗಳನ್ನು ಆಯೋಜಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಪ್ರೋತ್ಸಾಹಿಸುವ ಮತ್ತು ಪುರಸ್ಕರಿಸುವ ವ್ಯವಸ್ಥೆ ಮಾಡುವುದು.
  3. ಜಿಲ್ಲೆಯಲ್ಲಿ ಎಲ್ಲಾ ವಲಯಗಳಲ್ಲಿ ಶಾಲಾ ಶಿಕ್ಷಣ ಸಮಿತಿಗಳು ಮತ್ತು ಗ್ರಾಮ ಶಿಕ್ಷಣ ಸಮಿತಿಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುವುದನ್ನು ಅನುಮೋದಿಸಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ‘ಜನತೆಯ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು’ ಪ್ರೋತ್ಸಾಹಿಸುವುದು.
  4. ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಕೆ.ಪಿ.ಎಸ್.ಸಿ. ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸಲು ಕ್ರಮಕೈಗೊಂಡು ಅವಶ್ಯಕವಾದ ಜಾಗೃತ ದಳ ರಚಿಸಿ ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರಗಳನ್ನು ತಡೆಗಟ್ಟುವ ಕ್ರಮ ಕೈಗೊಳ್ಳುವುದು.
  5. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಗಳು, ಜಿಲ್ಲೆಯಲ್ಲಿ ನಡೆಸುವ ಪ್ರೌಢಶಾಲಾ ಶಿಕ್ಷಕರ ಸೇವಾ ತರಬೇತಿ ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗಳು ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ನಡೆಸುವ ತರಬೇತಿ ಕಾರ್ಯಕ್ರಮಗಳು ಯಶಸ್ವಿಯಾಗುವಂತೆ ನೆರವು ಮತ್ತು ಮಾರ್ಗದರ್ಶನ ನೀಡುವರು.
  6. ವಲಯದಿಂದ ಸಂಗ್ರಹಿಸುವ ವಿವಿಧ ಮಾಹಿತಿಗಳನ್ನು ಕ್ರೋಢೀಕರಿಸಿ ಅವುಗಳನ್ನು ಜಿಲ್ಲಾ ಪಂಚಾಯಿತಿಗೆ ಹಾಗೂ ಇಲಾಖೆಗೆ ಸಕಾಲದಲ್ಲಿ ಸಲ್ಲಿಸುವುದು ಅಂಕಿ-ಅಂಶಗಳ ವರದಿ ಹಾಗೂ ಆರ್ಥಿಕ ಪ್ರಗತಿಗಳನ್ನು ತೋರಿಸುವ ವಾರ್ಷಿಕ ವರದಿಯನ್ನು ಪ್ರತಿ ವರ್ಷ ಪ್ರಕಟಿಸುವರು ಇದರಲ್ಲಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಗಳು ಅಡಕವಾಗಿರಬೇಕು.
  7. ವಲಯ ಶಿಕ್ಷಣಾಧಿಕಾರಿಗಳ ಶಿಫಾರಸ್ಸಿನಂತೆ ಶಾಲೆಗಳಲ್ಲಿ ಸಂಚಿತ ನಿಧಿಯಿಂದ ಖರೀದಿಸಲಾದ ಶೈಕ್ಷಣಿಕ ಉಪಕರಣಗಳನ್ನು ನಿರುಪಯುಕ್ತವೆಂದು, ಇಲ್ಲವೇ ನಶಿಸಿದ್ದು ಕಂಡುಬಂದಲ್ಲಿ ಸಾಮಾನ್ಯ ಆರ್ಥಿಕ ಅಧಿಕಾರ ಮಿತಿಯೊಳಗೆ ವಿಲೇವಾರಿ ಮಾಡಿ ತೆಗೆದು ಹಾಕಲು ಆದೇಶಿಸುವುದು.
  8. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯ್ದೆ, ಸಮಗ್ರ ಶಿಕ್ಷಣ ಕಾಯ್ದೆ, ಅನುದಾನ ಸಂಹಿತೆ ಶಿಕ್ಷಣ ಸಂಹಿತೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅಳವಡಿಸಲು ಸೂಕ್ತ ಕ್ರಮ ಕೈಗೊಂಡು ಅನಧಿಕೃತ ಶಾಲೆಗಳು ಕಾರ್ಯ ನಿರ್ವಹಿಸದಂತೆ ಸೂಕ್ತ ಎಚ್ಚರಿಕೆ ವಹಿಸುವುದು. ಇಲಾಖಾ ಮೇಲಧಿಕಾರಿಗಳ ಆದೇಶದ ಮೇರೆಗೆ ಕೈಗೊಳ್ಳುವ ಸದಸ್ಯ ಶಾಲಾಭಿವೃದ್ಧಿ ಸಮಿತಿ ಸಭೆಗಳು ಹಾಜರಾತಿ ಆಂದೋಲನ ಮತ್ತು ಅದಕ್ಕೆ ಪೂರಕವಾದ ಪ್ರೋತ್ಸಾಹದ ಯೋಜನೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಅಳವಡಿಸಲು ಕ್ರಮ ಕೈಗೊಳ್ಳುವುದು.
  9. ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತು ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪತ್ರಾಂಕಿತ ಅಧಿಕಾರಿಗಳ ರಹಸ್ಯ ವರದಿಗಳ ಬಗ್ಗೆ ವರದಿ ಮಾಡುವ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುವುದು.
  10. ಕಾಲಕಾಲಕ್ಕೆ ಇಲಾಖಾ ಮುಖ್ಯಸ್ಥರು ಸೂಚಿಸುವ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವರು.
  11. ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯನ್ನು ಕಾಲಕಾಲಕ್ಕೆ ಸರ್ಕಾರ ಸೂಚಿಸಿರುವ ನಿಯಮಗಳಾನುಸಾರ ನೇಮಕಾತಿಗಳನ್ನು ಮಾಡುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular