HomeLatest NewsBIG NEWS : ರಾಜ್ಯದ  ‘ಹಾಸ್ಟೆಲ್ ವಾರ್ಡನ್’ಗಳ ಕರ್ತವ್ಯಗಳೇನು..? ಇಲ್ಲಿದೆ ಮಾಹಿತಿ

BIG NEWS : ರಾಜ್ಯದ  ‘ಹಾಸ್ಟೆಲ್ ವಾರ್ಡನ್’ಗಳ ಕರ್ತವ್ಯಗಳೇನು..? ಇಲ್ಲಿದೆ ಮಾಹಿತಿ

ಬೆಂಗಳೂರು : ವಿದ್ಯಾರ್ಥಿನಿಲಯಗಳ ನಿರ್ವಹಣೆಯಲ್ಲಿ ನಿಲಯ ಮೇಲ್ವಿಚಾರಕರ ಪಾತ್ರ ಮುಖ್ಯವಾಗಿದ್ದು, ನಿಲಯದ ಸಮರ್ಪಕ / ಅಸಮರ್ಪಕ ನಿರ್ವಹಣೆಗೆ ನಿಲಯ ಮೇಲ್ವಿಚಾರಕರೇ ಬಹಳಮಟ್ಟಿಗೆ ಕಾರಣರಾಗಿರುತ್ತಾರೆ. ಅದ್ದರಿಂದ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.


I. ನಿಲಯಾರ್ಥಿಗಳ ಮೇಲ್ವಿಚಾರಣೆ


ವಿದ್ಯಾರ್ಥಿನಿಲಯಕ್ಕೆ ಪ್ರವೇಶ ಪಡೆದ ಎಲ್ಲಾ ವಿದ್ಯಾರ್ಥಿಗಳು (ದಸರಾ ಹಾಗೂ ಇನ್ನಿತರ ದೀರ್ಘಕಾಲದ ರಜೆ ಅವಧಿಯನ್ನು ಹೊರತುಪಡಿಸಿ) ನಿಲಯದಲ್ಲಿ ವಾಸ್ತವ್ಯವಿದ್ದು, ದಿನನಿತ್ಯ ಶಾಲೆಗೆ / ಕಾಲೇಜಿಗೆ ಜವಾಬ್ದಾರಿ ಹಾಜರಾಗುತ್ತಿರುವರೇ ఎంబ ಬಗ್ಗೆ ಸಂಪೂರ್ಣ ಮೇಲ್ವಿಚಾರಣೆ ಮಾಡುವ ನಿಲಯಮೇಲ್ವಿಚಾರಕದ್ದಾಗಿರುತ್ತದೆ. ಗೈರು ಹಾಜರಾದಂತಹ, ಅನುಮತಿಇಲ್ಲದೇ ಕೇಂದ್ರಸ್ಥಾನ ಬಿಟ್ಟು ಊರಿಗೆ ಹೋಗುವಂತಹ, ನಿಲಯದಲ್ಲಿ ವಾಸ್ತವ್ಯವಿದ್ದು, ಶಾಲೆಗೆ ಅಥವಾ ಶಾಲೆಯ ಎಲ್ಲಾ ತರಗತಿಗಳಿಗೆ ಹಾಜರಾಗದಂತಹ ವಿದ್ಯಾರ್ಥಿಗಳ ಪಾಲಕರನ್ನು ವಿದ್ಯಾರ್ಥಿನಿಲಯಕ್ಕೆ ಕರೆಸಿ ಇಂತಹ ಸ್ವಭಾವ /ನಡತೆಯನ್ನು ಮುಂದುವರೆಸಿದಲ್ಲಿ ಅಂತಹ ವಿದ್ಯಾರ್ಥಿಗಳನ್ನು ನಿಲಯದಿಂದ ಹೊರಹಾಕಲು ಮೇಲಾಧಿಕಾರಿಗಳಿಗೆ ವರದಿಮಾಡಲಾಗುವುದೆಂದು ಎಚ್ಚರಿಕೆ ನೀಡುವುದು. ಇಂತಹ ಎಚ್ಚರಿಕೆಯಿಂದಲೂ ಸುಧಾರಿಸದೇ ಇರುವಂತಹ ವಿದ್ಯಾರ್ಥಿಗಳನ್ನು ನಿಲಯದಿಂದ ತೆಗೆದುಹಾಕುವ ಕ್ರಮವನ್ನು ಕೈಗೊಳ್ಳತಕ್ಕದ್ದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ, ನಿಲಯಾರ್ಥಿಗಳ ವಾಸ್ತವ್ಯ, ಅವರಿಗೆ ಉತ್ತಮ / ಪೌಷ್ಠಿಕ ಆಹಾರ ನೀಡಿಕೆ, ಅವರ ಆರೋಗ್ಯ, ವ್ಯಾಸಂಗ, ವ್ಯಕ್ತಿತ್ವವಿಕಸನ ಇತ್ಯಾದಿಗಳ ಜವಾಬ್ದಾರಿಮೇಲ್ವಿಚಾರಕರದಾಗಿದ್ದು, ಇವರು ನಿಲಯಾರ್ಥಿಗಳಿಗೆ ಕೇವಲ ನಿಲಯಮೇಲ್ವಿಚಾರಕರಾಗಿರದೇ, ಪಾಲಕ ಹಾಗೂ ಶಿಕ್ಷಕರಾಗಿ ನಡೆದುಕೊಳ್ಳಬೇಕಾಗಿರುತ್ತದೆ. ನಿಲಯಾರ್ಥಿಗಳ ಶಿಸ್ತು, ನಡತೆ, ಹಾಜರಾತಿ, ವ್ಯಾಸಂಗದ ಪ್ರಗತಿ ಆರೋಗ್ಯ ಇವುಗಳ ಬಗ್ಗೆ ಅವರ ವೈಯಕ್ತಿಕ ವಿವರಗಳುಳ್ಳ ಕಡತವನ್ನು ನಿರ್ವಹಿಸಿ ಪಾಲಕರ ಸಭೆಯಲ್ಲಿ ವಿದ್ಯಾರ್ಥಿಯ ಪಾಲಕ / ಪೋಷಕರಿಗೆ ಕಡತದಲ್ಲಿನ ವಿವರಗಳನ್ನು ತೋರಿಸಿ ಸಹಿ ಪಡೆಯುವುದು.

II. ನಿಲಯದ ಸಿಬ್ಬಂದಿ ಕಾರ್ಯನಿರ್ವಹಣೆ ಕುರಿತಂತೆ ಮೇಲ್ವಿಚಾರಣೆ

ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿ ನಿಯತವಾಗಿ ಹಾಗೂ ನಿಗದಿತ ವೇಳೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೇ? ఎంబ ಬಗ್ಗೆ ಮೇಲ್ವಿಚಾರಕರು/ವಾರ್ಡನ್ರವರು ಮೇಲ್ವಿಚಾರಣೆ ಮಾಡತಕ್ಕದ್ದು. ಅನಧಿಕೃತವಾಗಿ ಗೈರುಹಾಜರಾಗುವ ಅಥವಾ ಕರ್ತವ್ಯಕ್ಕೆ ವಿಳಂಬವಾಗಿ ಬರುವ ಅಥವಾ ಕೆಲಸದ ವೇಳೆ ಮುಗಿಯುವ ಮುನ್ನವೇ ವಿದ್ಯಾರ್ಥಿನಿಲಯದಿಂದ ಹೊರ ಹೋಗುವ ಸಿಬ್ಬಂದಿಗೆ ತಮ್ಮ ಹಂತದಲ್ಲಿಯೇ ಲಿಖಿತವಾಗಿ ಎಚ್ಚರಿಕೆ ನೀಡುವುದು.

ಇಷ್ಟಾದರೂ ಸುಧಾರಿಸದಂತಹ ಸಿಬ್ಬಂದಿಯವರ ವಿರುದ್ಧ ಮೇಲಾಧಿಕಾರಿಗಳಿಗೆ ವರದಿಮಾಡಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡತಕ್ಕದ್ದು, ಅಡುಗೆ ಸಿಬ್ಬಂದಿಯವರು ಸಹ ಆರೋಗ್ಯವಂತ ರಾಗಿರುವಂತೆ ಮೇಲ್ವಿಚಾರಕರು ಕ್ರಮವಹಿಸುವುದು. ಅಡುಗೆಯವರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಶುಭ್ರ ಸಮವಸ್ತ್ರಗಳನ್ನು ತೊಟ್ಟಿರಬೇಕು. ಅವರ ರಜೆ ಲೆಕ್ಕವನ್ನು ಸರಿಯಾಗಿ ನಿರ್ವಹಿಸುವುದು. ಅಡುಗೆಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರಬೇಕು.

* ಅರೆಕಾಲಿಕ ಬೋಧಕರನ್ನು ಸಕಾಲದಲ್ಲಿ ನೇಮಕ ಮಾಡಿಸಿ ಶಾಲೆ ಹಾಗೂ ವಸತಿನಿಲಯದಲ್ಲಿ ನಡೆಸುವ ಮಾಸಿಕ/ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಯಾವ ಪಠ್ಯ ವಿಷಯದಲ್ಲಿ ಕಡಿಮೆ ಅಂಕಗಳಿಸಿ, ಪ್ರಗತಿಯಲ್ಲಿ ಹಿಂದುಳಿದಿರುವರೋ, ಅಂತಹ ವಿದ್ಯಾರ್ಥಿಗಳಿಗೆ ಆ ವಿಷಯಗಳಲ್ಲಿ ವಾರದಲ್ಲಿ ಕನಿಷ್ಠ ಎರಡು ದಿನ ವಿಶೇಷ ಬೋಧನೆ ವ್ಯವಸ್ಥೆ ಗೊಳಿಸುವುದು.

*ಅರೆಕಾಲಿಕ ಬೋಧಕರನ್ನು ಸಕಾಲದಲ್ಲಿ ನೇಮಕ ಮಾಡಿಸಿ ಶಾಲೆ ಹಾಗೂ ವಸತಿನಿಲಯದಲ್ಲಿ ನಡೆಸುವ ಮಾಸಿಕ/ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಯಾವ ಪಠ್ಯ ವಿಷಯದಲ್ಲಿ ಕಡಿಮೆ ಅಂಕಗಳಿಸಿ, ಪ್ರಗತಿಯಲ್ಲಿ ಹಿಂದುಳಿದಿರುವರೋ, ಅಂತಹ ವಿದ್ಯಾರ್ಥಿಗಳಿಗೆ ಆ ವಿಷಯಗಳಲ್ಲಿ ವಾರದಲ್ಲಿ ಕನಿಷ್ಠ ಎರಡು ದಿನ ವಿಶೇಷ ಬೋಧನೆ ವ್ಯವಸ್ಥೆ ಗೊಳಿಸುವುದು.

d) ವಿದ್ಯಾರ್ಥಿನಿಲಯದಲ್ಲಿ ಶೈಕ್ಷಣಿಕ ದಾಖಲೆಯ ನಿರ್ವಹಣೆಗಾಗಿ ಒಂದು ವಹಿಯನ್ನು ಇಟ್ಟು ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಎರಡು ಅಥವಾ ಮೂರು ಪುಟಗಳನ್ನು ಕಾದಿರಿಸಿ, ಈ ಕೆಳಗಿನಂತೆ ನಿಯತವಾಗಿ ನಿಲಯಾರ್ಥಿಯು ಶಾಲೆಯಲ್ಲಿ ನಡೆಸುವ ಮಾಸಿಕ/ಅರ್ಧವಾರ್ಷಿಕ ಪರಿಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಸಂಗ್ರಹಿಸಿ, ನಿಲಯಾರ್ಥಿಯ ಇನ್ನಿತರ ವೈಯ್ಯಕ್ತಿಕ ದಾಖಲೆಗಳೊಂದಿಗೆ ದಾಖಲಿಸುವುದು ಹಾಗೂ ನಿಲಯಾರ್ಥಿಯ ಪಾಲಕರ/ಪೋಷಕರ ಸಭೆಯಲ್ಲಿ ಗಮನಕ್ಕೆ ತಂದು ಅವರ ಸಹಿ ಪಡೆಯುವುದು.

*ವಿದ್ಯಾರ್ಥಿನಿಲಯದಲ್ಲಿ ಶೈಕ್ಷಣಿಕ ದಾಖಲೆಯ ನಿರ್ವಹಣೆಗಾಗಿ ಒಂದು ವಹಿಯನ್ನು ಇಟ್ಟು ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಎರಡು ಅಥವಾ ಮೂರು ಪುಟಗಳನ್ನು ಕಾದಿರಿಸಿ, ಈ ಕೆಳಗಿನಂತೆ ನಿಯತವಾಗಿ ನಿಲಯಾರ್ಥಿಯು ಶಾಲೆಯಲ್ಲಿ ನಡೆಸುವ ಮಾಸಿಕ/ಅರ್ಧವಾರ್ಷಿಕ ಪರಿಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಸಂಗ್ರಹಿಸಿ, ನಿಲಯಾರ್ಥಿಯ ಇನ್ನಿತರ ವೈಯ್ಯಕ್ತಿಕ ದಾಖಲೆಗಳೊಂದಿಗೆ ದಾಖಲಿಸುವುದು ಹಾಗೂ ನಿಲಯಾರ್ಥಿಯ ಪಾಲಕರ/ಪೋಷಕರ ಸಭೆಯಲ್ಲಿ ಗಮನಕ್ಕೆ ತಂದು ಅವರ ಸಹಿ ಪಡೆಯುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular