HomeLatest Newsಮಳೆ ಬರ್ತಿದೆ, WFH ಕೊಡಿ: ರೆಡ್ ಅಲರ್ಟ್ ಮಧ್ಯೆಯೂ ಐಟಿ ನೌಕರನ ಮನವಿ ತರಸ್ಕರಿಸಿದ ಕಂಪನಿ:...

ಮಳೆ ಬರ್ತಿದೆ, WFH ಕೊಡಿ: ರೆಡ್ ಅಲರ್ಟ್ ಮಧ್ಯೆಯೂ ಐಟಿ ನೌಕರನ ಮನವಿ ತರಸ್ಕರಿಸಿದ ಕಂಪನಿ: ಮೆಸೇಜ್ ವೈರಲ್

ಅಹಮದಾಬಾದ್: ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗುಜರಾತ್‌ನ ಹಲವು ಭಾಗಗಳಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಜಲಾವೃತಗೊಂಡು ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾವಿರಾರು ಜನರು ದೈನಂದಿನ ಪ್ರಯಾಣಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲೂ ಉದ್ಯೋಗಿಗಳ ಭದ್ರತೆಯನ್ನು ಬಲಿಗೊಟ್ಟು ವರ್ಕ್ ಫ್ರಮ್ ಹೋಮ್ (WFH) ನಿರಾಕರಿಸಿದ ಐಟಿ ಕಂಪನಿಯೊಂದರ ಕಠೋರ ನಿರ್ಧಾರ ಭಾರತೀಯ ಕಾರ್ಪೊರೇಟ್ ಸಂಸ್ಕೃತಿಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.

ಗುಜರಾತ್‌ನಾದ್ಯಂತ ತೀವ್ರ ಮಳೆಯಾಗುತ್ತಿದ್ದು, ಅಹಮದಾಬಾದ್ ಮೂಲದ ಐಟಿ ಕಂಪನಿಯ ನೌಕರರು ಮತ್ತು ಮ್ಯಾನೇಜ್‌ಮೆಂಟ್ ನಡುವೆ ನಡೆದ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಪ್ರಸ್ತುತ ನೆಟ್ಟಿಗರ ಗಮನ ಸೆಳೆದು ವೈರಲ್ ಆಗಿದೆ.

ಧಾರಾಕಾರ ಮಳೆ ಹಾಗೂ ಕಠಿಣ ಸಂಚಾರ ವ್ಯವಸ್ಥೆಯ ಕಾರಣದಿಂದ ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು (WFH) ಅನುಮತಿ ಕೋರಿ ಇಮೇಲ್ ಕಳುಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾನೇಜರ್:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲರಿಗೂ ನಮಸ್ಕಾರ, ಮಳೆಯ ಕಾರಣ ನೀಡಿ ಡಬ್ಲ್ಯೂಎಫ್‌ಎಚ್‌ಗಾಗಿ ಅನೇಕ ವಿನಂತಿಗಳು ಬಂದಿವೆ. ಇಂದು ನೀವು ಸ್ವಲ್ಪ ತಡವಾಗಿ ಬಂದರೂ ತೊಂದರೆಯಿಲ್ಲ, ಆದರೆ ದಯವಿಟ್ಟು ಕಚೇರಿಗೆ ಬಂದು ಕೆಲಸಕ್ಕೆ ಹಾಜರಾಗಿ, ಎಂದು ಬರೆದಿದ್ದಾರೆ.

ಇದರ ಬೆನ್ನಲ್ಲೇ ಕಂಪನಿಯ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಿದ ಮತ್ತೊಬ್ಬ ಅಧಿಕಾರಿಯ ಸಂದೇಶ ನೌಕರರನ್ನು ಬೆಚ್ಚಿಬೀಳಿಸಿದೆ. ತಡವಾಗಿ ಬರುವುದು ಎಂದರೆ ಮಳೆ ನಿಲ್ಲುವವರೆಗೆ ಮನೆಯಲ್ಲಿ ಕಾಯುವುದಲ್ಲ. ಯಾರಾದರೂ ಪ್ರಯಾಣಿಸುವಾಗ ಮಳೆಯಿಂದಾಗಿ ಹಾದಿಯಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ಮಾತ್ರ ಅದಕ್ಕೆ ವಿನಾಯಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸಂದೇಶಗಳನ್ನು ಪೋಸ್ಟ್ ಮಾಡಿದ ಉದ್ಯೋಗಿ, ಬೆಳಿಗ್ಗೆಯಿಂದಲೇ ಸತತವಾಗಿ ಭಾರಿ ಮಳೆಯಾಗುತ್ತಿದ್ದು ಪ್ರಯಾಣಿಸುವುದು ಅತ್ಯಂತ ಕಷ್ಟಕರವಾಗಿದೆ. ಐಟಿ ಕಂಪನಿಯೊಂದಕ್ಕೆ ಈ ಮಟ್ಟದ ಅನಗತ್ಯ ಕಟ್ಟುನಿಟ್ಟಿನ ನಿಯಮ ನಿಜಕ್ಕೂ ಶೋಚನೀಯ. ಈ ಮ್ಯಾನೇಜರ್‌ಗಳಿಗೆ ಏನಾಗಿದೆ? ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇಂತಹ ಕಂಪನಿ ಬಿಟ್ಟು ಬೇರೆ ಉದ್ಯೋಗ ಹುಡುಕಿ: ನೆಟ್ಟಿಗರ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಇಂಟರ್ನೆಟ್ ಬಳಕೆದಾರರು ಕಂಪನಿಯ ನಿರ್ಧಾರವನ್ನು ತೀವ್ರವಾಗಿ ತುಕಡಿಸಿದ್ದಾರೆ.

ಗ್ರಾಹಕರು ವಿದೇಶದಲ್ಲಿದ್ದಾರೆ, ಕಚೇರಿಗೆ ಏಕ ಬರಬೇಕು?: “ಐಟಿ ಕಂಪನಿಗಳು ಕಚೇರಿಗೇ ಬರಬೇಕು ಎಂದು ಒತ್ತಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಗ್ರಾಹಕರೆಲ್ಲ ವಿದೇಶದಲ್ಲಿದ್ದಾರೆ, ಟೀಮ್ ಜೊತೆ ವರ್ಚುವಲ್ ಕಾಲ್ ಮೂಲಕ ವ್ಯವಹರಿಸಬಹುದು. ಲ್ಯಾಬ್ ಅಥವಾ ಫಿಸಿಕಲ್ ಅಸ್ಸೆಟ್ಸ್ ಜೊತೆ ಕೆಲಸ ಮಾಡುವವರು ಕಚೇರಿಗೆ ಹೋದರೆ ಅರ್ಥವಿದೆ. ಸೂಕ್ತ ಮಾನಿಟರಿಂಗ್ ಇದ್ದರೆ ಮನೆಯಿಂದಲೇ ಹೆಚ್ಚು ದಕ್ಷತೆಯಿಂದ ಕೆಲಸ ಮಾಡಬಹುದು” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ರೆಡ್ ಅಲರ್ಟ್ ಲೆಕ್ಕಿಸದ ಸರ್ವಾಧಿಕಾರ: ಮೊಬೈಲ್‌ಗಳಲ್ಲಿ ಹಾಗೂ ಹವಾಮಾನ ಇಲಾಖೆಯಿಂದ ಈಗಾಗಲೇ ರೆಡ್ ಅಲರ್ಟ್ ಘೋಷಣೆಯಾಗಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲೂ ಹಾಜರಾತಿಗೆ ಪಟ್ಟು ಹಿಡಿಯುವುದು ಅಸಂಭವ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ಬೇರೆ ಕಂಪನಿ ಹುಡುಕಿ: “ಗುಜರಾತ್‌ನಲ್ಲಿ ಉತ್ತಮ ಕೆಲಸದ ಸಂಸ್ಕೃತಿ ಸಿಗುವುದು ಕಷ್ಟ. ಇಂತಹ ಕಂಪನಿಯನ್ನು ತೊರೆದು ತಕ್ಷಣವೇ ಬೇರೆ ನೌಕರಿ ಹುಡುಕಿಕೊಳ್ಳಿ” ಎಂದು ಹಲವರು ಸಲಹೆ ನೀಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular