HomeKarnatakaಬೆಂಗಳೂರಿಗರ ಗಮನಕ್ಕೆ: ಇಂದು ಹಾಗೂ ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರಿಗರ ಗಮನಕ್ಕೆ: ಇಂದು ಹಾಗೂ ನಾಳೆ ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧೆಡೆ ಇಂದು ಹಾಗೂ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂ (BESCOM) ವ್ಯಾಪ್ತಿಯ ಪ್ರಮುಖ ನಾಲ್ಕು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವುದರಿಂದ, ಜುಲೈ 25 ಇಂದು ಮತ್ತು 26 ರಂದು ನಾಳೆ ನಗರದ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

66/11 ಕೆ.ವಿ ಎಸ್‌ಆರ್‌ಟಿ, ವಿಕ್ಟೋರಿಯಾ, ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ವಿದ್ಯುತ್ ಕೇಂದ್ರಗಳ ವ್ಯಾಪ್ತಿಯಲ್ಲಿ ಈ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?

ವಿಕೆಟೋರಿಯಾ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿ: ಸಿಟಿ ಮಾರ್ಕೆಟ್, ಅವಿನ್ಯೂ ರಸ್ತೆ, ಬಿ.ವಿ.ಕೆ ಅಯ್ಯಂಗಾರ್ ರಸ್ತೆ, ಆರ್‌ಟಿ ಸ್ಟ್ರೀಟ್, ಸಿಟಿ ಸ್ಟ್ರೀಟ್, ಚಿಕ್ಕಪೇಟೆ, ನಗರ್ಥಪೇಟೆ, ಎಸ್.ಪಿ. ರಸ್ತೆ, ಟೌನ್ ಹಾಲ್, ಜೆ.ಸಿ. ರಸ್ತೆ, ಮಿನರ್ವಾ ಸರ್ಕಲ್, ಕೆ.ಜಿ. ರಸ್ತೆ, ಗಾಂಧಿನಗರ, ಮೈಸೂರು ರಸ್ತೆ, ಪೊಲೀಸ್ ವಸತಿಗೃಹ, ಗೋರಿಪಾಳ್ಯ, ಬಿನ್ನಿಪೇಟೆ, ನ್ಯೂ ತರಗುಪೇಟೆ, ಚಾಮರಾಜಪೇಟೆ, ಎ.ಎಂ. ರಸ್ತೆ, ಕಲಾಲಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್ ಮತ್ತು ಸುತ್ತಮುತ್ತಲಿನ ಭಾಗಗಳು.

ಎಸ್‌ಆರ್‌ಟಿ ಹಾಗೂ ಇತರ ವ್ಯಾಪ್ತಿಯ ಪ್ರದೇಶಗಳು: ನ್ಯೂ ಕೆ.ಹೆಚ್.ಬಿ ಕಾಲೋನಿ, ಬಂಡೇಮಠ, ಕೆ.ಎಸ್.ಆರ್‌ಟಿ, ಕೆ.ಹೆಚ್.ಬಿ, ಅರುಂಧತಿನಗರ, ಶೀರ್ಕೆ, ಹೊಯ್ಸಳ ಸರ್ಕಲ್, ಸಚ್ಚಿದಾನಂದನಗರ, ವಲೇಗರಹಳ್ಳಿ, ಚಿಕ್ಕನಹಳ್ಳಿ, ಸರ್.ಎಂ.ವಿ. ಲೇಔಟ್, ಜ್ಞಾನಭಾರತಿ ಲೇಔಟ್, ಕೋಡಿಗೇಹಳ್ಳಿ, ಕೆನ್ನಹಳ್ಳಿ, ಸೀಗೇಹಳ್ಳಿ, ಬಿಎಎಮ್‌ಎಲ್ ಲೇಔಟ್, ಮಾಗಡಿ ಮೇನ್ ರೋಡ್, ಅಂಜನಾನಗರ, ಅಂಬೇಡ್ಕರ್ ನಗರ, ಮಾರುತಿನಗರ, ಚೊಕ್ಕಸಂದ್ರ, ನಗದೆವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಬ್ಯಾಡರಹಳ್ಳಿ ಹಾಗೂ ತಾವರೆಕೆರೆ ಭಾಗದಲ್ಲೂ ಪವರ್ ಕಟ್

ತಾವರೆಕೆರೆ ವ್ಯಾಪ್ತಿ: ತಾವರೆಕೆರೆ, ಜಟ್ಟಿಕಾವಲು, ಚನ್ನೇನಹಳ್ಳಿ, ಯರಪ್ಪ ಇಂಡಸ್ಟ್ರಿಯಲ್ ಏರಿಯಾ, ಗಿಡ್ಡದಪಾಳ್ಯ, ಹುನಗನಹಟ್ಟಿ, ಗಾಣಕಲ್ ಇಂಡಸ್ಟ್ರಿಯಲ್ ಏರಿಯಾ, ಬಸವನಪಾಳ್ಯ, ವಟೂರು, ಮೆಟಿಪಾಳ್ಯ ಹಾಗೂ ಗಂಗೇನಹಳ್ಳಿ.

ಬ್ಯಾಡರಹಳ್ಳಿ ವ್ಯಾಪ್ತಿ: ಬ್ಯಾಡರಹಳ್ಳಿ, ಅಂಜನಾನಗರ, ಬಿಎಎಮ್‌ಎಲ್ ಲೇಔಟ್, ಗಿಡ್ಡದಕೋನೇನಹಳ್ಳಿ, ಮುದ್ದಿನಪಾಳ್ಯ, ಹೆಗ್ಗಡದೇವನಪುರ, ಭವಾನಿ ಲೇಔಟ್, ಬಾಲಾಜಿ ಲೇಔಟ್, ಹೆಗ್ಗನಹಳ್ಳಿ, ತುಂಗಾನಗರ, ಕೆಂಪೇಗೌಡನಗರ, ಹೊಸಹಳ್ಳಿ, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ, ನಾಗರಹೊಳೆನಗರ ಹಾಗೂ ಸಂಜೀವಿನಿ ನಗರ. ಸಾರ್ವಜನಿಕರು ಹಾಗೂ ಗ್ರಾಹಕರು ಮುನ್ನೆಚ್ಚರಿಕೆಯಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಬೆಸ್ಕಾಂ ವಿನಂತಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular