HomeKarnatakaಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು: ಕುಡಿಯುವ ನೀರಿನ ಸಮಸ್ಯೆ ತುರ್ತು ನಿವಾರಣೆಗೆ ಜಿಲ್ಲಾವಾರು ಅನುದಾನ...

ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು: ಕುಡಿಯುವ ನೀರಿನ ಸಮಸ್ಯೆ ತುರ್ತು ನಿವಾರಣೆಗೆ ಜಿಲ್ಲಾವಾರು ಅನುದಾನ ಬಿಡುಗಡೆ

ಬೆಂಗಳೂರು: ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ಸ್ವಚ್ಛತಾ ಇಲಾಖೆ ವತಿಯಿಂದ 2026–27ನೇ ಸಾಲಿನ ರಾಜ್ಯ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಜನರಿಗೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಎದುರಾದಲ್ಲಿ ಟ್ಯಾಂಕರಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲು ಹಾಗೂ ಇತರೆ ತುರ್ತು ಕ್ರಮಗಳಿಗೆ ₹45.00 ಕೋಟಿ ಅನುದಾನವನ್ನು ವಿವಿಧ ಜಿಲ್ಲೆಗಳಿಗೆ ಅಗತ್ಯನುಸಾರ ಹಂಚಿಕೆ ಮಾಡಲಾಗಿದೆ.

ಜಿಲ್ಲಾವಾರು ಅನುದಾನ ವಿವರ ಹೀಗಿದೆ:

1. ಬಾಗಲಕೋಟೆ – ₹1.50 ಕೋಟಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2. ಬೆಂಗಳೂರು –  ₹1.50 ಕೋಟಿ

3. ಬೆಳಗಾವಿ – ₹2.00ಕೋಟಿ

4. ಬೆಂಗಳೂರು (ಗ್ರಾ) – ₹1.50 ಕೋಟಿ

5. ಬೆಂಗಳೂರು (ನಗರ) – ₹1.50 ಕೋಟಿ

6. ಬೀದರ – ₹1.50 ಕೋಟಿ

7. ಚಾಮರಾಜನಗರ – ₹1.50 ಕೋಟಿ

8. ಚಿಕ್ಕಬಳ್ಳಾಪುರ – ₹1.50 ಕೋಟಿ

9. ಚಿಕ್ಕಮಗಳೂರು – ₹1.50 ಕೋಟಿ

10. ಚಿತ್ರದುರ್ಗ – ₹1.50 ಕೋಟಿ

11. ದಕ್ಷಿಣ ಕನ್ನಡ – ₹1.00 ಕೋಟಿ

12. ದಾವಣಗೆರೆ – ₹1.00 ಕೋಟಿ

13. ಧಾರವಾಡ – ₹1.00 ಕೋಟಿ

14. ಗದಗ – ₹1.00 ಕೋಟಿ

15. ಹಾಸನ – ₹1.50 ಕೋಟಿ

16. ಹಾವೇರಿ – ₹1.50 ಕೋಟಿ

17. ಕಲಬುರಗಿ – ₹2.00ಕೋಟಿ

18. ಕೊಡಗು – ₹1.00 ಕೋಟಿ

19. ಕೋಲಾರ –  ₹2.00ಕೋಟಿ

20. ಕೊಪ್ಪಳ –  ₹1.50 ಕೋಟಿ

21. ಮಂಡ್ಯ – ₹1.00 ಕೋಟಿ

22. ಮೈಸೂರು – ₹1.50 ಕೋಟಿ

23. ರಾಯಚೂರು –  ₹2.00ಕೋಟಿ

24. ರಾಮನಗರ –  ₹2.00ಕೋಟಿ

25. ಶಿವಮೊಗ್ಗ – ₹1.50 ಕೋಟಿ

26. ತುಮಕೂರು – ₹1.00 ಕೋಟಿ

27. ಉಡುಪಿ – ₹2.00ಕೋಟಿ

28. ಉತ್ತರ ಕನ್ನಡ – ₹1.00 ಕೋಟಿ

29. ವಿಜಯನಗರ – ₹1.50 ಕೋಟಿ

30. ವಿಜಯಪುರ – ₹1.50 ಕೋಟಿ

31. ಯಾದಗಿರಿ – ₹1.50 ಕೋಟಿ

ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುವ ಕುಡಿಯುವ ನೀರಿನ ತುರ್ತು ಸಮಸ್ಯೆಗಳನ್ನು ನಿವಾರಿಸಲು ಟ್ಯಾಂಕರ್ ಮೂಲಕ ಹಾಗೂ ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲು ಆದ್ಯತೆ ನೀಡಬೇಕು. ಸ್ಥಗಿತಗೊಂಡಿರುವ ಕೊಳವೆಬಾವಿಗಳನ್ನು ಫ್ಲಶಿಂಗ್ ಮೂಲಕ ಆಳಗೊಳಿಸಲು ಪ್ರಯತ್ನಿಸಬೇಕು, ಅನಿವಾರ್ಯವಾದಲ್ಲಿ ಮಾತ್ರ ಭೂವಿಜ್ಞಾನಿಗಳ ಸಲಹೆ ಮೇರೆಗೆ ಹೊಸ ಕೊಳವೆಬಾವಿ ಕೊರೆಯಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಹಾಗೂ ಇಂತಹ ಕ್ರಮಗಳಿಗೆ ಟಾಸ್ಕ್ ಪೋರ್ಸ್  ಸಮಿತಿಯಲ್ಲಿ ಅನುಮೋದನೆಯನ್ನು ಪಡೆಯಲು ಸಿಇಓ ಗಳಿಗೆ ತಿಳಿಸಲಾಗಿದೆ.

ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕಾರ್ಯಗಳ ಪ್ರಗತಿಯನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಿಸಿದ ಇಂಜಿನಿಯರ್‌ಗಳು ನಿಯಮಿತವಾಗಿ ಪರಿಶೀಲಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ನಿರ್ದೇಶಿಸಲಾಗಿದೆ.

ಈ ಕ್ರಮದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ ಹೆಚ್ಚಾಗಿ, ಸಾರ್ವಜನಿಕ ಆರೋಗ್ಯ ಮತ್ತು ಜೀವನಮಟ್ಟದಲ್ಲಿ ಮಹತ್ವದ ಸುಧಾರಣೆ ಕಾಣಿಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular