HomeKarnatakaBREAKING : ಬೆಂಗಳೂರಲ್ಲಿ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಸಾವು

BREAKING : ಬೆಂಗಳೂರಲ್ಲಿ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಸಾವು

ಬೆಂಗಳೂರು: ನೀರಿನ ಸಂಪ್ ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನ ಕೆ.ಆರ್.ಪುರಂನ ಅಯ್ಯಪ್ಪ ನಗರದಲ್ಲಿ ನಡೆದಿದೆ.

ಅಯ್ಯಪ್ಪ ನಗರದ ವಿಶಾಲ್ ಮೇಗಾ ಮಾರ್ಟ್ ಮುಂಭಾಗ ಈ ಘಟನೆ ನಡೆದಿದೆ. ನೇಪಾಳ ಮೂಲದ ದಂಪತಿಯ ಪುತ್ರ ಸುಬೀನ್ (5) ಮೃತ ಬಾಲಕ.

ಕೂಲಿ ಕೆಲಸ ಮಾಡುತ್ತಿದ್ದ ದಂಪತಿ ಎಂದಿನಂತೆ ಮನೆಯಲ್ಲಿ ಮಗನನ್ನು ಬಿಟ್ಟು ಕೆಲಸಕ್ಕೆ ತೆರಳಿದ್ದಾರೆ. ಈ ವೇಳೆ ನೀರಿನ ಸಂಪ್ ಗೆ ಬಾಲಕ ಬಿದ್ದು ಮೃತಪಟ್ಟಿದ್ದಾನೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular