HomeCrimeSHOCKING: ಕಡಿಮೆ ಅಂಕ ನೀಡಿದ್ದಕ್ಕೆ ನೀರಿನ ಬಾಟಲ್ ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು, ಇಬ್ಬರು ಶಿಕ್ಷಕಿಯರು...

SHOCKING: ಕಡಿಮೆ ಅಂಕ ನೀಡಿದ್ದಕ್ಕೆ ನೀರಿನ ಬಾಟಲ್ ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು, ಇಬ್ಬರು ಶಿಕ್ಷಕಿಯರು ಅಸ್ವಸ್ಥ

ಮಂಗಳೂರು: ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯ ನೀರಿನ ಬಾಟಲಿಗೆ ವಿದ್ಯಾರ್ಥಿನಿಯರು ನಿದ್ದೆ ಮಾತ್ರೆ ಹಾಕಿದ್ದು, ಇದರಿಂದಾಗಿ ಶಿಕ್ಷಕಿಯರಿಬ್ಬರು ಅಸ್ವಸ್ಥರಾದ ಘಟನೆ ಉಳ್ಳಾಲದ ಶಾಲೆಯೊಂದರಲ್ಲಿ ನಡೆದಿದೆ.

ಮಾತ್ರೆ ಹಾಕಿದ್ದ ನೀರು ಕುಡಿದ ಶಿಕ್ಷಕಿಯರಿಬ್ಬರು ಅಸ್ವಸ್ಥರಾಗಿದ್ದಾರೆ. ಶಾಲೆಯಲ್ಲಿ ನಡೆದ ಘಟಕ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ 6ನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿದೆ. ಉತ್ತರ ಸರಿಯಿದ್ದರೂ ಶಿಕ್ಷಕಿ ತಪ್ಪು ಹಾಕಿದ್ದಾರೆ ಎಂದು ದ್ವೇಷದಿಂದ ವಿದ್ಯಾರ್ಥಿನಿ ಸೇಡು ತೀರಿಸಿಕೊಳ್ಳಲು ತನ್ನ ಸ್ನೇಹಿತೆಯ ಸಹಾಯ ಪಡೆದು ಸ್ಟಾಫ್ ರೂಂನಲ್ಲಿ ಶಿಕ್ಷಕಿಯರಿಲ್ಲದ ವೇಳೆ ಅವಧಿ ಮೀರಿದ ಮಾತ್ರೆಗಳನ್ನು ಶಿಕ್ಷಕಿಯ ವಾಟರ್ ಬಾಟಲ್ ಗೆ ಹಾಕಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನೀರನ್ನು ಗಣಿತ ಶಿಕ್ಷಕಿ ಜೊತೆ ಮತ್ತೊಬ್ಬ ಶಿಕ್ಷಕಿಯೂ ಕುಡಿದಿದ್ದು, ಒಬ್ಬರು ಅಸ್ವಸ್ಥಗೊಂಡಿದ್ದಾರೆ. ಮತ್ತೊ ಮುಖ ಊದಿಕೊಂಡಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡು ಗಮನಿಸಿದಾಗ ಮಾತ್ರೆಗಳಿರುವುದು ಕಂಡುಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದ್ದು, ಶಾಲೆಯ ಎಸ್.ಡಿ.ಎಂ.ಸಿ. ತುರ್ತು ಸಭೆ ನಡೆಸಿದ್ದು, ವಿದ್ಯಾರ್ಥಿನಿಯರಿಗೆ ವರ್ಗಾವಣೆ ಪತ್ರ ನೀಡಲು ಚರ್ಚೆ ನಡೆದಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular