HomeIndiaನಿಜವಾದ ಶಿಸ್ತು ಕಲಿಸುವವರೇ ಹೆತ್ತವರು ಎಂಬುದನ್ನು ಹೇಳುತ್ತೆ ಈ ವಿಡಿಯೋ...!

ನಿಜವಾದ ಶಿಸ್ತು ಕಲಿಸುವವರೇ ಹೆತ್ತವರು ಎಂಬುದನ್ನು ಹೇಳುತ್ತೆ ಈ ವಿಡಿಯೋ…!

ಸಾಮಾನ್ಯವಾಗಿ ಯಾವುದೇ ಪ್ರಾಣಿಯ ಮರಿಯಾದರೂ ಚೇಷ್ಟೆ ಮಾಡುವುದು ನಿರೀಕ್ಷಿತ ಸ್ವಭಾವವೇ ಆಗಿದೆ. ಅದರಲ್ಲೂ ಮಂಗಗಳು, ಚಿಂಪಾಜ಼ಿಗಳು ಈ ವಿಚಾರದಲ್ಲಿ ಇನ್ನೂ ಹೆಚ್ಚೇ ಎನ್ನಬಹುದು.

ಮೃಗಾಲಯದಲ್ಲಿರುವ ಮರಿ ಚಿಂಪಾಂಜ಼ಿಯೊಂದು ವೀಕ್ಷಕರತ್ತ ಕಲ್ಲು ತೂರುತ್ತಿದ್ದು, ಅದನ್ನು ತೆಪ್ಪಗಾಗಿಸಲು ವಯಸ್ಕ ಚಿಂಪಾಂಜ಼ಿಯೊಂದು ಅದನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್‌) ಆಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ವೀಕ್ಷಕರತ್ತ ಕಲ್ಲೆಸೆಯುತ್ತಿರುವ ಮರಿಗೆ ತರಾಟೆ ತೆಗೆದುಕೊಳ್ಳಲಾಗಿದೆ. ಅವೂ ಸಹ ನಮ್ಮಂತೆಯೇ. ನಿಜವಾದ ಶಿಸ್ತನ್ನು ಕಲಿಸುವುದೇ ಹೆತ್ತವರು !” ಎಂದು ಸುಶಾಂತಾ ಈ ವಿಡಿಯೋಗೆ ಕ್ಯಾಪ್ಷನ್‌ ಕೊಟ್ಟು ಶೇರ್‌ ಮಾಡಿದ್ದಾರೆ.

ವೀಕ್ಷಕರತ್ತ ಕಲ್ಲೆಸೆಯುತ್ತಿದ್ದ ಮರಿಗೆ ಬುದ್ಧಿ ಹೇಳಲು ದೊಡ್ಡ ಚಿಂಪಾಂಜ಼ಿ ಕಡ್ಡಿ ತೆಗೆದುಕೊಂಡು ಏಟು ಕೊಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular