ಪಾಟ್ನಾ: ಬಿಹಾರದ ಬಾರ್ಹ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದಾರೆ. ಹಳಿಗಳ ಮೇಲೆ ವೇಗವಾಗಿ ರೈಲು ಚಲಿಸುತ್ತಿದ್ದಾಗ ಮಹಿಳೆ ತನ್ನ ಮಕ್ಕಳನ್ನು ರೈಲ್ವೇ ಹಳಿಗಳ ಪಕ್ಕದಲ್ಲಿ ಮುಚ್ಚಿಕೊಂಡು ಮಲಗಿದ್ದಾರೆ.
ಶನಿವಾರ ನಡೆದ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು ವೈರಲ್ ಆಗಿದೆ. ರೈಲು ಕೇವಲ ಇಂಚುಗಳಷ್ಟು ದೂರದಲ್ಲಿ ವೇಗವಾಗಿ ಬರುತ್ತಿದ್ದಾಗ ಮಹಿಳೆ ತಮ್ಮ ಮಕ್ಕಳನ್ನು ಮಲಗಿಸಿ ಅವರನ್ನು ಮುಚ್ಚಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಮಹಿಳೆ ಮತ್ತು ಆಕೆಯ ಮಕ್ಕಳು ವಿಕ್ರಮಶಿಲಾ ಎಕ್ಸ್ ಪ್ರೆಸ್ನಲ್ಲಿ ಕುಟುಂಬ ಸದಸ್ಯರೊಂದಿಗೆ ಬೇಗುಸರಾಯ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ರೈಲು ಹತ್ತುವಾಗ ಜನಸಂದಣಿಯಿಂದಾಗಿ ಮಕ್ಕಳೊಂದಿಗೆ ಹಳಿಗಳ ಮೇಲೆ ಬಿದ್ದಿದ್ದಾಳೆ. ಹಳಿ ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿಕೊಂಡಿದ್ದ ಮಹಿಳೆ ಇನ್ನೊಂದು ರೈಲು ಪ್ಲಾಟ್ಫಾರ್ಮ್ನಿಂದ ಸಾಗುವವರೆಗೂ ತನ್ನ ಮಕ್ಕಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾಳೆ. ರೈಲು ಪಾಸಾದ ನಂತರ ಮಹಿಳೆ ಮತ್ತು ಆಕೆಯ ಮಕ್ಕಳನ್ನು ರಕ್ಷಿಸಲಾಗಿದೆ.
मौत के सामने जीती मां की ममता. #Bihar के #Barh रेलवे स्टेशन से वीडियो. भीड़ में मां, दो बच्चों संग पटरी पर गिरी. ट्रेन चलने लगी. 3 जिंदगियों के सामने मौत खड़ी थी. और दूसरी तरफ मां. उधर ट्रेन की रफ्तार थी. तो इधर मां की ममता. 25 सेकेंड बाद मां जीती. मौत हारी. #viralvideo #barh pic.twitter.com/bsDxbD0EFS
— Sunil Maurya (@smaurya_journo) December 24, 2023


