HomeLatest Newsದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿಶ್ವದ ಅತಿ ಕಿರಿಯ ಬಾಡಿಬಿಲ್ಡರ್​

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿಶ್ವದ ಅತಿ ಕಿರಿಯ ಬಾಡಿಬಿಲ್ಡರ್​

2021 ರಲ್ಲಿ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಸೇರಿಸುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಪ್ರತೀಕ್ ಮೋಹಿತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮೋಹಿತೆ ಅವರು ಮಹಾರಾಷ್ಟ್ರದ ರಾಯಗಢದಿಂದ ಬಂದವರು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಅವರು ತಮ್ಮ ಫಿಟ್‌ನೆಸ್ ದಿನಚರಿಯಿಂದ ಆನ್‌ಲೈನ್‌ನಲ್ಲಿ ಗ್ಲಿಂಪ್‌ಗಳನ್ನು ಹಂಚಿಕೊಳ್ಳುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ತಿಂಗಳ ಆರಂಭದಲ್ಲಿ, ಅವರು ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ತಾವು ಪ್ರೀತಿಸಿರುವ ಯುವತಿಯನ್ನು ವಿವಾಹವಾಗಿರುವುದಾಗಿ ತಿಳಿಸಿದ್ದಾರೆ.

ಮದುವೆಯ ಪೂರ್ವ ಆಚರಣೆಗಳ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ. ಅಂದಹಾಗೆ 28 ವರ್ಷದ ಪ್ರತೀಕ್ ಮೋಹಿತೆ 3 ಅಡಿ 4 ಇಂಚು ಇದ್ದರೆ 22 ವರ್ಷದ ಜಯಾ 4 ಅಡಿ 2 ಇಂಚು ಎತ್ತರವಿದ್ದಾರೆ. ಈ ಜೋಡಿ ನಾಲ್ಕು ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಇಷ್ಟಪಟ್ಟಿದ್ದು, ಈಗ ಮದುವೆಯಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular