ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಅತಿಥಿ ಬೇರೆ ಯಾರೂ ಅಲ್ಲ. ಅದು ಕರು .ಶನಿವಾರ (ಸೆಪ್ಟೆಂಬರ್ 14, 2024) ಪ್ರಧಾನಿ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಮೂಲಕ ನೀಡಿದರು.
ಪಿಎಂ ಮೋದಿ ಹಂಚಿಕೊಂಡ 42 ಸೆಕೆಂಡುಗಳ ವೀಡಿಯೊದಲ್ಲಿ, ತಮ್ಮ ಅಧಿಕೃತ ನಿವಾಸವನ್ನು ತಲುಪಿದ ಹೊಸ ಅತಿಥಿ ಆಟವಾಡುತ್ತಿರುವುದನ್ನು ಕಾಣಬಹುದು. ಪ್ರಧಾನಿ ನಿವಾಸದಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದ್ದು, ಅದನ್ನು ಅಪ್ಪಿ ಪ್ರಧಾನಿ ಮೋದಿ ಮುದ್ದಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.
ಇದನ್ನು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ – ಗಾಂವ್: ಸರ್ವಸುಖ್ ಪ್ರದಾ:’. ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಪ್ರಧಾನ ಮಂತ್ರಿಯವರ ಮನೆಯಲ್ಲಿ, ಪ್ರೀತಿಯ ಗೋಮಾತೆ ಹೊಸ ವತ್ಸಕ್ಕೆ ಜನ್ಮ ನೀಡಿದ್ದಾಳೆ, ಅವಳ ಹಣೆಯ ಮೇಲೆ ಬೆಳಕಿನ ಚಿಹ್ನೆ ಇದೆ. ಆದ್ದರಿಂದ, ನಾನು ಅದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
A new member at 7, Lok Kalyan Marg!
Deepjyoti is truly adorable. pic.twitter.com/vBqPYCbbw4
— Narendra Modi (@narendramodi) September 14, 2024
हमारे शास्त्रों में कहा गया है – गाव: सर्वसुख प्रदा:'।
लोक कल्याण मार्ग पर प्रधानमंत्री आवास परिवार में एक नए सदस्य का शुभ आगमन हुआ है।
प्रधानमंत्री आवास में प्रिय गौ माता ने एक नव वत्सा को जन्म दिया है, जिसके मस्तक पर ज्योति का चिह्न है।
इसलिए, मैंने इसका नाम 'दीपज्योति'… pic.twitter.com/NhAJ4DDq8K
— Narendra Modi (@narendramodi) September 14, 2024

