HomeIndiaಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕನನ್ನು ಕಚ್ಚಿ ಓಡಿಸಿದ ಬೀದಿ ನಾಯಿಗಳು, ವೀಡಿಯೋ ವೈರಲ್...

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕನನ್ನು ಕಚ್ಚಿ ಓಡಿಸಿದ ಬೀದಿ ನಾಯಿಗಳು, ವೀಡಿಯೋ ವೈರಲ್ |WATCH VIDEO

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪಿಯನ್ನು ಎರಡು ಬೀದಿ ನಾಯಿಗಳು ಬೆನ್ನಟ್ಟಿ ಓಡಿಸಿದ ಘಟನೆ ನಡೆದಿದೆ. ಮಧ್ಯರಾತ್ರಿ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪಿಯನ್ನು ಎರಡು ಬೀದಿ ನಾಯಿಗಳು ಕಚ್ಚಿ ಬೆನ್ನಟ್ಟಿ ಓಡಿಸಿದ ಘಟನೆ ನಡೆದಿದೆ. ಮಧ್ಯರಾತ್ರಿ ಅಶೋಕಪುರಂ ಪ್ರದೇಶದಲ್ಲಿ ನಡೆದ ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯಲ್ಲಿ ಆರೋಪಿಯಾಗಿರುವ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ಕೊಯಮತ್ತೂರಿನ ಅಶೋಕಪುರಂ ಪ್ರದೇಶದಲ್ಲಿ ಮಹಿಳೆಯೊಬ್ಬರು ರಾತ್ರಿ ವೇಳೆ ರಸ್ತೆಯ ಬದಿಯಲ್ಲಿ ಕುಳಿತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಯುವಕನೊಬ್ಬ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ್ದಾನೆ. ಆತ ಮದ್ಯ ಹಾಗೂ ಗಾಂಜಾ ಸೇವಿಸಿದ್ದ ಸ್ಥಿತಿಯಲ್ಲಿದ್ದ ಎಂದು ವರದಿಯಾಗಿದೆ. ಬಳಿಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಮಹಿಳೆ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದಾರೆ. ಆಕೆಯ ಕಿರುಚಾಟ ಕೇಳಿದ ಸಮೀಪದಲ್ಲಿದ್ದ ಎರಡು ಬೀದಿ ನಾಯಿಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ನಾಯಿಗಳು ಆರೋಪಿಯತ್ತ ಧಾವಿಸಿ ಆತನ ಮೇಲೆ ದಾಳಿ ಮಾಡಿದ್ದು, ಆತನ ಕಾಲಿಗೆ ಕಚ್ಚಿವೆ ಎನ್ನಲಾಗಿದೆ. ಇದರಿಂದ ಭಯಗೊಂಡ ಆರೋಪಿ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದಾನೆ.

ರಸ್ತೆಯಲ್ಲಿ ಮಹಿಳೆ ಮೇಲೆ ದಾಳಿ ಯತ್ನ; ಕ್ಷಣಾರ್ಧದಲ್ಲಿ ಎಂಟ್ರಿ ಕೊಟ್ಟ ಬೀದಿ ನಾಯಿಗಳು

ಪೊಲೀಸರ ತನಿಖೆಯ ವೇಳೆ ಆರೋಪಿ 16 ವರ್ಷದ ಬಾಲಕ ಎಂಬುದು ಬೆಳಕಿಗೆ ಬಂದಿದೆ. ಆತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿಗಳು ಆತನನ್ನು ನೋಡಿ ಬೊಗಳಿದ್ದವು. ನಾಯಿಗಳನ್ನು ಕಲ್ಲಿನಿಂದ ಓಡಿಸಲು ಯತ್ನಿಸಿದ ಬಳಿಕ ಆತ ಮಹಿಳೆಯ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಆದರೆ ನಾಯಿಗಳು ತಕ್ಷಣ ಮಧ್ಯಪ್ರವೇಶಿಸಿ ಮಹಿಳೆಯ ನೆರವಿಗೆ ಬಂದಿವೆ.

ಸಿಸಿಟಿವಿ ದೃಶ್ಯಗಳಲ್ಲಿ ನಾಯಿಗಳು ಮಹಿಳೆಯ ಬಳಿ ಓಡಿ ಬಂದು ಆರೋಪಿಯನ್ನು ಬೆನ್ನಟ್ಟುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಾಯದಲ್ಲಿದ್ದ ಮಹಿಳೆಯ ನೆರವಿಗೆ ಧಾವಿಸಿದ ಬೀದಿ ನಾಯಿಗಳ ವರ್ತನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿರುವ ಈ ಘಟನೆ, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆ ಹಾಗೂ ತಕ್ಷಣದ ನೆರವಿನ ಮಹತ್ವವನ್ನೂ ಎತ್ತಿ ತೋರಿಸಿದೆ.

 ನಾಯಿಗಳು ತಮ್ಮ ನಿಷ್ಠೆ ಮತ್ತು ಪ್ರಾಮಾಣಿಕ ಗುಣಕ್ಕೆ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧವಾಗಿವೆ. ಮನುಷ್ಯ ಮತ್ತು ನಾಯಿಗಳ ನಡುವಿನ ಬಾಂಧವ್ಯ ಶತಮಾನಗಳಷ್ಟು ಹಳೆಯದು. ಅವುಗಳನ್ನು ಕೇವಲ ಸಾಕುಪ್ರಾಣಿ ಎಂದು ಪರಿಗಣಿಸದೆ, ಕುಟುಂಬದ ಒಂದು ಸದಸ್ಯನಂತೆ ನೋಡಲಾಗುತ್ತದೆ. ತಮಗೆ ಅನ್ನ ಹಾಕಿದ ಯಜಮಾನನನ್ನು ನಾಯಿಗಳು ಎಂದಿಗೂ ಮರೆಯುವುದಿಲ್ಲ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಅವು ತಮ್ಮ ಮಾಲೀಕರನ್ನು ಬಿಟ್ಟುಕೊಡುವುದಿಲ್ಲ. ಮನುಷ್ಯರು ನೀಡುವ ಸಣ್ಣ ಪ್ರೀತಿ ಮತ್ತು ಆಹಾರಕ್ಕೂ ಅವು ಸದಾ ಕೃತಜ್ಞತೆ ತೋರಿಸುತ್ತವೆ. ಮನೆಗೆ ಅಪರಿಚಿತರು ಬಂದರೆ ಎಚ್ಚರಿಸುವುದರಿಂದ ಹಿಡಿದು, ಮಾಲೀಕರ ಜೀವ ರಕ್ಷಿಸುವವರೆಗೆ ನಾಯಿಗಳು ಸದಾ ಜಾಗರೂಕರಾಗಿರುತ್ತವೆ. ಅದಕ್ಕಾಗಿಯೇ ಹಿರಿಯರು “ನಾಯಿಗಿರುವ ಗುಣ ಮನುಷ್ಯನಿಗಿಲ್ಲ” ಎಂದು ನಾಯಿಗಳ ಪ್ರಾಮಾಣಿಕತೆಯನ್ನು ಮನುಷ್ಯನ ಗುಣಕ್ಕೆ ಹೋಲಿಸಿ ಹೇಳುತ್ತಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular