ಬೆಂಗಳೂರು : ಯಜಮಾನಿಯರಿಗೆ ಗುಡ್ ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ. ಜುಲೈ ತಿಂಗಳ ಹಣ ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ. ಕೆಲವರಿಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ 2-3 ತಿಂಗಳ ಹಣ ಬಂದಿಲ್ಲ. ಇದರ ನಡುವೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆಗಿಲ್ಲ ಎಂದು ಮಹಿಳೆ ಹೇಳುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಆಗುತ್ತಿದೆ.
ಗೃಹಲಕ್ಷ್ಮಿ ಹಣ ಬಂತಾ ಎಂದು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಮಹಿಳೆಯೊಬ್ಬರು ಬಹಳ ಫನ್ನಿಯಾಗಿ ಉತ್ತರ ನೀಡುತ್ತಾರೆ. ‘’ 2000 ಹಣ ಇನ್ನೂ ಬರಲಿಲ್ಲ, ಬ್ಯಾಂಕ್ ಗೆ ಅಲೆದು ಅಲೆದು ಸುಸ್ತಾಯ್ತು…ನಂದೇ 2000 ಹೊಂಟೋಯ್ತು..ಎಂದು ಫನ್ನಿಯಾಗಿ ಹೇಳುವ ಈ ವಿಡಿಯೋದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಈ ವಿಡಿಯೋ ಭಾರಿ ಟ್ರೋಲ್ ಆಗುತ್ತಿದೆ.
https://www.youtube.com/watch?v=vlXqJQYaQBU

