
ನವದೆಹಲಿ: ವರ್ಚುವಲ್ ಮೀಟಿಂಗ್ ಸಂದರ್ಭಗಳಲ್ಲಿ ಹಾಗೂ ಆನ್ಲೈನ್ ಸಭೆಗಳು, ತರಗತಿಗಳ ಸಂದರ್ಭದಲ್ಲಿ ನಡೆದ ಹಲವಾರು ಆಸಕ್ತಿಕರ ವಿಷಯಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿಯೂ ಕೋವಿಡ್ ಸಂದರ್ಭದಲ್ಲಿ ಆಗಿರುವ ಫಜೀತಿಗಳು ಅಷ್ಟಿಷ್ಟಲ್ಲ.
ಈಗ ಅಂಥದ್ದೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಲಾಲನ್ಟಾಪ್ ಸಂಪಾದಕ ಸೌರಭ್ ದ್ವಿವೇದಿ ಅವರು ತಮ್ಮ ಸಂಪಾದಕೀಯ ಸಿಬ್ಬಂದಿಯೊಂದಿಗೆ ಸಂಭಾಷಣೆಯಲ್ಲಿದ್ದಾಗ ನಡೆದ ಘಟನೆ ಇದಾಗಿದೆ.
ಸಭೆಯಲ್ಲಿ ಪತ್ರಕರ್ತ ಗೌರವ್ ಎಂಬುವವರೂ ಇದ್ದರು. ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರ ಹಿನ್ನೆಲೆಯಲ್ಲಿ ನಡೆದ ಘಟನೆಯಿಂದ ಈ ವಿಡಿಯೋ ಸಾಕಷ್ಟು ಸುದ್ದಿ ಮಾಡುತ್ತಿದೆ.
ಅದೇನೆಂದರೆ, ಮೀಟಿಂಗ್ ನಡೆಯುತ್ತಿರುವ ವೇಳೆ, ಗೌರವ್ ಅವರ ಪರದೆಯು ಹಿಂದೆ ಹಲವಾರು ಬಿಯರ್ ಕ್ಯಾನ್ಗಳನ್ನು ಹಿಡಿದಿರುವ ವ್ಯಕ್ತಿ ಕಂಡುಬಂದಿದ್ದಾನೆ. ಅವುಗಳನ್ನು ಫ್ರಿಜ್ನಲ್ಲಿ ಇಡಲು ಡೋರ್ ಓಪನ್ ಮಾಡಿರುವುದನ್ನು ನೋಡಬಹುದು. ಇದು ಬಹಳ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.
Very informative session 👌 pic.twitter.com/xzkPQiuV3E
— Lala (@FabulasGuy) April 16, 2023

