Video | ಬೆಲ್ಟ್, ಬ್ಯಾಟ್ ಹಿಡಿದು ಜನನಿಬಿಡ ಪ್ರದೇಶದಲ್ಲಿ ಇಬ್ಬರು ಪುರುಷರ ಫೈಟ್

ಹಗಲು ಹೊತ್ತಲ್ಲಿ, ಜನನಿಬಿಡ ಪ್ರದೇಶದಲ್ಲಿ ಇಬ್ಬರು ಪುರುಷರು ಪರಸ್ಪರ ಹೊಡೆದಾಡಿಕೊಂಡಿದ್ದು ವೈರಲ್ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ.

ಆಗ್ರಾದ ತಾಜ್ ಗಂಜ್ ಪ್ರದೇಶದಲ್ಲಿ ನಡೆದಿರುವ ಗಲಾಟೆ ಎಂದು ಹೇಳಲಾದ ವೈರಲ್ ವಿಡಿಯೋದಲ್ಲಿ ಇಬ್ಬರೂ ದೈಹಿಕವಾಗಿ ಪರಸ್ಪರ ಹಲ್ಲೆ ನಡೆಸುವುದನ್ನು ತೋರಿಸುತ್ತದೆ.

ಘಟನೆಯ ನಿಖರವಾದ ದಿನಾಂಕ ಮತ್ತು ಕಾರಣ ತಿಳಿದಿಲ್ಲವಾದರೂ, ಒಬ್ಬ ವ್ಯಕ್ತಿಯ ಕಾರು ಇನ್ನೊಬ್ಬರ ಬೈಕ್‌ಗೆ ಡಿಕ್ಕಿ ಹೊಡೆದ ನಂತರ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ.

ಹೊಡೆದಾಟದ ಸಮಯದಲ್ಲಿ ಎದುರಾಳಿಯನ್ನು ಹೊಡೆಯಲು ಬೆಲ್ಟ್ ಮತ್ತು ಬೇಸ್‌ಬಾಲ್ ಬ್ಯಾಟ್ ಅನ್ನು ಆಯುಧಗಳಾಗಿ ಬಳಸಲಾಗಿದೆ. ಈ ವೇಳೆ ಹಲವು ಪ್ರಯಾಣಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಗಲಾಟೆ ವೀಕ್ಷಿಸುತ್ತಾ ಇದ್ದಾರೆ.

ವೀಡಿಯೊವು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿದ್ದು ಕೆಲವರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರೆ, ಇನ್ನು ಕೆಲವರು ಪರಿಸ್ಥಿತಿಯ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದರು.


https://twitter.com/Sahu2Avinash/status/1789694385170612530?ref_src=twsrc%5Etfw%7Ctwcamp%5Etweetembed%7Ctwterm%5E1789694385170612530%7Ctwgr%5Ede2a8da386afcba2536b6f65fecaff201d9625c5%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnewsroompost-epaper-dhbf4ce091df1d4c28819e43b257c2d435%2Fwatchupmenbeatoneanotherwithbeltbatonbusyroadvideogoesviral-newsid-n608239396

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read