ವಿಚಿತ್ರ ಬಟ್ಟೆ ಧರಿಸಿ ಬಂದ ಉರ್ಫಿ ಜಾವೇದ್ ಗೆ ನೋ ಎಂಟ್ರಿ; ರೆಸ್ಟೋರೆಂಟ್‌ ವಿರುದ್ದ ಅಸಮಾಧಾನ ಹೊರಹಾಕಿದ ನಟಿ

ಸದಾ ಚಿತ್ರ-ವಿಚಿತ್ರ ಬಟ್ಟೆ ತೊಡುವ ನಟಿ ಉರ್ಫಿ ಜಾವೇದ್ ನಿರಂತರ ಸುದ್ದಿಯಲ್ಲಿದ್ದಾರೆ. ತಮ್ಮ ವಿಶಿಷ್ಟ ಉಡುಪಿನಿಂದಾಗಿಯೇ ಅವರು ಹಲವಾರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ಮತ್ತೆ ಇಂಥದ್ದೇ ಘಟನೆ ನಡೆದಿದೆ.

ಹೌದು, ಈಕೆಯ ವಿಚಿತ್ರ ಬಟ್ಟೆ ನೋಡಿದ ಮುಂಬೈನ ರೆಸ್ಟೋರೆಂಟ್ ವೊಂದು ಉರ್ಫಿಗೆ ಪ್ರವೇಶ ನಿರಾಕರಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ. ಉರ್ಫಿ ಜಾವೇದ್ ರೆಸ್ಟೋರೆಂಟ್‌ನಲ್ಲಿ ಟೇಬಲ್ ಕೇಳುತ್ತಿರುವುದನ್ನು ನೋಡಬಹುದು.

ಆದರೆ, ಝೊಮಾಟೊ ಗೋಲ್ಡ್ ಕಾರ್ನಿವಲ್ ನಡೆಯುತ್ತಿರುವುದರಿಂದ ಯಾವುದೇ ಟೇಬಲ್ ಲಭ್ಯವಿಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಆದರೇ, ಉರ್ಫಿ ಜಾವೇದ್ ತನ್ನ ಉಡುಪಿನ ಕಾರಣದಿಂದ ರೆಸ್ಟೋರೆಂಟ್ ಪ್ರವೇಶ ನಿರಾಕರಿಸಿತು ಎಂದು ಆರೋಪಿಸಿದ್ದಾರೆ.

ಉರ್ಫಿ ಜಾವೇದ್ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ರೆಸ್ಟೋರೆಂಟ್ ತನ್ನನ್ನು ವಿಭಿನ್ನವಾಗಿ ಪರಿಗಣಿಸಿದ್ದಕ್ಕಾಗಿ ಬೇಸರ ಹೊರಹಾಕಿದ್ದಾರೆ. ಇದು ನಿಜವಾಗಿಯೂ 21 ನೇ ಶತಮಾನದ ಮುಂಬೈಯೇ ?! ಇಂದು ರೆಸ್ಟೋರೆಂಟ್‌ನಲ್ಲಿ ನನಗೆ ಪ್ರವೇಶ ನಿರಾಕರಿಸಲಾಗಿದೆ. ನನ್ನ ಫ್ಯಾಷನ್ ಆಯ್ಕೆಗಳನ್ನು ನೀವು ಒಪ್ಪದಿದ್ದರೂ ಪರವಾಗಿಲ್ಲ. ಅದಕ್ಕಾಗಿ ನನ್ನನ್ನು ವಿಭಿನ್ನವಾಗಿ ಪರಿಗಣಿಸುವುದು ಸರಿಯಲ್ಲ. ದಯವಿಟ್ಟು ಕುಂಟು ನೆಪಗಳನ್ನು ನೀಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

io79vmgo

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read