ಕೆಲವರು ಎಷ್ಟೇ ಕಷ್ಟಪಟ್ಟರೂ ಅವರಿಗೆ ಏನೂ ಸಿಗುವುದಿಲ್ಲ, ಇನ್ನು ಕೆಲವರಿಗೆ ಕೆಲಸ ಮಾಡದಿದ್ದರೂ ಸಲೀಸಾಗಿ ಜಯ ಕಾಲ ಬುಡಕ್ಕೇ ಬಂದು ಬೀಳುತ್ತದೆ. ಅದನ್ನೇ ಸೂಚಿಸುವ ಕ್ರಿಕೆಟ್ ಪಂದ್ಯಾವಳಿಯ ವಿಡಿಯೋ ಒಂದು ವೈರಲ್ ಆಗಿದೆ.
ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ, ಬ್ಯಾಟರ್ ಚೆಂಡನ್ನು ಬೌಂಡರಿಗೆ ಹೊಡೆದಾಗ ಅದನ್ನು ಕ್ಯಾಚ್ ಮಾಡಲು ಸರ್ಕಸ್ ಮಾಡಿದ ಫೀಲ್ಡರ್ ಕೈಗೆ ಬಾಲ್ ಸಿಗುವುದಿಲ್ಲ. ಆದರೆ ಮುಂದೆ ಆದದ್ದು ಮಾತ್ರ ಕುತೂಹಲವಾಗಿದೆ.
ಆಗಿದ್ದೇನೆಂದರೆ, ಬ್ಯಾಟರ್ ಚೆಂಡನ್ನು ಹೊಡೆದಾಗ ಅದನ್ನು ಹಿಡಿಯಲು ಇಬ್ಬರು ಆಟಗಾರರು ಶ್ರಮವಹಿಸಿ ಓಡೋಡಿ ಹೋಗುತ್ತಾರೆ. ಅದನ್ನು ಹಿಡಿಯುವ ಪ್ರಯತ್ನ ಕೂಡ ಮಾಡುತ್ತಾರೆ. ಆದರೆ ಅದು ಕೈತಪ್ಪಿ ಹೋಗುತ್ತದೆ. ಆಗ ಅಲ್ಲಿಯೇ ನಿಂತಿದ್ದ ಇನ್ನೊಬ್ಬ ಆಟಗಾರ ಕಿಂಚಿತ್ ಕದಲುವುದೇ ಇಲ್ಲ. ನಿಂತಲ್ಲಿಯೇ ಬಂದು ಚೆಂಡು ಆತನ ಕೈಗೆ ಬಂದು ಬೀಳುತ್ತದೆ. ಅದನ್ನು ಆತ ಕ್ಯಾಚ್ ಹಿಡಿಯುತ್ತಾನೆ.
ಎಷ್ಟೋ ಮಂದಿಯ ಜೀವನ ಕೂಡ ಹೀಗೆಯೇ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಏನೂ ಕಷ್ಟಪಡದೇ ಯಶಸ್ಸು ಸಿಗೋದು ಎಂದರೆ ಇದೇ ಎಂದು ಹಲವರು ಹೇಳುತ್ತಿದ್ದಾರೆ.
— Out Of Context Cricket (@GemsOfCricket) March 22, 2023
Pak team should take coaching from these guys😂 pic.twitter.com/3sssgAZcGI
— अर्जून (@justachillguy55) March 22, 2023
— Out Of Context Cricket (@GemsOfCricket) March 22, 2023

