HomeKarnatakaನೃತ್ಯಗಾತಿಯ ನೃತ್ಯಕ್ಕೆ ಖುಷಿಯಾಗಿ ಆಶೀರ್ವಾದ ಮಾಡಿದ ಆನೆ: ವಿಡಿಯೋ ವೈರಲ್​

ನೃತ್ಯಗಾತಿಯ ನೃತ್ಯಕ್ಕೆ ಖುಷಿಯಾಗಿ ಆಶೀರ್ವಾದ ಮಾಡಿದ ಆನೆ: ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಕೆಲವು ಆಕರ್ಷಕ ವಿಷಯಗಳನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಆಗಾಗ್ಗೆ ಶೇರ್​ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ವಿಡಿಯೋ, ಅದೂ ಕರ್ನಾಟಕದ್ದು ಇದೀಗ ವೈರಲ್​ ಆಗಿದೆ.

ಕರ್ನಾಟಕದ ದೇವಸ್ಥಾನವೊಂದರ ಆನೆ ಹಾಗೂ ನೃತ್ಯಗಾತಿಯ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಏಕದಂತಾಯ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಈಕೆಯ ಹಿಂದೆ ಆನೆ ನಿಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನೆಗೆ ನರ್ತಕಿ ಬಗ್ಗಿ ನಮಸ್ಕಾರ ಮಾಡುತ್ತಿದ್ದಂತೆಯೇ ಆನೆ ತನ್ನ ಸೊಂಡಿಲಿನಿಂದ ಆಕೆಗೆ ಆಶೀರ್ವಾದ ಮಾಡಿದೆ. ನಂತರ ತಾನೂ ಹಾಡಿಗೆ ತಕ್ಕಂತೆ ತಲೆ ಅಲ್ಲಾಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದು ಕರ್ನಾಟಕದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಘಟನೆ ಎಂದು ಆನಂದ್​ ಮಹೀಂದ್ರಾ ಬರೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular