ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ 56ನೇ ಹುಟ್ಟುಹಬ್ಬದಂದು ಪ್ರ್ರಾರ್ಥನೆ ಸಲ್ಲಿಸಲು ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಕ್ಷಯ್ ಕುಮಾರ್ ಜೊತೆಯಲ್ಲಿ ಅವರ ಪುತ್ರ ಆರವ್, ಸಹೋದರಿ ಅಲ್ಕಾ ಹಿರಾನಂದಿನಿ ಸೋದರ ಸೊಸೆ ಸಿಮಾರ್ ಕೂಡ ಇರೋದನ್ನು ಕಾಣಬಹುದಾಗಿದೆ. ಇನ್ನೊಂದು ವಿಶೇಷ ಅಂದ್ರೆ ಕ್ರಿಕೆಟಿಗ ಶಿಖರ್ ಧವನ್ ಕೂಡ ಈ ಪೂಜೆಯಲ್ಲಿ ಭಾಗಿಯಾಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.
ಮಹಾಕಾಲ ಲೋಕ ಎಂದೂ ಕರೆಯಲ್ಪಡುವ ಉಜ್ಜಯಿನಿ ದೇವಸ್ಥಾನದ ನಂದಿ ಸಭಾಂಗಣದಲ್ಲಿ ಪ್ರಸಿದ್ಧ ಭಸ್ಮಾರತಿ ಸಮಯದಲ್ಲಿ ಅಕ್ಷಯ್ ಕುಮಾರ್ ಕುಟುಂಬ ಹಾಜರಿತ್ತು ಎನ್ನಲಾಗಿದೆ. ಮಹಾಕಾಲ ದೇಗುಲದಲ್ಲಿ ಬೆಳಗ್ಗೆ 4 ಗಂಟೆಗೆ ಭಸ್ಮಾರತಿ ಸಲ್ಲಿಸಲಾಗುತ್ತದೆ. ಈ ವಿಶೇಷ ಪೂಜೆ ಕಣ್ತುಂಬಿಕೊಳ್ಳುವ ಸಲುವಾಗಿ ಅಕ್ಷಯ್ ಕುಮಾರ್ ಕುಟುಂಬ ಬೆಳಗ್ಗೆ 2 ಗಂಟೆಗೆ ದೇವಸ್ಥಾನದಲ್ಲಿ ಹಾಜರಿತ್ತು.
ಇಡೀ ಹಾಲ್ನ್ನು ಅಕ್ಷಯ್ ಕುಮಾರ್ ಕುಟುಂಬ ಬುಕ್ ಮಾಡಿತ್ತು. ಇದೇ ವೇಳೆ ಅಕ್ಷಯ್ ಕುಮಾರ್ ಕುಟುಂಬ ಹಾಲ್ನ ಮುಂಭಾಗದಲ್ಲಿ ಕುಳಿತಿದ್ದ ಶಿಖರ್ ಧವನ್ರನ್ನು ಗಮನಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಕೇಸರಿ ಬಣ್ಣದ ಶಾಲು ಹಾಗೂ ಪಂಚೆ ಧರಿಸಿರೋದನ್ನು ಕಾಣಬಹುದಾಗಿದೆ. ಅಕ್ಷಯ್ ಕುಮಾರ್ ಕೊನೆಯದಾಗಿ 2021ರ ಅಕ್ಟೋಬರ್ ತಿಂಗಳಲ್ಲಿ ಈ ದೇಗುಲಕ್ಕೆ ಆಗಮಿಸಿದ್ದರು.
VIDEO | Bollywood actor @akshaykumar and cricketer @SDhawan25 visit Mahakaleshwar Temple in Madhya Pradesh's Ujjain. pic.twitter.com/gB0ijfyJHF
— Press Trust of India (@PTI_News) September 9, 2023


